ಫಿಷರ್, ಹ್ಯಾನ್ಸ್ (1881-1945)
ಜರ್ಮನಿ-ಸಾವಯವ ರಸಾಯನಶಾಸ್ತ್ರ ಪಾರ್ಫೆರಿನ್ಸ್’ಗಳನ್ನು ಸಂಶ್ಲೇಷಿಸಿದಾತ.
ಫಿûಷರ್ ,ಮಾರ್‍ಬರ್ಗ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಮ್ಯೂನಿಕ್‍ನಲ್ಲಿ ವೈದ್ಯಕೀಯ ಅಭ್ಯಸಿಸಿದನು. 1921ರಲ್ಲಿ ಅಲ್ಲಿ0iÉುೀ ಸಾವಯವ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಎರಡನೇ ಜಾಗತಿಕ ಯುದ್ದದ ಅಂತಿಮ ದಿನಗಳಲ್ಲಿ ಬಾಂಬ್ ದಾಳಿಗೆ, ಫಿûಷರ್ ಪ್ರಯೋಗಾಲಯ ತುತ್ತಾಗಿ ಅವನು ಮರಣಹೊಂದಿದನು. ಫಿûಷರ್ ಬಹುತೇಕವಾಗಿ ಪಾರ್ಫೈರಿನ್ ಸಂಯುಕ್ತಗಳು ವಿಶ್ಲೇಷಣೆಯಲ್ಲಿ ನಿರತನಾಗಿದ್ದನು. ಪಾರ್ಫೈರಿನ್‍ಗಳು ಬಹು ಸಂಕೀರ್ಣವಾದ ಪ್ರಯೋಗಗಳಿಗೆ ಒಳಪಡಿಸಲು ಕಠಿಣವಾದ ರಾಸಾಯನಿಕಗಳು ಫಿûಷರ್ ರಕ್ತದಪ್ರೋಟೀನೇತರ ಕೆಂಪು ಬಣ್ಣ ,ಹೆಮಿನ್ ಬಗ್ಗೆ ಅರಿ0iÀiಲು ಸಾಕಷ್ಟು ಶ್ರಮಿಸಿದನು. ಹೆಮಿನ್ ಶ್ವಾಸಕೋಶದಿಂದ , ಅಂಗಾಂಶಗಳಿಗೆ ರಕ್ತದ ಮೂಲಕ ಆಮ್ಲಜನಕವನ್ನು ವರ್ಗಾಯಿಸುತ್ತದೆ. ಹೆಮಿನ್‍ನ ಸಂಪೂರ್ಣ ರಚನೆಯನ್ನು ಅರಿತ ಫಿûಶರ್ 1929ರಲ್ಲಿ ಅದನ್ನು ಸಂಶ್ಲೇಷಿಸಿದನು. ಸಸ್ಯಗಳ ದ್ಯುತಿ ಸಂಶ್ಲೇಷಣೆಯಲ್ಲಿ (Photosynthesis) ಪ್ರಮುಖ ಪಾತ್ರವಹಿಸುವ ಹರಿತ್ತುಗಳ ಅಧ್ಯಯನದಲ್ಲೂ ಶ್ರಮಿಸಿದನು. ಸಸ್ಯಗಳಲ್ಲಿರುವ ಹರಿತ್ತು (Chlorophyll) ರಕ್ತದಲ್ಲಿರುವ ಹೆಮಿನ್‍ಗೆ ಸಂವಾದಿಯಾಗಿರುವ ಅಣುರಚನೆಯಲ್ಲಿ ಕಬ್ಬಿಣದ ಬದಲು ಮೆಗ್ನೇಶಿಯಂ ಹೊಂದಿರುವ ಪಾರ್ಫೈರಿನ್ ಎಂದು ಸಾಬೀತುಗೊಳಿಸಿದನು ಫಿûಷರ್ ಪಾರ್ಫೈರಿನ್ ಬಗೆಗೆ ನಡೆಸಿದ ಸಂಶೋಧನೆಗಳನ್ನು ಗುರುತಿಸಿ 1944ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019