ಜೊಹಾನ್, ಫ್ರೆಡರಿಕ್ ವಿಲ್‍ಹೆಲ್ಮ್ ಅಡಾಲ್ಫ್ ವಾನ್ ಬೇಯರ್ (1835-1917)-೧೯೦೫
ಜರ್ಮನಿ -ರಸಾಯನಶಾಸ್ತ್ರ-ಸಾವಯವ ರಸಾಯನಶಾಸ್ತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದಾತ.
ಜೊಹಾನ್ 31 ಅಕ್ಟೋಬರ್ 1835ರಂದು ಬರ್ಲಿನ್‍ನಲ್ಲಿ ಜನಿಸಿದನು. ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಗಣಿತ ಹಾಗೂ ಭೌತಶಾಸ್ತ್ರದ ಪದವಿ ಗಳಿಸಿದ ಜೊಹಾನ್ ನಂತರ ಹೈಡೆಲ್‍ಬರ್ಗ್‍ನಲ್ಲಿ ಬುನ್ಸೆನ್ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರವನ್ನು ಕಲಿತನು. ಆಗಸ್ಟ್ ಕೆಕುಲೆಯ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಜೊಹಾನ್1858ರಲ್ಲಿ ಡಾಕ್ಟರೇಟ್ ಗಳಿಸಿದನು. 1860ರಲ್ಲಿ ಬರ್ಲಿನ್ ಟ್ರೇಡ್ ಅಕಾಡೆಮಿಯಲ್ಲಿ ಉಪನ್ಯಾಸಕನಾದನು. 1871ರಲ್ಲಿ ಸ್ಟ್ರಾರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1875ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಲೀಬಿಖ್‍ನಿಂದ ತೆರನಾದ ಪ್ರಾಧ್ಯಾಪಕ ಹುದ್ದೆ ವಹಿಸಿಕೊಂಡನು. ಜೊಹಾನ್ ಸಸ್ಯಗಳ ಇಂಡಿಗೋ ವರ್ಣ ಮತ್ತು ಥ್ಯಾಲಿನ್ ವರ್ಣಗಳನ್ನು ಅನಾವರಣಗೊಳಿಸಿದನು. ನೈಟ್ರೋ ಸಂಯುಕ್ತಗಳು, ಪಾಲಿಅಸಿಟಿಲಿನ್ ಆಕ್ಸೋಲಿಯಂ ಲವಣ, ಯೂರಿಕ್ ಆಮ್ಲದ ವ್ಯುತ್ಪನ್ನಗಳ ಅಧ್ಯಯನದಲ್ಲಿ ಪರಿಶ್ರಮಿಸಿದನು. ಬಾರಿಬ್ಯುಟ್‍ರೇಟ್‍ಗಳ ಮೂಲ ಸಂಯುಕ್ತವಾದ ಬಾರಿಬ್ಯೂಟರಿಕ್ ಆಮ್ಲವನ್ನು 1864ರಲ್ಲಿ ಅನಾವರಣಗೊಳಿಸಿದನು. 1863ರಲ್ಲಿ ಇಂಡೋಲ್‍ನ್ನು ಸಂಶ್ಲೇಷಿಸಿ ಅದರ ರಾಸಾಯನಿಕ ಸ್ವರೂಪವನ್ನು ವಿವರಿಸಿದನು. ರಾಸಾಯನಿಕ ತ್ರಿವಳಿ ಬಂಧ, ಇಂಗಾಲದ ಉಂಗುರಗಳ ಸಿದ್ಧಾಂತ ನೀಡಿದರು. ಲಿಯೋ ಬೇಕ್‍ಲ್ಯಾಂಡ್ ಬೇಕಲೈಟ್‍ನ್ನು ಅನಾವರಣಗೊಳಿಸಿಸುವ ಮೊದಲೇ 1872ರಲ್ಲಿ ಫಿನಾಲ್ ಮತ್ತು ಫಾರ್ಮಾಲ್‍ಡಿಹೈಡ್‍ನ್ನು ಕುರಿತಾಗಿ ಪ್ರಯೋಗಗಳನ್ನು ನಡೆಸಿದ್ದನು. ಸಾವಯವ ರಸಾಯನ ಶಾಸ್ತ್ರದಲ್ಲಿನ ಗಮನಾರ್ಹ ಕೊಡುಗೆಗಾಗಿ 1905ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/11/2019