ಬುಖ್‍ನೆರ್, ಎಡ್ಯೂಯಾರ್ಡ್ (1860-1919 ) -೧೯೦೭
ಜರ್ಮನಿ-ಸಾವಯವ ರಸಾಯನಶಾಸ್ತ್ರ -ಹುದುಗುವಿಕೆಗೆ ಜೀವಂತ ಕೋಶಗಳು ಅಗತ್ಯವಿಲ್ಲವೆಂದು ತೋರಿಸಿದಾತ.
ಅಣ್ಣನಿಂದ ವಿಜ್ಞಾನದತ್ತ ಆಕರ್ಷಿತನಾಗಿದ್ದ ಬುಕ್‍ನೆರ್, ನೇಗೇಲಿಯ ಮಾರ್ಗದರ್ಶನದಲ್ಲಿ ಜೀವ ಶಾಸ್ತ್ರವನ್ನು, ಬೇಯರ್‍ನ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರವನ್ನು ಕಲಿತನು. ಬೇಯರ್‍ನ ಸಹಾಯಕನಾಗಿ ಕೆಲಸ ಪ್ರಾರಂಭಿಸಿದ ಈತ 1893ರಲ್ಲಿ ಕೀಲ್‍ನಲ್ಲಿ ಪ್ರಾಧ್ಯಾಪಕನಾಗಿ, ಮುಂದೆ ಹಲವಾರು ಬಾರಿ ಬೇರೆ ಸಂಸ್ಥೆಗಳಿಗೆ ಸೇರಿ, ಅಂತಿಮವಾಗಿ 1911ರಲ್ಲಿ ವುರ್ಝ್‍ಬರ್ಗ್‍ನಲ್ಲಿ ನೆಲೆಸಿದನು. ಬುಖ್‍ನೆರ್ ಮೊದಲನೇ ಜಾಗತಿಕ ಯುದ್ದದಲ್ಲಿ ಸೇವಾ ಕಾರ್ಯಚರಣೆಯಲ್ಲಿ ಕೊಲ್ಲಲ್ಪಟ್ಟನು. 1897ರಲ್ಲಿ ಬುಖ್‍ನೆರ್ ವೀಕ್ಷಣೆಗಳು ಪ್ರಕರಣಗೊಳ್ಳುವವರೆಗೆ ಹುದುಗುವಿಕೆಗೆ ಜೀವಂತ ಈಸ್ಟ್ ಕೋಶಗಳ ಅಗತ್ಯವಿದೆ0iÉುಂದು ಭಾವಿಸಲಾಗಿತ್ತು. ಬುಕ್‍ನೆರ್ ಈಸ್ಟ್ ಕೋಶಗಳನ್ನು ಮರಳಿನೊಡನೆ ರುಬ್ಬಿ, ಕೋಶದಿಂದ ಮುಕ್ತವಾದ ಆಹರಣ (Extract ) ಪಡೆದು, ಅದನ್ನು ಸಕ್ಕರೆ ದ್ರಾವಣಕ್ಕೆ ಸೇರಿಸಿ, ಹುದುಗುವಿಕೆ ತರುವಲ್ಲಿ ಯಶಸ್ವಿಯಾದನು. ಪ್ರತಿ ರಾಸಾಯನಿಕ ಕ್ರಿ0iÉುಗೂ ಒಂದು ಜೈವಿಕ ಅಗೋಚರ ಮಧ್ಯಸ್ಥಿಕೆ ಬೇಕೆಂಬ ಆಗಿನ ಚೇತನವಾದಿಗಳಿಗೆ ಇದರಿಂದ ಭಾರಿ ಹಿನ್ನೆಡೆ ಯುಂಟಾಗಿ, ರಾಸಾಯನಿಕ ಕ್ರಿಯಾ ಭೌತಿಕ ಅಣುಮೂಲದ್ದೆಂದು ಖಚಿತಗೊಂಡಿತು. ಈಸ್ಟ್‍ನಿಂದ ತಾನು ಪಡೆದ ಆಹರಣವನ್ನು ಬುಖ್‍ನೆರ್ ಝೈಮೇಸ್ ಎಂದು ಕರೆದನು. ಈಗ ಇದೊಂದು ಕಿಣ್ವ (Enzyme) ಎಂದು ಗುರುತಿಸಲ್ಪಟ್ಟಿದೆ. ಈಗ ಇವು ಕಾರ್ಯ ನಿರ್ವಹಿಸುವ ವಿಶಿಷ್ಟ ಬಗೆಯ ಪ್ರೊಟೀನ್‍ಗಳೆಂದೂ ಇವು ಎಲ್ಲಾ ಜೀವರಾಸಾಯನಿಕ ಕ್ರಿಯೆಗಳಿಗೂ ಕಾರಣವೆಂದೂ, ಸಾಬೀತಾಗಿದೆ. 1907ರ ನೊಬೆಲ್ ಪಾರಿತೋಷಕ ಪಡೆದ ಬುಖ್‍ನೆರ್ 1919ರಲ್ಲಿ ಯುದ್ಧದಲ್ಲಿ ಹತನಾದನು. ಈತನ ಅಣ್ಣ ಹ್ಯಾನ್ ಬುಖ್‍ನೆರ್ ಸೂಕ್ಷ್ಮಜೀವಿಶಾಸ್ತ್ರದಲ್ಲಿ ಕೆಲಸ ಮಾಡಿ ರಕ್ತ ದ್ರವದಲ್ಲಿರುವ ಪ್ರೊಟೀನ್ ಅಂಶ ರೋಗ ಪ್ರತಿರೋಧಕ್ಕೆ ಬಹು ಮುಖ್ಯವಾದುದೆಂದು ತೋರಿಸಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020