ಓಸ್ಟ್’ವಾಲ್ಡ್, ಫ್ರೀಡರಿಖ್, ವಿಲ್‍ಹೆಲ್ಮ್ (1853-1932) ೧೯೦೯
ಜರ್ಮನಿ - ಆಧುನಿಕ ಭೌತರಸಾಯನಶಾಸ್ತ್ರದ ಮುಂಚೂಣಿಗ.
ಆಧುನಿಕ ರಸಾಯನಶಾಸ್ತ್ರವನ್ನು ವಾನ್.ಟಿ ಹಾಫ್ ,ಆರೇನಿಯಸ್ ಹಾಗೂ ಓಸ್‍ವಾಲ್ಟ್ ಸ್ಥಾಪಿಸಿದರು. ಓಸ್‍ವಾಲ್ಟ್ ಬಾಲ್ಯದಿಂದಲೂ, ರಾಸಾಯನಿಕಶಾಸ್ತ್ರದಲ್ಲಿ ಆಸಕ್ತನಾಗಿದ್ದನು. ತಾನೇ ಬಣ್ಣ ತಯಾರಿಸಿಕೊಳ್ಳುವುದು, ಛಾಯಾಗ್ರಹಣಕ್ಕೆ ಸ್ವಂತ ಕಾಗದ ತಯಾರಿಸುವುದು ,ಪಟಾಕಿ ಮಾಡುವುದು ಆತನ ನೆಚ್ಚಿನ ಹವ್ಯಾಸಗಳಾಗಿದ್ದವು. ಲ್ಯಾಟ್‍ವಿಯಾದಲ್ಲಿ ರಷ್ಯನ್ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿದ್ದಿತು. ಓಸ್ಟ್ವಾಲ್ಡ್, ಪ್ರಯಾಸದಿಂದ ರಷ್ಯನ್ ಭಾಷೆ ಕಲಿತನು. ಓಸ್ಟ್‍ವಾಲ್ಟ್, ಡೊರ್‍ಪಾಟ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1881ರಲ್ಲಿ ರಿಗಾ ಪಾಲಿಟೆಕ್ನಿಕ್‍ನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಅಲ್ಪಕಾಲದಲ್ಲೇ ಉತ್ತಮ ರಸಾಯನಶಾಸ್ತ್ರಜ್ಞನೆಂದು ಹೆಸರು ಗಳಿಸಿದ ಓಸ್ಟ್’ವಾಲ್ಡ್ ‘ಗೆ ಲೀಪ್‍ಜಿಗ್ ವಿಶ್ವವಿದ್ಯಾಲಯದಿಂದ 1887ರಲ್ಲಿ ಆಹ್ವಾನ ಬಂದಿತು. ತನ್ನ ಉಳಿದ ಜೀವನವನ್ನು ಲೀಪ್‍ಜಿಗ್‍ನಲ್ಲಿ ಕಳೆದ ಓಸ್ಟ್’ವಾಲ್ಡ್ ಲವಣ, ಎಸ್ಟರ್‍ಗಳ ಜಲ ಸಂಶ್ಲೇಷಣೆ (Hydrolysis) ದ್ರಾವಣಗಳ ವಾಹಕತೆ, ಸ್ನಿಗ್ದತೆ, ಅಯಾನಿಕರಣಗಳ ಬಗೆಗೆ ಅಧ್ಯಯನ ನಡೆಸಿದನು. ಭೌತ ರಸಾಯನಶಾಸ್ತ್ರದಲ್ಲಿ ಓಸ್ಟ್’ವಾಲ್ಡ್ ಹಲವಾರು ಹೊಸ ಮಾರ್ಗಗಳಿಗೆ ಅನುವು ಮಾಡಿದನು. ಓಸ್ಟ್’ವಾಲ್ಡ್,ನಿಜವಾಗಿಯೂ ಅಣುಗಳು ಅಸ್ಥಿತ್ವದಲ್ಲಿಲ್ಲವೆಂದು ಅವು ವಿಶ್ಲೇಷಣೆಗೆ ಉತ್ತಮ ತಳಹದಿ ಒದಗಿಸುವುದರಿಂದ ಬಳಸಬಹುದೆಂದು ನಂಬಿದ್ದನು. ಆದರೆ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅಣುಗಳ ಅಸ್ತಿತ್ವಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ದಕ್ಕಿದವು. ಜೀವನದ ಕೊನೆಯ ವರ್ಷಗಳಲ್ಲಿ ಓಸ್ಟ್’ವಾಲ್ಡ್ ಅಣು ಮತ್ತು ಪರಮಾಣುಗಳ ಅಸ್ತಿತ್ವವನ್ನು ಒಪ್ಪಿಕೊಂಡನು. 1909ರಲ್ಲಿ ಓಸ್ಟ್’ವಾಲ್ಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/9/2020