ಪೌಲ್, ಸಬಾಟೀರ್ (1854-1941) ೧೯೧೨
ಫ್ರ್ರಾನ್ಸ್-ರಸಾಯನಶಾಸ್ತ್ರ- ತೈಲ ಜಲಜನಕೀಕರಣ (Oil Hydrogenation) ಹಾಗೂ ಮೆಥಾನಲ್ ಸಂಶ್ಲೇಷಣಾ ಕೈಗಾರಿಕೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಾತ.
ಸಬಾಟೀರ್ 5 ನವೆಂಬರ್ 1854 ರಂದು ದಕ್ಷಿಣ ಫ್ರಾನ್ಸ್’ನಲ್ಲಿದ್ದ ಕ್ಯಾರಕಾಸೋನ್‍ನಲ್ಲಿ ಜನಿಸಿದನು. ಎಕೊಲೆ ನಾರ್ಮಲೆ, ಎಕೊಲೆ ಸುಪೀರಿಯರ್‍ನಲ್ಲಿ ಪ್ರವೇಶ ಗಳಿಸಿದ ಸಬಾಟೀರ್ ಎಕೊಲೆ ಸುಪೀರಿಯರ್‍ಗೆ 1874ರಲ್ಲಿ ಸೇರಿದನು. ಮೂರು ವರ್ಷಗಳ ನಂತರ ಪದವಿ ಮುಗಿಸಿ, 1878ರಲ್ಲಿ ಕಾಲೇಜ್ ಡಿ ಫ್ರಾನ್ಸ್’ನಲ್ಲಿದ್ದ ಬರ್ಥೆಲೊಟ್‍ಗೆ ಸಹಾಯಕನಾದನು. 1880ರಲ್ಲಿ ಡಾಕ್ಟರೇಟ್ ಗಳಿಸಿದ ಸಬಾಟೀರ್ ಬೊರಾಡೆಯರ್ಸ್‍ನ ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರದಲ್ಲಿ ವಿಭಾಗದ ಸಿಬ್ಬಂದಿಯಾದನು. 1882ರಲ್ಲಿ ಟಾಲೋಯಸ್ ವಿಶ್ವವಿದ್ಯಾಲಯದಲ್ಲಿ ಇದೇ ಹುದ್ದೆಯನ್ನರಸಿ ಹೋದನು. 1884ರಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ ಆಯ್ಕೆಗೊಂಡನು. ಸಬಾಟೀರ್‍ನ ಆರಂಭಿಕ ಸಂಶೋಧನೆಗಳು ಗಂಧಕ ಹಾಗೂ ಲೌಹಿಕ ಸಲ್ಫೇಟ್‍ಗಳ ಔಷ್ಣೀಯ ರಸಾಯನಶಾಸ್ತ್ರದ ಮೇಲೆ ಕೇಂದ್ರಿಕೃತವಾಗಿದ್ದವು. ಸಲ್ಫೇಡ್, ಕ್ಲೋರೈಡ್, ಕ್ರೋಯೇಟ್‍ಗಳ ಭೌತ ರಾಸಾಯನಿಕ ಗುಣ ಧರ್ಮಗಳ ಅಧ್ಯಯನವನ್ನು ಸಹ ಸಬಾಟೀರ್ ಮಾಡಿದನು. ಕ್ರಿಯಾವರ್ಧಕ ವಿದ್ಯಾಮಾನ ಕುರಿತಾದ ಪ್ರಯೋಗ ನಡೆಸಿದ ಸಬಾಟೀರ್ ರಾಸಾಯನಿಕ ಕ್ರಿಯಾ ಸಿದ್ಧಾಂತ ಮಂಡಿಸಿದನು. ಸಣ್ಣಗೆ ಅರೆದ ಲೋಹದ ಜಲಜನಕೀಕರಣದಲ್ಲಿ (Hydrogenation)ನೆರವಾಗುವ ವೇಗ ವರ್ಧಕಗಳನ್ನು (Catalyst) ಕಂಡು ಹಿಡಿದ ಸಬಾಟೀರ್ ಮಾರ್ಗರೇನ್, ತೈಲ ಹೈಡ್ರೋಜೆನೇಷನ್ ಹಾಗೂ ಮೆಥಾನಲ್ ಸಂಶ್ಲೇಷಣಾ ಕೈಗಾರಿಕೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದನು. ಲಾಕ್ಟಟಲೈಸ್ ಎನ್ ಖಿಮಿ ಅಗ್ರ್ಯಾನಿಕ್ ಎಂಬ ಪ್ರೌಢ ಕೃತಿಯನ್ನು ಸಹ ಸಬಾಟೀರ್ 1913ರಲ್ಲಿ ಪ್ರಕಟಿಸಿದನು. ಸಬಾಟೀರ್ಫೆ್ರಂಚ್ ವಿಜ್ಞಾನ ಅಕಾಡೆಮಿಯ ಸದಸ್ಯನಾಗಿದ್ದನು. ಲಂಡನ್ ರಾಯಲ್ ಸೊಸೈಟಿ. ಫಿಲೆಡೆಲ್ಫಿಯಾ “ವಿಶ್ವವಿದ್ಯಾಲಯ , ನೆದರ್’ಲ್ಯಾಂಡ್ರಾಯಲ್ ಸೊಸೈಟಿಯಿಂದ ಸಬಾಟೀರ್ ಗೌರವಿತನಾಗಿದ್ದನು. 1912ರಲ್ಲಿ ಸಬಾಟೀರ್ ರಸಾಯನ ಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/19/2020