ಫ್ರಿಟ್ಜ್ , ಪ್ರೆಗಿ (1869-1932) ೧೯೨೩
ಜರ್ಮನಿ-ರಸಾಯನಶಾಸ್ತ್ರ- ಅತ್ಯಲ್ಪ ಲಭ್ಯ ಪ್ರಮಾಣದಿಂದ ರಾಸಾಯನಿಕ ಸಂಯೋಜಕ ಘಟಕ, ಗುಣಗಳ ನಿರ್ಧಾರ ತಂತ್ರಗಳನ್ನು ರೂಪಿಸಿದಾತ.
ಪ್ರೆಗಿ 3 ಸೆಪ್ಟೆಂಬರ್ 1869ರಂದು ಲೈಯ್‍ಬಾಖ್‍ನಲ್ಲಿ ಜನಿಸಿದನು. ಸ್ಥಳೀಯ ಜಿಮ್ನಾಷಿಯಂನಲ್ಲಿ ಶಿಕ್ಷಣ ಮುಗಿಸಿದ ನಂತರ, ವೈದ್ಯಕೀಯದಲ್ಲಿ ಪದವಿ ಗಳಿಸಲು ಗ್ರಾಝ್ ವಿಶ್ವ ವಿದ್ಯಾಲಯ ಸೇರಿದನು. 1894ರಲ್ಲಿ ಡಾಕ್ಟರೇಟ್ ಗಳಿಸಿದ ಪ್ರೆಗಿ ವಿದ್ಯಾರ್ಥಿಯಾಗಿರುವಾಗಲೇ ಅಲೆಕ್ಸಾಂಡರ್ ಕೊಲೆಟ್ ಕೈಕೆಳಗೆ ಅಂಗಕ್ರಿಯಾ ಶಾಸ್ತ್ರ ಕಲಿಯುತ್ತಾ ಆತನ ಸಹಾಯಕನಾದನು. ಇಲ್ಲಿರುವಾಗಲೇ ಸ್ಕ್ರಾಯುಪ್‍ನ ನೆರಳಿನಲ್ಲಿ ರಸಾಯನಶಾಸ್ತ್ರದ ಎಲ್ಲಾ ಮಗ್ಗುಲುಗಳನ್ನು ಅರಿತನು. 1904ರಲ್ಲಿ ಜರ್ಮನಿಯ ಟುಬಿನ್‍ಜೆನ್‍ಗೆ ಹೋಗಿ ಸ್ವಲ್ಪ ಕಾಲ ಗುಸ್ತಾವ್ ವಿ ಹರ್ಫರ್ ಲೀಪ್‍ಜೆಗ್‍ನಲ್ಲಿ ಓಸ್ಡ್’ವಾಲ್ಡ್ , ಬರ್ಲಿನ್‍ನಲ್ಲಿ ಫಿûಷ್ಕರ್‍ನ ಕೆಳಗೆ ದುಡಿದನು. 1965ರಲ್ಲಿ ಕೆ.ಬಿ. ಹಾಫ್ಮನ್ ವೈದ್ಯ ರಾಸಾಯನಿಕ ಸಂಸ್ಥೆಯಲ್ಲಿ ಕೆಲಸ ಮಾಡಿದನು. ಹಾಫ್ಮನ್ 1907ರಲ್ಲಿ ಗ್ರಾಝ್ ವೃತ್ತದ ಕಾನೂನು ರಸಾಯ ತಜ್ಞನಾಗಿ ನೇಮಕಗೊಂಡನು. ಇಲ್ಲಿರುವಾಗ ಅಲ್ಯುಮಿನಿಯಂ, ಕಾಯ ಪಿತ್ತರಸಗಳ ಅಧ್ಯಯನ ಪ್ರಾರಂಭಿಸಿದನು. ಇದಕ್ಕೆ ಹಲವಾರು ವೈಜ್ಞಾನಿಕ ಅಡಚಣೆಗಳು ಎದುರಾದವು. ಅತ್ಯಲ್ಪ ಪ್ರಮಾಣದ ಲಭ್ಯ ರಾಸಾಯನಿಕ ಬಳಸಿ, ಪರಿಮಾಣಾತ್ಮಕ ವಿಶ್ಲೇಷಣೆ (Volumetric Analysis) ನಡೆಸುವ ವಿಧಾನಗಳ ಹುಡುಕಾಟದಲ್ಲಿ ಹಾಫ್ಮನ್ ನಿರತನಾಗಿದ್ದನು. 