ಗ್ರೀನ್‍ಯಾರ್,(ಫ್ರಾಂಕೋಯಿಸ್ ಅಗಸ್ಟ್) ವಿಕ್ಟರ್(1871-1935)
ಫ್ರಾನ್ಸ್-ಸಾವಯವ ರಸಾಯನಶಾಸ್ತ್ರ-ಸಂಶ್ಲೇಷಣೆಯಲ್ಲಿ ಸಾವಚಿiÀುವ ಮೆಗ್ನೇಶಿಯಂ ಸಂಯುಕ್ತಗಳ ಬಳಕೆ ಅನಾವರಣಗೊಳಿಸಿದಾತ.
ಗ್ರೀನ್‍ಯಾರ್ ಲಿಯಾನ್‍ನಲ್ಲಿ ವಿದ್ಯಾಭ್ಯಾಸ ಮಾಡಿ, ಗಣಿತದ ಬೋಧಕನಾದನು. ನಂತರ ಗ್ರೀನ್‍ಯಾರ್, ರಸಾಯನಶಾಸ್ತ್ರದಲ್ಲಿ ಆಸಕ್ತನಾಗಿ ಪಿ.ಎ.ಬಾರ್ಬಿಯರ್ ಮಾರ್ಗದರ್ಶನದಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಆದರೆ ಗ್ರೀನ್‍ಯಾರ್‍ಗೆ ಸಂಶೋಧನೆಗೆ ಅಂತಹ ಉತ್ತಮ ವಿಷಯವೇನೂ ದಕ್ಕಲಿಲ್ಲ. ಪ್ರತಿಕ್ರಿಯಾಶೀಲ ಸಾವಯವ ಹ್ಯಾಲೋಜೆನ್‍ಗಳೊಂದಿಗೆ , ಒಣ ಡೈ ಈಥೈಲ್ ಈಥರ್ ದ್ರಾವಣದಲ್ಲಿ ಮೆಗ್ನೀಶಿಯಂ ಸಂಯೋಜನೆಗೊಳ್ಳುವುದೆಂದು ಗ್ರೀನ್‍ಯಾರ್‍ಗೆ ತಿಳಿಯಿತು. ಇವುಗಳನ್ನು ಪ್ರತ್ಯೇಕಿಸದೆ, ಹಲವಾರು ಕಾರ್ಬೊನಿಲ್ ಮತ್ತಿತರ ಸಂಯುಕ್ತಗಳೊಂದಿಗೆ ಪ್ರತಿಕ್ರಿ0iÉುಗೊಳಿಸಿ ಸಾವಯವ ಆಲ್ಕೋಹಾಲ್‍ಗಳನ್ನು ಪಡೆಯುವುದು ಸಾಧ್ಯ. ಈ ವಿಧಾನಗಳು ಸಾವಯವ ಸಂಶ್ಲೇಷಣೆಯಲ್ಲಿ ಕ್ರಾಂತಿಯನ್ನೇ ತಂದವು. ಮೊದಲ ಜಾಗತಿಕ ಯುದ್ದದಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಗ್ರೀನ್‍ಯಾರ್‍ಗೆ ರೈಲ್ವೇ ಸೇತುವೆ ಕಾಯುವ ಕೆಲಸಕ್ಕೆ ನಿಯೋಜಿಸಲಾಯಿತು,. ಆದರೆ ಕೆಲಕಾಲದ ನಂತರ ಅವನನ್ನು ರಾಸಾಯನಿಕ ಅಸ್ತ್ರ ತಯಾರಿಕೆಯ ಕಾರ್ಖಾನೆಗೆ ವರ್ಗಾಯಿಸಲಾಯಿತು. ಇಲ್ಲಿ ಮಸ್ಟರ್ಡ್ ಅನಿಲದ ಪತ್ತೆ ಹಚ್ಚಿಕೆ, ಪಾಸ್ಜೀನ್ ತಯಾರಿಕೆಯಲ್ಲಿ ಗ್ರೀನ್‍ಯಾರ್ ನಿರತನಾದನು. 1919ರಲ್ಲಿ ಬಾರ್ಬಿಯರ್ ತೆರವುಗೊಳಿಸಿದ, ಹುದ್ದೆಯನ್ನು ಗ್ರೀನ್‍ಯಾರ್ ಅಲಂಕರಿಸಿದನು. 1912ರಲಿ ಗ್ರೀನ್‍ಯಾರ್ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020