ಹಾಫ್ , ಜಾಕೊಬಸ್, ಹೆನ್ರಿಕಸ್ ವಾನ್ ಟಿ (1852-1911)
ನ್ಮಾರ್ಕ್-ಭೌತ ರಸಾಯನಶಾಸ್ತ್ರ- ತ್ರಿದಿಶಾ ರಸಾಯನಶಾಸ್ತ್ರದ (StereoChemistry) ಸ್ಥಾಪಕ.
ಹಾಫ್ ಶ್ರೀಮಂತ ವೈದ್ಯ ದಂಪತಿಗಳ ಮಗ. ಹದಿನೇಳನೇ ವಯಸ್ಸಿನಲ್ಲಿದ್ದಾಗ ತಾನು ರಸಾಯನಶಾಸ್ತ್ರ ಓದುವದಾಗಿ ಹೇಳಿದನು. ಇದಕ್ಕೆ ತಂದೆ ತಾಯಿಗಳಿಂದ ಪೂರಕ ಪ್ರೇರಕ ಬೆಂಬಲ ದೊರೆಯಲಿಲ್ಲ. ಹಾಫ್, ತಂದೆ ತಾಯಿಗಳ ವಿರೋಧ ಲೆಕ್ಕಿಸದೆ ಡೆಲ್ಫ್ಟಾ ಪಾಲಿಟೆಕ್ನಿಕ್ ಸೇರಿ ಡಿಪ್ಲೊಮಾ ಗಳಿಸಿದನು. ಮುಂದೆ ಲೀಡೆನ್, ಬಾನ್, ಪ್ಯಾರಿಸ್‍ನಲ್ಲಿ ರಸಾಯನಶಾಸ್ತ್ರದ ವಿದ್ಯಾಭ್ಯಾಸ ಮುಂದುವರೆಸಿದನು. 22ನೇ ವಯಸ್ಸಿನಲ್ಲಿ ತಾಯ್ನಾಡಿಗೆ ಹಿಂದಿರುಗಿದನು. 23ನೇ ವಯಸ್ಸಿನಲ್ಲಿ ಹಾಫ್ ಶಾಲಾ ಉಪಾಧ್ಯಾಯನ ಕೆಲಸಕ್ಕೆ ಸೀರಲು ಯತ್ನಿಸಿದನು. ಅವನನ್ನು ಹಗಲುಗನಸಿನವನೆಂದು ತಿರಸ್ಕರಿಸಲಾಯಿತು. 1876ರಲ್ಲಿ ಪಶು ಚಿಕಿತ್ಸಕನ ಸಹಾಯಕನಾಗಿ ಕೆಲಸ ಮಾಡಿದನು. 1896ರಲ್ಲಿ ಅ್ಯಮಸ್ಟರ್‍ಡ್ಯಾಂನಲ್ಲಿ ಪ್ರಾಧ್ಯಾಪಕನಾದ ಹಾಫ್ ನಂತರ ಬರ್ಲಿನ್‍ಗೆ ಹೋಗಿ ನೆಲೆಸಿದನು. ಈ ಕಾಲದಲ್ಲಿಯೇ ಹಲವಾರು ಪ್ರಯೋಗಗಲ ಫಲಿತಾಂಶವಾಗಿ ಹಾಫ್ ಪ್ರಕಟಿಸಿದ ಲೇಖನ ತ್ರಿದಿಶಾ ರಸಾಯನಶಾಸ್ತ್ರದ ಉಗಮಕ್ಕೆ ಕಾರಣವಾಯಿತು. ಬಯೋಟ್, ಬಹುತೇಕ ಸಾವಯವ ಸಂಯುಕ್ತಗಳು ದೃಗ್‍ಕ್ರಿಯಾಶೀಲವಾಗಿರುವುದೆಂದೂ, ಧೃವೀಕೃತ (Polarised) ಬೆಳಕಿನ ಸಮತಲವನ್ನು ತಿರುಗಿಸುವುವೆಂದೂ ತಿಳಿಸಿದ್ದನು. ಪಾಸ್ತರ್ ಇದನ್ನು ಸ್ಪಟಿಕೀಯ ಘನಗಳಿಗೂ ವಿಸ್ತರಿಸಿದನು. ಕೆಕುಲೆ ಸಾವಯವ ರಾಸಾಯನಿಕಗಳ ಅಣುಗಳ ಜೋಡಣೆಯನ್ನು ವಿವರಿಸಿದ್ದನು. ಈ ಜೋಡಣೆಯ ಆಧಾರದ ಮೇಲೆ ಬೇರೆ ಬೇರೆ ಬಗೆಯ ರಾಸಾಯನಿಕಗಳು ದಕ್ಕುವುದೆಂದು ಹೇಳಿದ್ದನು. ಹಾಫ್ ಇದರತ್ತ ಗಮನಹರಿಸಿ ಈ ರಾಸಾಯನಿಕಗಳಲ್ಲಿ ಒಂದು ಧೃವೀಕೃತ ಬೆಳಕನ್ನು ಎಡಗಡೆಗೂ ಮತ್ತೊಂದನ್ನು ಬಲಗಡೆಗೂ ತಿರುಗುಸುವುದೆಂದು ತಿಳಿಸಿದನು. ಇದು ಅಣು ರಚನೆಯ ಸಾಮಾನ್ಯ ಸಿದ್ಧಾಂತದ ಉಗಮಕ್ಕೆ ಕಾರಣವಾಯಿತು. ಜೆ.ಎ.ಬೆಲ್ ಸ್ವತಂತ್ರವಾಗಿ ಇದೇ ತೀರ್ಮಾನಕ್ಕೆ ಬಂದಿದ್ದನು. ಆದರೆ ಸಿದ್ಧಾಂತ ರೂಪದಲ್ಲಿ ತಿಳಿಸಿರಲಿಲ್ಲ. ಹಾಫ್ ಮತ್ತು ಬೆಲ್ ಪ್ಯಾರಿಸ್‍ನ ವುರ್ಟ್ ಪ್ರಯೋಗಾಲಯದಲ್ಲಿ ಹಲವಾರು ಬೇರಿ ಪರಸ್ಪರ ಭೇಟಿಯಾಗಿದ್ದರು. 1901ರಲ್ಲಿ ಹಾಫ್ ರಸಾಯನಶಾಸ್ತ್ರದ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/9/2020