ಹರ್ಮಾನ್, ಫಿಷರ್ ಎಮಿಲ್ (1852-1919 )
ಜರ್ಮನಿ-ಸಾವಯವ ರಸಾಯನಶಾಸ್ತ್ರ-ನೈಸರ್ಗಿಕ ಔತ್ಪನ್ನಿಕ ರಸಾಯನಶಾಸ್ತ್ರದ ಪರಿಣಿತ.
ಫಿಷರ್, ಕೊಲೊನ್ ಜಿಲ್ಲೆಯ ಯುಷ್ಕೆರ್‍ಕೆನ್ ಪಟ್ಟಣದಲ್ಲಿ 9 ಅಕ್ಟೋಬರ್ 1852ರಂದು ಜನಿಸಿದನು. ಫಿಷರ್‍ನ ತಂದೆ ದಿನಸಿ ಅಂಗಡಿ ಇಟ್ಟಿದ್ದನು. ಮಗ ವ್ಯಾಪಾರಿಯಾದರೂ ಅಗಿರಲಿ, ರಸಾಯನಶಾಸ್ತ್ರಜ್ಞನೇ ಆಗಲಿ ಎಂಬ ಮುಂದಾಲೋಚನೆಯಿಂದ ಉಣ್ಣೆ ಮಗ್ಗ ಹಾಗೂ ಪೇಯ ತಯಾರಿಕೆಯ ಕಾರ್ಖಾನೆಯನ್ನು ಖರೀದಿಸಿದ್ದನು. ಆದರೆ ಓದಿನಲ್ಲಿ ತುಂಬಾ ಜಾಣನಾಗಿದ್ದಫಿಷರ್ ಸಣ್ಣ ವಯಸ್ಸಿನಲ್ಲೇ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದನಾದರೂ , ಕಾಲೇಜಿಗೆ ಸೇರುವಷ್ಟು ವಯಸ್ಸು ಅವನಿಗಿರಲಿಲ್ಲ, ಹೀಗಾಗಿ ಅವನು ತನ್ನ ಚಿಕ್ಕಪ್ಪನೊಂದಿಗೆ ಮರ ಮುಟ್ಟುಗಳ ವ್ಯಾಪಾರಕ್ಕಿಳಿದನು. ಸ್ವಂತ ಖರ್ಚಿನಲ್ಲಿ ಪ್ರಯೋಗಾಲಯ ತೆಗೆದು , ಬಂಧು ಬಾಂಧವರಿಂದ ವ್ಯಾಪಾರಕ್ಕೆ ನಾಲಾಯಕ್ಕಾದವನೆಂದು ನಿಂದನೆಯ ಸುರಿ ಮಳೆ ಪಡೆದನು. ಇದರಿಂದ ಬೇಸತ್ತ ಫಿಷರ್ ಕಾಲೇಜು ಶಿಕ್ಷಣ ಪಡೆಯಲು ನಿರ್ಧರಿಸಿದನು. 1887ರಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞ ಕೆಕುಲೆಯಡಿಯಲ್ಲಿ ಫಿಷರ್ , ರಸಾಯನಶಾಸ್ತ್ರ ,ಸಸ್ಯಶಾಸ್ತ್ರ ಕಲಿತನು. 1875ರಲ್ಲಿ ಸ್ಟ್ರಾಸ್‍ಬರ್ಗ್‍ಗೆ ಹೋಗಿ ಬೇಯರ್’ನ ಶಿಷ್ಯನಾದನು. ಬೇಯರ್ ಮ್ಯೂನಿಕ್‍ಗೆ ಹೋದಾಗಲೂಫಿಷರ್ ಅವನನ್ನು ಹಿಂಬಾಲಿಸಿದನು. ಈ ವೇಳೆಗಾಗಲೇಫಿಷರ್ ಫಿûನೈಲ್ ಹೈಡ್ರೋಝೈನ್ ಅನಾವರಣಗೊಳಿಸಿದ್ದನು. ಸತತ ಪರಿಶ್ರಮ ದೃಢ ನಿರ್ಧಾರದಿಂದ ಉತ್ತಮ ರಸಾಯನ ತಜ್ಞನಾಗಿದ್ದ ಫಿûಷರ್’ಗೆ ಸತತ ಧೂಮಪಾನ, ಮಧ್ಯ ಸೇವನೆ ಚಟಗಳಾಗಿದ್ದವು. ಇವುಗಳಿಂದ ಆಗಾಗ್ಗೆ ಆರೋಗ್ಯ ಹದಗೆಟ್ಟು