অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಫ್ರಾನ್ಸಿಸ್, ವಿಲಿಯಂ ಆಸ್ಟನ್

ಫ್ರಾನ್ಸಿಸ್, ವಿಲಿಯಂ ಆಸ್ಟನ್

ಫ್ರಾನ್ಸಿಸ್, ವಿಲಿಯಂ ಆಸ್ಟನ್ (1877-1945)     ೧೯೨೨

ಇಂಗ್ಲೆಂಡ್-ರಸಾಯನಶಾಸ್ತ್ರ-ಸಮಸ್ಥಾನಿಗಳ (Isotope ) ವಿಸ್ತೃತ ಅಧ್ಯಯನ ನಡೆಸಿದಾತ.

ಫ್ರಾನ್ಸಿಸ್, ಬರ್ಮಿಂಗ್‍ಹ್ಯಾಮ್‍ನ ಹಾರ್‍ಬೊರ್ನ್‍ನಲ್ಲಿ ಏಳು ಜನ ಮಕ್ಕಳ ಕುಟುಂಬದಲ್ಲಿ ಮೂರನೆಯವನಾಗಿ ಜನಿಸಿದನು.  ಹಾರ್‍ಬೊನ್‍ನಲ್ಲಿ ವಿಕರೇಜ್  ಶಾಲೆ ಮತ್ತು ಮ್ಯಾಲವೆರ್ನ್ ಕಾಲೇಜಿನಲ್ಲಿರುವಾಗ ಫ್ರಾನ್ಸಿಸ್‍ಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿತು. 1894ರಲ್ಲಿ ಈಗ ಬರ್ಮಿಂಗ್‍ಹ್ಯಾಂ ವಿಶ್ವವಿದ್ಯಾಲಯವೆಂದು ಹೆಸರಾಗಿರುವ ಆಗಿನ ಮೇಸನ್ ಕಾಲೇಜ್‍ನಲ್ಲಿ ಓದಿದನು.  ಇಲ್ಲಿ ಫ್ರಾಂಕ್‍ಲ್ಯಾಂಡ್ ಹಾಗೂ ಟೆಲ್ಡೆನ್ ಕೈ ಕೆಳಗೆ ರಸಾಯನಶಾಸ್ತ್ರವನ್ನು ಪಾಯಿಟಿಂಗ್ ಮಾರ್ಗದರ್ಶನದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದನು. 1898ರಲ್ಲಿ ಫಾಸ್ಟರ್ ವಿದ್ಯಾರ್ಥಿ ವೇತನ ಗಳಿಸಿ, ಟಾರ್ಟಾರಿಕ್ ಆಮ್ಲ ಹಾಗೂ ಅದರ ಉತ್ಪನ್ನಗಳ ದೃಗ್ ಗುಣಗಳ ಬಗೆಗೆ ಸಂಶೋಧನೆ ನಡೆಸಿದನು.  ಇದರ ಫಲಿತಾಂಶಗಳನ್ನು 1901 ರಲ್ಲಿ ಪ್ರಕಟಿಸಿದನು.  ಇದರ ನಂತರ ಮುಂದೆ ಮೂರು ವರ್ಷಗಳ ಕಾಲ ಮಧ್ಯ ತಯಾರಿಕಾ ಕಾರ್ಖಾನೆಯಲ್ಲಿ ರಸಾಯನಶಾಸ್ತ್ರಜ್ಞನಾಗಿ ಕೆಲಸ ಮಾಡಿದನು.  ಗಣಿತದಲ್ಲಿ ಪರಿಣಿತಿ ಹೊಂದಿದ್ದ ಫ್ರಾನ್ಸಿಸ್‍ಗೆ ಭೌತಶಾಸ್ತ್ರ ಬಹು ಪ್ರಿಯವಾದ ವಿಷಯವಾಗಿದ್ದಿತು.  ಹಲವಾರು ಬಗೆಯ ಪಂಪ್‍ಗಳನ್ನು ಸಹ ಈತ ವಿನ್ಯಾಸಗೊಳಿಸಿದ್ದನು. ಪಂಪ್‍ಗಳೊಂದಿಗೆ ಕೆಲಸ ಮಾಡುವಾಗ ಕೊಳವೆ ಮಾರ್ಗಗಳಲ್ಲಿನ ನಿರ್ವಾತ ಸ್ಥಿತಿ, ಫ್ರಾನ್ಸಿಸ್‍ನ ಗಮನ ಸೆಳೆಯಿತು. 1903ರಲ್ಲಿ ಬರ್ಮಿಂಗ್‍ಹ್ಯಾಂ ವಿಶ್ವವಿದ್ಯಾಲಯಕ್ಕೆ ಮರಳಿ ವಿಸರ್ಜನಾ ನಳಿಕೆಯಲ್ಲಿ ಪ್ರಯೋಗಗಳನ್ನು ನಡೆಸತೊಡಗಿದನು.  