ಅರೇನಿಯಸ್, ಸ್ವಾಂತೆ (ಆಗಸ್ಟ್) (1859-1927) - ೧೯೦೩
ಸ್ವೀಡನ್-ಭೌತರಸಾಯನಶಾಸ್ತ್ರಜ್ಞ. ಆಯೋನಿಕ ವಿಘಟನೆಯ ಸಿದ್ಧಾಂತ ಮಾಡಿಸಿದಾತ.
ರೈತನ ಮಗನಾದ ಅರೇನಿಯಸ್, ಉಪ್ಸಾಲ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದನಲ್ಲದೆ, ನಂತರ ಸ್ಟಾಕ್‍ಹೋಂಗೆ ಉನ್ನತ ಪದವಿಗಾಗಿ ತೆರಳಿದನು. ಸ್ಟಾಕ್‍ಹೋಂನಲ್ಲಿ ಅರೇನಿಯಸ್ ಎಲೆಕ್ಟೋಲೈಟ್ ದ್ರಾವಣಗಳ ಸ್ವಭಾವ ಅರಿಯಲು ಉನ್ಮುಖನಾದನು. ಹಲವು ವರ್ಷಗಳ ಪರಿಶೋಧನೆಯ ನಂತರ ಎಲೆಕ್ಟೋಲೈಟ್ ದ್ರಾವಣಗಳು ವೈದ್ಯುತ್ ಪ್ರವಾಹ ಹರಿಸುವ ಕಾರಣ ನೀಡಿದನು. ಎಲೆಕ್ಟೋಲೈಟ್ ದ್ರಾವಣಗಳು ಧನ ಹಾಗೂ ಋಣ ಆವಿಷ್ಟಿತ ಕಣಗಳನ್ನು ಹೊಂದಿರುವುದರಿಂದ ವೈದುತ್ ಪ್ರವಾಹ ಹರಿಯುವುದೆಂದು ಸೋದಾಹರಣವಾಗಿ ನಿರೂಪಿಸಿದನು. 1880ರ ವೇಳೆಗೆ ಈ ಸಿದ್ಧಾಂತದ ಬಗೆಗೆ ಸಾಕಷ್ಟು ಆಧಾರಗಳನ್ನು ಅರೇನಿಯಸ್ ಒದಗಿಸಿದರೂ ಸ್ವೀಡನ್‍ನ ವೈಜ್ಞಾನಿಕ ಸಮುದಾಯದಲ್ಲಿ ತಕ್ಷಣ ಇವು ಅಂಗೀಕೃತವಾಗಲಿಲ್ಲ. ಮುಂದೆ ಲವಣಗಳು. ಘನ ಸ್ಥಿತಿಯಲ್ಲೂ ಆವಿಷ್ಟಿತ ಕಣಗಳಿಂದಾಗಿರುವುದೆಂದು ತಿಳಿಸಿದನು. ಅರೇನಿಯಸ್‍ನ ಈ ಸಾಧನೆಯನ್ನು ಗುರುತಿಸಿ 1903ರಲ್ಲಿ ರಸಾಯನಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ನೀಡಲಾಯಿತು. ಅರೇನಿಯಸ್‍ನ ಆಸಕ್ತ ರಂಗಗಳು ಹಲವು. ಭೌತಶಾಸ್ತ್ರ, ರೋಗರೋಧಶಾಸ್ತ್ರ, ವಿಶ್ವಶಾಸ್ತ್ರ ಅವನ ನೆಚ್ಚಿನ ಅಧ್ಯಯನದ ವಿಷಯಗಳಾಗಿದ್ದವು. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಹೆಚ್ಚಾದಾಗ, ವಾತಾವರಣ ಹೆಚ್ಚಿನ ಶಾಖಗಳಿಸುವ ಹಸಿರು ಮನೆ ಪರಿಣಾಮವನ್ನು ಗುರುತಿಸಿದ ಮೊದಲಿಗ ಅರೇನಿಯಸ್, ‘ಅರೇನಿಯಸ್ ಸಮಿಕರಣ’ ದ ಮೂಲ ಕತೃವೂ ಈತನೇ
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020