অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರುದರ್’ಫೋರ್ಡ್,ಅರ್ನ್‍ಸ್ಟ್

ರುದರ್’ಫೋರ್ಡ್,ಅರ್ನ್‍ಸ್ಟ್

ರುದರ್’ಫೋರ್ಡ್,ಅರ್ನ್‍ಸ್ಟ್ (1871-1937)  ೧೯೦೮

ನ್ಯೂಝಿಲ್ಯಾಂಡ್-ಬ್ರಿಟನ್ ಭೌತಶಾಸ್ತ್ರ- ಬೈಜಿಕ ಭೌತಶಾಸ್ತ್ರದ (Nuclear Physics) ಸಂಸ್ಥಾಪಕ.

ನ್ಯೂಜಿಲ್ಯಾಂಡಿನ ನೆಲ್ಸನ್‍ನ ಅವಿಭಕ್ತ ಕುಟುಂಬದಲ್ಲಿ ಜನಿಸಿದ ರುದರ್ಫೋರ್ಡ್ ಶಿಷ್ಯವೇತನ ಗೆದ್ದು ಕ್ಯಾಟೆನ್‍ಬರಿ ಕಾಲೇಜಿಗೆ ಸೇರಿದನು.  ಪದವಿ ಅಂತಿಮ ವರ್ಷದಲ್ಲಿ ಭೌತಶಾಸ್ತ್ರ ಹಾಗೂ ಗಣಿತಗಳತ್ತ ಗಮನ ಕೇಂದ್ರೀಕರಿಸಿದನು.  ಹಟ್ರ್ಸ್ ರೇಡಿಯೋ ತರಂಗ ಕಂಡು ಹಿಡಿದ ಆರನೇ ವರ್ಷದಲ್ಲಿ ರುದರ್ಫೋರ್ಡ್ ಅದರ ಪ್ರೇಷಕ ನಿರ್ಮಿಸಿದ್ದನು. 1895ರಲ್ಲಿ ಮತ್ತೊಮ್ಮೆ ಕೇಂಬ್ರಿಜ್ ಶಿಷ್ಯ ವೇತನ ಗೆದ್ದು ಅಲ್ಲಿ ಜೆ.ಜೆ. ಥಾಮ್ಸನ್ ಮಾರ್ಗ ದರ್ಶನದಲ್ಲಿ , ಗಾಳಿಯಲ್ಲಿ ಕ್ಷ-ಕಿರಣ ಪಾರಗಮನ ಅಭ್ಯಸಿಸಿದನು.  ರುದರ್ಫೋರ್ಡ್, ಜೆ.ಜೆ. ಥಾಮ್ಸನ್ ಕೈ ಕೆಳಗಿನ ಪ್ರಥಮ ಸಂಶೋಧಕ ವಿದ್ಯಾರ್ಥಿಯಾಗಿದ್ದನು.  ರುದರ್ಫೋರ್ಡ್ ಮೆಕ್‍ಗಿಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು.  ರುದರ್ಫೋರ್ಡ್ ಖ್ಯಾತ ರಸಾಯನಶಾಸ್ತ್ರಜ್ಞ  ಸಾಡಿಯ ಸಹಾಯದಿಂದ ಬೈಜಿಕ ಭೌತಶಾಸ್ತ್ರದಲ್ಲಿ ಕಾರ್ಯ ನಿರತನಾದನು.  ರುದರ್ಫೋರ್ಡ್ಗೆ ಸಾಕಷ್ಟು ಪ್ರಮಾಣದಲ್ಲಿ ಪ್ರಯೋಗಗಳಿಗೆ ಬೆಂಬಲ ದೊರೆಯಿತು.  ಸಾಡಿ ಹಾಗೂ ರುದರ್ಫೋರ್ಡ್ ಹದಿನೆಂಟು ತಿಂಗಳುಗಳಲ್ಲಿ ಒಂಬತ್ತು ಲೇಖನ ಪ್ರಕಟಿಸಿದರು. 1896ರಲ್ಲಿ ಬೆಕೂರೆ, ಯುರೇನಿಯಂನಲ್ಲಿ ವಿಕಿರಣಪಟುತ್ವ (Radio Activity) ಅನಾವರಣಗೊಳಿಸಿದ್ದನು. ಜೆ.