ಚೇತರಿಸಿಕೊಳ್ಳಲು ಹೆಣಗುತ್ತಿದ್ದನು. ಹೀಗಿದ್ದರೂ ಸಹ,ಫಿಷರ್ ಸಕ್ಕರೆ, ಫ್ಯೂರಿನ್, ಬಣ್ಣ, ಇಂಡೋಲ್ ಹೀಗೆ ನಾನಾ ಬಗೆಯ ರಾಸಾಯನಿಕಗಳ ಮೇಲೆ ಸಂಶೋಧನೆ ಮಾಡುವುದನ್ನು ನಿಲ್ಲಿಸಿರಲಿಲ್ಲ. 1885ರಲ್ಲಿ ವುರ್ಝ್‍ಬರ್ಗ್‍ಗೆ ಪ್ರಾಧ್ಯಾಪಕನಾಗಿ ಹೋದನು , 1892ರಲ್ಲಿ ಬರ್ಲಿನ್‍ನಲ್ಲಿ ಹಾ¥sóïಮನ್‍ನಿಂದ ತೆರನಾಗಿದ್ದ ಸ್ಥಾನವನ್ನು ಅಲಂಕರಿಸಿದನು. ಈ ಸ್ಥಾನ ಸಂಶೋಧನೆಗಿಂತಲೂ, ಆಡಳಿತದಲ್ಲಿ ಹೆಚ್ಚು ಗಮನ ಹರಿಸುವಂತಹದಾಗಿದ್ದುದರಿಂದ ಫಿಷರ್ ರೋಸಿಹೋದನು. ನೈಸರ್ಗಿಕ ರಾಸಾಯನಿಕಗಳಿಂದ, ಕಾರ್ಬೋ ಹೈಡ್ರೇಟ್ಸ್, ಸಕ್ಕರೆ, ಗ್ಲುಕೋಸ್‍ಗಳ ಟ್ಯಾನಿಸ್, ಡೆಪಿಸೈಡ್‍ಗಳ ಸಂಶ್ಲೇಷಣೆ ಮತ್ತು ಅಧ್ಯಯನ ಫಿûಷರ್‍ನ ಅನನ್ಯ ಕೊಡುಗೆಗಳು. ಇವು ಜೀವ ರಸಾಯನಶಾಸ್ತ್ರದಲ್ಲಿ ಬಹು ಪ್ರಮುಖ ಪಾತ್ರ ವಹಿಸುತ್ತವೆ. 1899ರಲ್ಲಿ ಪೆಪ್ಟಿನ್,ಪ್ರೋಟೀನ್‍ಗಳಲ್ಲಿ, ಅವನು ಅಧಿಕೃತವಾಣಿಯಾದನು. 1882ರಿಂದ 1906ರವರೆಗೆ ಫಿಷರ್ ನಡೆಸಿದ ಸಂಶೋಧನೆಗಳು ವಿಶ್ವ ಖ್ಯಾತಿ ತಂದವು. ಪ್ಯೂರಿನ್ ಹಾಗೂ ಸಕ್ಕರೆಗಳ ಮೇಲೆ ತರಕಾರಿಗಳಲ್ಲಿ ಬೆಳೆಗಳಲ್ಲಿ, ಪ್ರಾಣಿಗಳ ಮೂತ್ರಗಳಲ್ಲಿರುವ ಅಡೆನೈನ್, ಕ್ಸಾಂಥೈನ್, ಗುವ್‍ನೈನ್‍ಗಳಂತಹ ರಾಸಯನಿಕಗಳ ಮೂಲ ಒಂದೇ ಆಗಿದ್ದು, ಒಂದರಿಂದ ಇನ್ನೊಂದನ್ನು ಪಡೆಯಬಹುದೆಂದು ಸಾಧಿಸಿದನು. ಒಂದು ವರ್ಷದ ಹಿಂದಷ್ಟೇ ಸ್ಥಾಪಿಸಲ್ಪಟ್ಟ ನೊಬೆಲ್ ಪ್ರಶಸ್ತಿಯನ್ನು 1902ರಲ್ಲಿ ಪಡೆದು, ಅದನ್ನು ಪಡೆದು ಎರಡನೆಯವನಾಗಿಫಿಷರ್ ಇತಿಹಾಸದಲ್ಲಿ ದಾಖಲಾಗಿದ್ದಾನೆ. ಚಹಾ, ಕಾಫಿû, ಕೊಕೊಗಳಲ್ಲಿರುವ ಟ್ಯಾನಿನ್, ಕೆಫಿನ್ ಹಾಗೂ ಕೋಕಾಗಳನ್ನು ಅಧ್ಯಯನ ನಡೆಸಿದ ಮೊದಲಿಗ ಫಿಷರ್.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019