ರಿಚರ್ಡ್ಸ್, ಥಿಯೋಡೊರ್ ವಿಲಿಯಂ (1868-1928) ೧೯೧೪
ಅಸಂಸಂ-ವೈಶ್ಲೇಷಿಕ ರಸಾಯನಶಾಸ್ತ್ರ (Analytical Chemistry) - ವೈಶ್ಲೇಷಿಕ ವಿಧಾನಗಳಿಂದ ಸಾಪೇಕ್ಷ ಅಣುತೂಕ (Relative Molecular Weight) ನಿರ್ಧರಿಸಿದಾತ.
ರಿಚಡ್ರ್ಸ್ ಹದಿನಾಲ್ಕು ವರ್ಷದ ಕಿಶೋರನಾಗಿದ್ದಾಗಲೇ ಖಗೋಳಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದನು. ಆದರೆ ಆತನ ದೃಷ್ಟಿ ಚುರುಕಾಗಿರಲಿಲ್ಲದ್ದರಿಂದ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗಕ್ಕೆ ಸೇರಿದನು. ಹಾರ್ವರ್ಡ್‍ನಲ್ಲಿ ಪದವಿ ಗಳಿಸಿ, ಹೆಚ್ಚಿನ ಜ್ಞಾನಾರ್ಜನೆಗೆ ಯುರೋಪಿಗೆ ಭೇಟಿ ಇದ್ದನು. ಗಟ್ಟಿಂಜೆನ್‍ಲ್ಲಿ ಪ್ರಾಧ್ಯಾಪಕನಾಗುವಂತೆ ರಿಚರ್ಡ್ಸ್’ಗೆ ಆಹ್ವಾನವೀಯಲಾಯಿತು. ಇದನ್ನು ಒಪ್ಪದೆ, ರಿಚಡ್ರ್ಸ್ ಹಾರ್ವರ್ಡ್‍ಗೆ ಮರಳಿದನು. ಇಲ್ಲಿ ರಿಚಡ್ರ್ಸ್ ರಾಸಾಯನಿಕಗಳ ಅಣು ತೂಕವನ್ನು ಸರಿಯಾಗಿ ಅಳೆಯುವ ಸಾಧ್ಯತೆಗಳಿಗೆ ಯತ್ನಿಸಿ ಅದರಲ್ಲಿ ಅಪಾರ ಯಶಸ್ಸನ್ನು ಕಂಡನು. ರಿಚಡ್ರ್ಸ್ 25 ಧಾತುಗಳ ಹಾಗೂ ಆತನ ಸಂಗಡಿಗರು 40 ಧಾತುಗಳ ಅಣುತೂಕವನ್ನು ಪಡೆದು, ಪರಿಮಾಣಾತ್ಮಕ ರಸಾಯನಶಾಸ್ತ್ರಕ್ಕೆ (Volumetric Chemistry) ಭದ್ರ ಬುನಾದಿ ಹಾಕಿದರು. 1913ರಲ್ಲಿ ರಿಚಡ್ರ್ಸ್ ಸಾಮಾನ್ಯ ಸೀಸ ಹಾಗೂ ಯುರೇನಿಯಂ ವಿಕಿರಣಪಟು ಶೈಥಿಲ್ಯದಿಂದ ದಕ್ಕಿದ ಸೀಸದ ಅಣುತೂಕಗಳಲ್ಲಿ ವ್ಯತ್ಯಾಸ ಇದೆಯೆಂದು ತೋರಿಸಿದನು. ಇದು ವಿಕಿರಣ ಶೈಥಿಲ್ಯತೆಗೆ ಸಾಕ್ಷಿ ನೀಡಿತಲ್ಲದೆ ಸಾಡಿ ಮುನ್ಸೂಚಿಸಿದಂತೆ ಧಾತುಗಳ ಸಮಸ್ಥಾನಿಗಳ ಅಸ್ತಿತ್ವಕ್ಕೆ ಪ್ರಮಾಣವಾಯಿತು. ರೋಹಿತ ಮಾಪಕದಿಂದ, ಅತ್ಯುತ್ತಮವಾದ ಭೌತಿಕ ವಿಧಾನಗಳು ಜಾರಿಗೆ ಬರುವವರೆಗೆ ರಿಚಡ್ರ್ಸ್ ವಿಧಾನಗಳೇ ಅಣು ತೂಕದ ನಿರ್ಧಾರಕ್ಕೆ ಅತ್ಯುತ್ತಮ ಮಾರ್ಗಗಳಾಗಿದ್ದವು. 1914ರಲ್ಲಿ ರಿಚಡ್ರ್ಸ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/20/2020