ಸಿಷ್ಮಿಡ್ಜ್ , ಪೀರೆ ಹಾಗೂ ಮೇರಿ ಕ್ಯೂರಿ  ಬೇರೆ ಧಾತುಗಳಲ್ಲಿನ ವಿಕಿರಣ ಪಟುತ್ವವನ್ನು ತೋರಿಸಿದ್ದರು.  ರುದರ್ಫೋರ್ಡ್ ಈ ಧಾತುಗಳನ್ನು ಅಭ್ಯಸಿಸಿ, ವಿಕಿರಣಶೀಲತೆಯಲ್ಲಿ ಎರಡು ಬಗೆಯ ಕಾರಣಗಳಿವೆಯೆಂದು ಹೇಳಿದನು.  ಹೀಲಿಯಂ ಬೀಜ ಹೋಲುವ ಆಲ್ಫಾ ಕಿರಣ ಹಾಗೂ ಎಲೆಕ್ಟ್ರಾನ್‍ಗಳ ಬೀಟಾ ಕಿರಣಗಳಿವು.  ಇದಾದ ಎರಡು ವರ್ಷಗಳ ನಂತರ ಇವುಗಳಿಗಿಂತ ಪ್ರಬಲವಾದ ಗಾಮಾ ಕಿರಣಗಳನ್ನು ಸಹ ರುದರ್ಫೋರ್ಡ್ ಪತ್ತೆ ಹಚ್ಚಿದನು. 1903ರಲ್ಲಿ ಸಾಡಿಯ ಜೊತೆಗೂಡಿ,. ಕ್ರಮವಾದ ಪರಿವರ್ತನೆಗಳಿಂದ ವಿಭಿನ್ನ ಪ್ರಮಾಣಗಳಲ್ಲಿ ಅನಿರ್ದಿಷ್ಟ ಸಮಯಾವಧಿಗಳಲ್ಲಿ ರೇಡಿಯೋ ವಿಕಿರಣ ಹೊರಹೊಮ್ಮುವುದೆಂದು ರುದರ್ಫೋರ್ಡ್ ಪ್ರತಿಪಾದಿಸಿದನು.  ಕಿರಣಗಳ ಹೊಮ್ಮಿಕೆ ಅನಿರ್ದಿಷ್ಟ ಸಮಯದ್ದಾದರೂ, ವಿಕಿರಣಪಟು ಧಾತುಗಳಲ್ಲಿನ ಅರ್ಧ ಪರಮಾಣುಗಳು ಶೈಥಿಲ್ಯ (Decay) ಹೊಂದುವ ಸರಾಸರಿ ಅವಧಿ ಒಂದೇ ಇರುತ್ತದೆಯೆಂದು ವಿವರಿಸಿದನು.  ಕೆಲವು ಧಾತುಗಳು ಯಾವಾಗಲೂ ಒಂದೇ ಸ್ಥಿತಿಯಲಿದ್ದರೆ ಇನ್ನೂ ಕೆಲವು ತಮ್ಮ ಪರಮಾಣುಗಳನ್ನು ಶೈಥಿಲ್ಯದಿಂದ ಕಳೆದುಕೊಂಡು , ಬೇರೆ ಧಾತುಗಳಾಗಿ ಬದಲಾಗುವುದು ಕ್ರಾಂತಿಕಾರಕವೆನಿಸಿತು.  ಟಿ.ರಾಡ್ಸ್‍ನೊಂದಿಗೆ ರುದರ್ಫೋರ್ಡ್ ಆಲ್ಪಾ ಕಿರಣಗಳ ದ್ರವ್ಯ ಹಾಗೂ ಆವಿಷ್ಟ ನಿರ್ಧರಿಸಿ, ಅದು ಹೀಲಿಯಂ ಬೀಜಕ್ಕೆ ಸಮನಾಗಿರುವುದೆಂದು ತೋರಿಸಿದನು. 1907ರಲ್ಲಿ ರುದರ್ಫೋರ್ಡ್ ಅಲ್ಪಾಕಿರಣಗಳ ದ್ರವ್ಯ ಹಾಗೂ ಆವೇಶ  ನಿರ್ಧರಿಸಿ  ಅದು ಹೀಲಿಯಂ ಬೀಜಕ್ಕೆ ಸಮನಾಗಿರುವುದೆಂದು ತೋರಿಸಿದನು.  