ಈ ಪ್ರಯೋಗಗಳಿಂದ ನಿರ್ವಾತ ಕೊಳವೆಗಳಲ್ಲಿ ಈಗ ಅ್ಯಸ್ಟನ್ ಗಾಢ ಪ್ರದೇಶವೆಂದು ಕರೆಯಲಾಗುವ ವಿದ್ಯಾಮನವನ್ನು ಅನಾವರಣಗೊಳಿಸಿದನು. 1909ರಲ್ಲಿ ಜೆ.ಜೆ.ಥಾಮ್ಸನ್‍ನಿಂದ ಬಂದ ಆಹ್ವಾನವನ್ನು ಒಪ್ಪಿ ಕೇಂಬ್ರಿಜ್‍ನ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಅವನ ಸಹಾಯಕನಾದನು.  ಇಲ್ಲಿ ನಿಯಾನ್ ಅನಿಲಕ್ಕೆ ಎರಡು ಸಮಸ್ಥಾನಿಗಳಿರುವುದಕ್ಕೆ ಖಚಿತ ಪುರಾವೆ ಒದಗಿಸಿದನು.  ಮೊದಲನೆ ಜಾಗತಿಕ ಯುದ್ದ ಪ್ರಾರಂಭವಾದಾಗ ರಾಯಲ್ ಏರ್‍ಕ್ರಾಪ್ಟ್ ಎಸ್ಟಾಬ್ಲಿಷ್‍ಮೆಂಟ್ ಸೇರಿ, ವಿಮಾನಗಳ ನೋದಕಕಗಳ (Propelleant) ಅಧ್ಯಯನ ನಡೆಸಿದನು. 1919ರಲ್ಲಿ ಕ್ಯಾವೆಂಡಿಷ್ ಪ್ರಯೋಗಾಲಯ ಸೇರಿ ನಿಯಾನ್ ಅನಿಲದ ಸಮಸ್ಥಾನಿಗಳನ್ನು ಬೇರ್ಪಡಿಸಲು ಯತ್ನಿಸಿದನು.  ದ್ರವ್ಯ ರೋಹಿತಾಲೇಖಕ್ಕೆ (Mass Spectrometer) ಹೊಸ ಸಾಧನ ನಿರ್ಮಿಸಿ, ಇದರ ನೆರವಿನಿಂದ ನಿಯಾನ್‍ನ ಸಮಸ್ಥಾನಿಗಳನ್ನು ಬೇರ್ಪಡಿಸುವಲ್ಲಿ ಯಶಸ್ಸನ್ನು ಕಂಡನು.  ಇದನ್ನು ಬೇರೆ ಅನಿಲ, ಧಾತುಗಳಿಗೂ, ಅನ್ವಯಿಸಿ ಸುಮಾರು 212 ಸಮಸ್ಥಾನಿಗಳ ಅಳತೆ ಮಾಡಿದನು. ಇದರ ¥sóÀಲಿತಾಂಶವಾಗಿ ಪೂರ್ಣಾಂಕ ನಿಯಮ ನೀಡಿದನು.  ಈ ನಿಯಮದಂತೆ ಆಮ್ಲಜನಕ ಸಮಸ್ಥಾನಿಗಳನ್ನು ಮೂಲವಾಗಿರಿಸಿಕೊಂಡರೆ, ಉಳಿದ ಸಮಸ್ಥಾನಿಗಳ ದ್ರವ್ಯ ಪೂರ್ಣಾಂಕದಲ್ಲಿರುತ್ತದೆ.  ಈ ನಿಯಮ ಮುಂದೆ ಪರಮಾಣು ಚೈತನ್ಯದ ಅಧ್ಯಯನದಲ್ಲಿ ನೆರವಾಯಿತು. 1922ರಲ್ಲಿ ಸಮಸ್ಥಾನಿಗಳನ್ನು ಕುರಿತಾಗಿ ಪುಸ್ತಕ ಪ್ರಕಟಿಸಿದನು.   ಸಮಸ್ಥಾನಿಗಳ ಬಗೆಗೆ ನಡೆಸಿದ ಸಂಶೋಧನೆಗಳಿಗಾಗಿ 1921ರ ನೊಬೆಲ್ ಪ್ರಶಸ್ತಿಯಿಂದ     ಫ್ರಾನ್ಸಿಸ್ ಸನ್ಮಾನಿತನಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 6/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate