ವೆರ್ನರ್, ಅಲ್ಫ್ರೆಡ್ (1866-1919) ೧೯೧೩
ಜರ್ಮನಿ-ಸ್ವಿಟ್ಸಲ್ರ್ಯಾಂಡ್ - ನಿರವಯವ ರಸಾಯನಶಾಸ್ತ್ರಜ್ಞ. ಸಮನ್ವಯ ಸಂಯುಕ್ತಗಳ ಆಧುನಿಕ ಸಿದ್ಧಾಂತ ಸ್ಥಾಪಿಸಿದಾತ.
ಫ್ರಾನ್ಸ್ ವಶದಲ್ಲಿದ್ದ ಅಲಾಸೇಸ್‍ನಲ್ಲಿ ವೆರ್ನರ್ ಜನಿಸಿದನು. ವೆರ್ನರ್ ನಾಲ್ಕು ವರ್ಷದವನಿರುವಾಗ ಅಲಾಸೇಸ್ ಜರ್ಮನಿಯ ವಶಕ್ಕೆ ಬಂದಿತು. 1919ರಲ್ಲಿ ಮತ್ತೊಮ್ಮೆ ಫೆ್ರಂಚರ ವಶವಾಯಿತು. ಇದರಿಂದ ಫ್ರೆಂಚ್ ಹಾಗೂ ಜರ್ಮನ್ ಸಂಸ್ಕೃತಿಗಳೆರಡೂ ವೆರ್ನರ್’ನನ್ನು ಪ್ರಭಾವಿಸಿದವು. ನೆಲಮಾಳಿಗೆಯ ಅನಾರೋಗ್ಯಕರ ವಾತಾವರಣದಲ್ಲಿ ಸತತ ಅಧ್ಯಯನ ನಡೆಸಿದ ಸಾಹಸಿ ವೆರ್ನರ್. ಆದರೆ ವೆರ್ನರ್ ಲೇಖನಗಳು ಜರ್ಮನಿಯಲ್ಲಿದ್ದವು. 20 ನೇ ವಯಸ್ಸಿನಿಂದ ಸ್ವಿಟ್ಸಲ್ರ್ಯಾಂಡ್‍ನಲ್ಲಿದ್ದ ವೆರ್ನರ್ ಝೂರಿಕ್‍ನಿಂದ ಪದವಿ ಗಳಿಸಿ, 1895ರಲ್ಲಿ ಪ್ರಾಧ್ಯಾಪಕನಾದನು. ಸಾರಜನಕ ಕೇಂದ್ರದಲ್ಲಿರುವ ರಾಸಾಯನಿಕಗಳ ರಾಚನಿಕ ಸ್ವರೂಪದ ಬಗೆಗೆ ಅಧ್ಯಯನ ನಡೆಸಿ, ವೆರ್ನರ್ ಡಾಕ್ಟರೇಟ್ ಗಳಿಸಿದನು. ಸಹಸಂಯೋಗತ್ವದ ಬಂಧಕ್ಕೆ (Covalent Bond)ನಿರ್ದಿಷ್ಟ ದಿಕ್ಕುಗಳಿರುತ್ತವೆ. ಮಿಥೇನ್ ಅಣುವಿನಲ್ಲಿ ಇಂಗಾಲದ ಪರಮಾಣು ಕ್ರಮ ಚತುರ್ಮುಖ (Regular Terahedron) ಕೇಂದ್ರದಲ್ಲಿದೆ. ನಾಲ್ಕು ಜಲಜನಕದ ಪರಮಾಣುಗಳು ಈ ಚತುರ್ಮುಖಿಯ ಶೃಂಗಗಳಲ್ಲಿವೆ. ಇಂಗಾಲದ ಪರಮಾಣುವೂ ಪ್ರತಿಯೊಂದು ಜಲಜನಕದ ಪರಮಾಣುವಿನೊಂದಿಗೆ 109028” ಕೋನದಲ್ಲಿ ಬಂಧಿತವಾಗಿದೆ. ಆದ್ದರಿಂದ ಇಂತಹ ಸಂಯುಕ್ತಗಳ ಸಂಯೋಗತ್ವ ಮೂರು ಆಯಾಮಗಳಲ್ಲಿರಬಲ್ಲದು. ವೆರ್ನರ್ ಈ ಆಧಾರದ ಮೇಲೆ ಕ್ರೋಮಿಯಂ ಕೋಬಾಲ್ಟ್ ಹಾಗೂ ರೋಡಿಯಂಗಳ ದ್ಯುತಿಪಟು ಸಂಯುಕ್ತಗಳನ್ನು(Photoactive) ಅನಾವರಣಗೊಳಿಸಿದನು. ಇದಕ್ಕೆ ಬೇಕಾದ ಸೈದ್ಧಾಂತಿಕ ದೃಷ್ಟಿ ತನಗೆ ಕನಸಿನಲ್ಲಿ ವೇದ್ಯವಾಯಿತೆಂದು ವೆರ್ನರ್ ಹೇಳಿದ್ದಾನೆ. 1892 ರಿಂದ ಲೋಹಗಳ ಸಂಯುಕ್ತಗಳ ಬಗೆಗೆ ವೆರ್ನರ್ ಅಧ್ಯಯನ ನಡೆಸಿದನು. ಇವುಗಳಲ್ಲಿ ಬಹುತೇಕ ರಾಸಾಯನಿಕಗಳಿಗೆ ಸರಿಯಾದ ರಾಚನಿಕ ವಿವರಣೆ, ಸಂಯೋಗ ಸಾಮಥ್ರ್ಯಗಳ ವಿವರಣೆ ಇರಲಿಲ್ಲ, ವೆರ್ನರ್ ಇವೆಲ್ಲವುಗಳಿಗೆ ಹೊಸ ದೃಷ್ಟಿ ಒದಗಿಸಿದನು. ಪರಿವರ್ತನೀಯ ಲೋಹದ ಪರಮಾಣುವಿಗೆ ಕೇಂದ್ರಿಯ ಹಾಗೂ ದ್ವಿತೀಯ ಸಂಯೋಗ ಸಾಮಥ್ರ್ಯವಿದೆಯೆಂದು ವೆರ್ನರ್ ತಿಳಿಸಿದನು. ಇವುಗಳನ್ನು ಲಿಂಗ್ಯಾಂಡ್ಸ್ ಎಂದು ಕರೆದನು. ಇಪ್ಪತ್ತು ವರ್ಷಗಳ ಕಾಲ ಈ ಸಿದ್ಧಾಂತ ರೂಪಿಸಲು ಶ್ರಮಿಸಿದ ವೆರ್ನರ್, ಅದರಲ್ಲಿ ಯಶಸ್ಸನ್ನು ಕಂಡನು. 1913ರಲ್ಲಿ ವೆರ್ನರ್ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019