ಇದೇ ವರ್ಷ ರುದರ್ಫೋರ್ಡ್ ಬ್ರಿಟನ್‍ಗೆ ಮರಳಿ, ಮ್ಯಾಂಚೆಸ್ಟರ್‍ನಲ್ಲಿ ಗೀಗರ್ ಜೋತೆಗೆ ವಿಕಿರಣಪಟುತ್ವದ ಅಧ್ಯಯನ ಮುಂದುವರೆಸಿದನು.  ಗೀಗರ್ ಈ ಕಿರಣಗಳನ್ನು ಎಣಿಸುವ ಸಾಧನ ನಿರ್ಮಿಸಿದನು. ಗೀಗರ್ ಹಾಗೂ ಮಾರ್ಸಡೆನ್ ಈ ಆಲ್ಫಾ ಕಣಗಳಲ್ಲಿ 8000ರಲ್ಲಿ ಒಂದು ಕಣ ಬಂಗಾರದ ರೇಕಿಗೆ ತಾಗಿ ಹಿಂದಕ್ಕೆ ಪುಟಿಯುವುದನ್ನು ಗಮನಿಸಿದರು. ಹಗುರವಾಗಿರುವ ಎಲೆಕ್ಟ್ರಾನ್‍ಗೆ ಡಿಕ್ಕಿಹೊಡೆದು, ಆಲ್ಪಾಕಿರಣಗಳು ಇಷ್ಟೊಂದು ಹಿಂದಕ್ಕೆ ಪುಟಿಯಲಾರದೆಂದು ತರ್ಕಿಸಿದ, ರುದರ್ಫೋರ್ಡ್ ಪರಮಾಣುವಿನ ಕೇಂದ್ರದಲ್ಲಿ ಎಲೆಕ್ಟ್ರಾನ್‍ನಷ್ಟು ಸಂಖ್ಯೆಯಲ್ಲಿ, ಅದಕ್ಕೆ ವಿರುದ್ಧವಾದ ಆವಿಷ್ಟ ಹೊಂದಿರುವ, ಭಾರವಾದ ಬೀಜವಿರುವುದೆಂದು 1911ರಲ್ಲಿ ಹೇಳಿದನು.  ಇದರಿಂದಾಗಿ ಪರಮಾಣುವಿನಲ್ಲಿ ಋಣ ಹಾಗೂ ಧನ ಆವಿಷ್ಟಗಳು ಪರಸ್ಪರ ನಿರಸನಗೊಳ್ಳುತ್ತವೆ .  ಇದು ಮೊದಲ ಬಾರಿಗೆ ಪರಮಾಣುವಿನ ಸರಿಯಾದ ಮಾದರಿಯಾಗಿದ್ದಿತು.  ಬೊಹ್ರ್ ಇದನ್ನು ಅಭಿವೃದ್ದಿಗೊಳಿಸಿ, ಎಲೆಕ್ಟ್ರಾನ್‍ಗಳು ಪರಮಾಣುವಿನ ಬೀಜದ ಸುತ್ತಲೂ ಸುತ್ತುವುದೆಂದು ತಿಳಿಸಿ,ಪ್ಲಾಂಕ್‍ನ ಸಿದ್ಧಾಂತಕ್ಕೆ ಕಾರಣ ನೀಡಿದನು. ಮೊದಲನೇ ಜಾಗತಿಕ ಯುದ್ದ ಪ್ರಾರಂಭವಾಗಿ ರುದರ್ಫೋರ್ಡ್ ಸೈನಿಕ ವಿಧಾನಗಳಿಂದ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚುವ ಯೋಜನೆಗೆ ನಿಯೋಜಿಸಲಾಯಿತು,. 1919ರಲ್ಲಿ ಜೆ.ಜೆ.ಥಾಮ್ಸನ್ ತೆರವುಗೊಳಿಸಿದ ಕೇಂಬ್ರಿಜ್‍ನ ಕ್ಯಾವೆಂಡಿಷ್ ಪ್ರಾಧ್ಯಾಪಕ ಹುದ್ದೆಗೇರಿದ ರುದರ್ಫೋರ್ಡ್ ಕೆಲವೇ ದಿನಗಳಲ್ಲಿ ಪರಮಾಣು ಬೀಜವನ್ನು ಕೃತಕ ವಿಧಾನಗಳಿಂದ ಒಡೆಯಬಹುದೆಂದು ಅನಾವರಣಗೊಳಿಸಿದನು.  