ಮ್ವಾಸಾ, (ಫರ್ಡಿನ್ಯಾಂಡ್ ಫ್ರೆಡರಿಕ್) ಹೆನ್ರಿ (1852-1907)-೧೯೦೬
ಫ್ರಾನ್ಸ್-ನಿರವಯವ ರಸಾಯನಶಾಸ್ತ್ರ- ಫ್ಲೂರಿನ್ ಪ್ರತ್ಯೇಕಿಸಿದಾತ-ಅಧಿಕ ತಾಪಮಾನದ ರಸಾಯನಶಾಸ್ತ್ರದ ಮೂಂಚೂಣಿಗ.
ಕಡು ಬಡತನದಲ್ಲಿ ಜನಿಸಿದ ಮ್ವಾಸಾಗೆ ವಿದ್ಯಾಭ್ಯಾಸ ಗಗನ ಕುಸುಮವಾಗಿದ್ದಿತು. ಮದುವೆಯಾದ ಮೇಲೆ, ಉದಾರಿಯಾದ ಮಾವನಿಂದಾಗಿ ಮ್ವಾಸಾ ಕನಸುಗಳು ನನಸಾಗತೊಡಗಿದವು, ರಸಾಯನಶಾಸ್ತ್ರದಲ್ಲಿ ಪದವಿ ಪದೆದ ಮ್ವಾಸಾ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾದನು. ಫ್ಲೂರಿನ್‍ನನ್ನು ಪ್ರತ್ಯೇಕಿಸಲು ಡೇವಿಯನ್ನು ಒಳಗೊಂಡಂತೆ ಹಲವಾರು ಜನ ಯತ್ನಿಸಿದ್ದರು. ಫ್ಲೂರಿನ್ ತೀವ್ರ ಪ್ರತಿಕ್ರಿಯಾಕಾರಿಯಾಗಿದ್ದು, ಅದನ್ನು ಸಂಗ್ರಹಿಸುವ ಪಾತ್ರೆಯೊಂದಿಗೆ ಪ್ರತಿಕ್ರಿಯಿಸುತ್ತಿತ್ತು. ಇದರಿಂದಾಗಿ ಹಲವಾರು ಅವಘಡಗಳು ಸಂಭವಿಸಿದ್ದವು. 1886ರಲ್ಲಿ ಮ್ವಾಸಾ ಪೊಇಟ್ಯಾಷಿಯಂ ಫ್ಲೊರೈಡ್ ದ್ರಾವಣವನ್ನು 50 ಡಿಗ್ರಿ ಸೆಲ್ಫಿಯಸ್‍ನಲ್ಲಿ ವಿದ್ಯುದ್ವಿಭಜನೆಗೆ (Electrolysis) ಪ್ಲಾಟಿನಂ ಹಾಗೂ ಕ್ಯಾಲ್ಸಿಯಂ ಮಿಶ್ರ ಧಾತುವಿನ ಪಾತ್ರೆಯಲ್ಲಿ ಪ್ರತ್ಯೇಕಿಸಿದ ಫ್ಲೂರಿನ್‍ನನ್ನು ಸಂಗ್ರಹಿಸಿದನು. ಫ್ಲೂರಿನ್ ಅತ್ಯಂತ ಕ್ರಿಯಾಶೀಲ ಧಾತುವೆಂದು ಖ್ಯಾತವಾಗಿದೆ. ಮ್ವಾಸಾ ಶುದ್ದ ಬೋರೋನ್ ಪಡೆದ ಮೊದಲಿಗ. ಕೃತಕವಾಗಿ ವಜ್ರ ತಯಾರಿಸುವ ವಿಧಾನ ಕಂಡು ಹಿಡಿದಾತ. ಅಧಿಕ ತಾಪಮಾನ ರಸಾಯನಶಾಸ್ತ್ರದಲ್ಲಿ ಕುತೂಹಲ ಹೊಂದಿದ್ದ ಮ್ವಾಸಾ, ಇಂಗಾಲದ ಚಾಪ (Arc) ಬಳಸಿ 3000 ಸೆಂ. ಗಿಂತಲೂ ಅಧಿಕ ತಾಪಮಾನದ ಕುಲುಮೆ ನಿರ್ಮಿಸಿದನು. ಮ್ವಾಸಾ ಕೃತಕ ವಜ್ರ , ಪಚ್ಚೆ, ವೈಡೂರ್ಯ , ಬೋರೈಡ್, ಕಾರ್ಬೈಡ್ ಸಿಲಿಸ್ಶೆಡ್‍ಗಳನ್ನು ಪಡೆದನು. ಆಗಿನ ಕಾಲಕ್ಕೆ ಅಷ್ಟೊಂದು ಪರಿಚಿತವಲ್ಲದ ಲೋಹಗಳನ್ನು ಸಂಸ್ಕರಿಸಿದನು. 1906ರಲ್ಲಿ ಮ್ವಾಸಾ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/30/2020