1910ರಿಂದ 1913ರವರೆಗೆ ಇನ್ಸ್‍ಬ್ರಿಕ್ ವಿಶ್ವವಿದ್ಯಾಲಯದಲ್ಲಿರುವಾಗ, ಪ್ರೆಗಿ ಹಾಫ್ಮನ್‍ಗೆ ಎದುರಾದ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದನು. 1913ರಲ್ಲಿ ಗ್ರಿಝ್ ವಿಶ್ವವಿದ್ಯಾಲಯಕ್ಕೆ ಮರಳಿದ ಪ್ರೆಗಿ ಅಲ್ಲಿ ವೈದ್ಯಕೀಯ ವಿಭಾಗದ ಮುಖ್ಯಸ್ಥನಾಗಿ, 1921ರಲ್ಲಿ “ವಿಶ್ವವಿದ್ಯಾಲಯದ ಕುಲಪತಿಯಾದನು. ಪ್ರೆಗಿಯ ಆರಂಭಿಕ ಸಂಶೋಧನೆಗಳು ಪಿತ್ತರಸವನ್ನು ಕುರಿತಾಗಿದ್ದವು. 1912ರಲ್ಲಿ 5 ಮಿ.ಲಿ. ರಸಕದಿಂದ (Serrum) ಅದರಲ್ಲಿನ ಘಟಕಗಳನ್ನು ನಿರ್ಧರಿಸುವ ಸೂಕ್ಷ್ಮ ವಿಧಾನಗಳನ್ನು ರೂಪಿಸಿದನು. ಇದಕ್ಕಾಗಿ ತಾನೇ ಹಲವಾರು ಬಹು ಸೂಕ್ಶ್ಮವಾದ ಉಪಕರಣಗಳನ್ನು ನಿರ್ಮಿಸಿದನು. ಇದಕ್ಕಾಗಿ 1914ರಲ್ಲಿ ವಿಯನ್ನಾದಲ್ಲಿರುವ ಇಂಪೀರಿಯಲ್ ಅಕಾಡೆಮಿ ಆಫ್ ಸೈನ್ಸ್‍ನಿಂದ ಲೀಬೆನ್ ಪ್ರಶಸ್ತಿ ಗಳಿಸಿದನು. 1920ರಲ್ಲಿ ಗಟ್ಟಿಂಜೆನ್ ಗೌರವ ಡಾಕ್ಟರೇಟ್ ಪ್ರೆಗಿಯನ್ನರಸಿ ಬಂದಿತು. 1920ರಲ್ಲಿ ಅತ್ಯಲ್ಪ ಲಭ್ಯ ಪ್ರಮಾಣದಿಂದ ರಾಸಾಯನಿಕ ಸಂಯೋಜಕ ಘಟಕ, ಗುಣಗಳ ನಿರ್ಧಾರಕ್ಕೆ ಪ್ರೆಗಿ ರೂಪಿಸಿದ ಮಾರ್ಗವನ್ನು ಗುರುತಿಸಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಪ್ರೆಗಿ 1930ರಲ್ಲಿ ಸಾಯುವುದಕ್ಕಿಂತ ಸ್ವಲ್ಪ ಮೊದಲು ಸಾವಯವ ರಸಾಯನ ರೂಪಿಸಲು ತನ್ನೆಲ್ಲಾ ಸಂಪತ್ತನ್ನು,. ದೇಣಿಗೆಯಾಗಿ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸ್‍ಸ್‍ಗೆ ನೀಡಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019