ರುದರ್‍ಪೆÇೀರ್ಡ್‍ನ ಸಹಾಯಕರು ಆಗಿನ್ನೂ ಯುದ್ದದಿಂದ ತಮ್ಮ ಕೆಲಸಗಳಿಗೆ ಮರಳಿರಲಿಲ್ಲ. ಆದುದರಿಂದ ರುದರ್ಫೋರ್ಡ್ ಖುದ್ದಾಗಿ ತಾನೇ ಪ್ರಯೋಗ ನಿರತನಾದನು.  ಸಾರಜನಕದಂತಹ ಪರಮಾಣುವಿನ ಬೀಜವನ್ನು ತಾಡಿಸುವ ಆಲ್ಫಾ ಕಿರಣಗಳು, ಪ್ರೋಟಾನ್‍ನ್ನು ಬೀಜದಿಂದ ಹೊರಹಾಕಿ,ಹಗುರ ಪರಮಾಣುವಿಗೆ ಕಾರಣವಾಗುತ್ತವೆ. 1920ರಿಂದ 1924 ರವರೆಗೆ ರುದರ್ಫೋರ್ಡ್ ಹಾಗೂ ಚಾಡ್‍ವಿಕ್ ಹಗುರ ಪರಮಾಣುಗಳನ್ನು ಆಲ್ಪಾ ಕಣಗಳಿಂದ ಒಡೆಯಬಹುದೆಂದು ತೋರಿಸಿದರಲ್ಲದೆ ಮುಂದೆ ನ್ಯೂಟ್ರಾನ್ ಅಸ್ತಿತ್ವವನ್ನು ಘೋಷಿಸಿದರು.  ಕಾಕ್‍ಕ್ರಾಫ್ಟ್ ಹಾಗೂ ಇ. ಟಿ.ಎಸ್.ವಾಲ್ಟನ್ ರುದರ್ಫೋರ್ಡ್ ಸಲಹೆಗಳ ಆಧಾರದ ಮೇಲೆ ಭಾರ ಧಾತುಗಳನ್ನು ಒಡೆಯುವ ವಿಧಾನ ರೂಪಿಸಿದರು.  ರುದರ್ಫೋರ್ಡ್ ಎಂ.ಓಲಿಪ್ರಾಯರಿನ್ ಹಾಗೂ ಪಿ.ಹಾರ್ಟೆಕ್ ಜೊತೆಗೂಡಿ, 1934ರಲ್ಲಿ ಡ್ಯುಟೇರಿಯಂನ್ನು ಡ್ಯುಟೇರಿಯಂ ಬೀಜದಿಂದ ತಾಡಿಸಿ, ಬೈಜಿಕ ಸದಳನ (Nuclear Fusion )ಸಾಧಿಸಿ ಟ್ರೈಟಿಯಂನ್ನು ಪಡೆದರು. 1920ರ ಸುಮಾರಿನಲ್ಲಿ ರುದರ್ಫೋರ್ಡ್ ನ್ಯೂಟ್ರಾನ್ ಹಾಗೂ ಟ್ರೈಟಿಯಂ ಅಸ್ತಿತ್ವವನ್ನು ಗ್ರಹಿಸಿದ್ದನು. ಬೈಜಿಕ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ 1908ರಲ್ಲಿ ರುದರ್ಫೋರ್ಡ್ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು.  ಜಗತ್ತಿನ ಹಲವಾರು ಖ್ಯಾತ ವಿಜ್ಞಾನಿಗಳು ರುದರ್ಫೋರ್ಡ್ ಶಿಷ್ಯರಾಗಿದ್ದರು.


ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 2/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate