অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಟಾಲಿ ಎಲ್.ಗಿಂಜ್‍ಬರ್ಗ್

ವಿಟಾಲಿ ಎಲ್.ಗಿಂಜ್‍ಬರ್ಗ್

ವಿಟಾಲಿ ಎಲ್.ಗಿಂಜ್‍ಬರ್ಗ್ (1916--) ೨೦೦೩

ರಷ್ಯಾ -ಭೌತಶಾಸ್ತ್ರ-ಬೈಜಿಕಶಾಸ್ತ್ರಜ್ಞ.

ವಿಟಾಲಿ 4 ಅಕ್ಟೋಬರ್ 1968ರಂದು ಮಾಸ್ಕೋದಲ್ಲಿ ಜನಿಸಿದನು.  ಈತನ ತಂದೆ ಸಿವಿಲ್ ಇಂಜಿನಿಯರ್ ಆಗಿದ್ದು  ನೀರಿನ ಶುದ್ದೀಕರಣ ತಂತ್ರಜ್ಞಾನದಲ್ಲಿ ಹಲವಾರು ಏಕಸ್ವಾಮ್ಯಗಳನ್ನು ಪಡೆದಿದ್ದನು.  ಮಿಟಾಲಿ ನಾಲ್ಕು ವರ್ಷದವನಿರುವಾಗ ಆತನ ತಾಯಿ ಟೈಫಾಯಿಡ್‍ನಿಂದ ಮೃತಳಾದಳು.  ಮೊದಲಿನ ಜಾಗತಿಕ ಯುದ್ದ , ರಷ್ಯಾ ಕ್ರಾಂತಿಯ ಕಾಲದಲ್ಲಿ ಮಿಟಾಲಿಯ ಬಾಲ್ಯಗಳು ಸಂಕಷ್ಟದಲ್ಲಿ ಕಳೆದವು.  11ನೇ ವಯಸ್ಸಿನಲ್ಲಿ ಶಾಲೆಗೆ ಹೋಗತೊಡಗಿದ ವಿಟಾಲಿಗೆ, ಮೊದಲ ಹತ್ತು ವರ್ಷ ಒಂಟಿತನ ಕಾಡಿತು.  1931ರಲ್ಲಿ ವಿದ್ಯಾರ್ಥಿಗಳು ಕುಶಲ ಕಾರ್ಮಿಕರಾಗುವಂತೆ ತರಬೇತು ನೀಡುವ ಶಾಲೆಗಳಿಗೆ ಕಡ್ಡಾಯವಾಗಿ ಸೇರಬೇಕಾಯಿತು.  ಇದನ್ನು ಮುಗಿಸಿ, ಆಸಕ್ತರಾದವರನ್ನು ಮಾತ್ರವೇ ಉನ್ನತ ಶಿಕ್ಷಣ ಪಡೆಯುವಂತೆ ಕಾನೂನು ರಚಿಸಲಾಗಿದ್ದಿತು.  ಮಿಟಾಲಿಯ ಚಿಕ್ಕಮ್ಮ ವಿದೇಶದಿಂದ ಸರ್ಕಾರ ಆಮದು ಮಾಡಿಕೊಳ್ಳುತ್ತಿದ್ದ ವೈಜ್ಞಾನಿಕ ಉಪಕರಣಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು.  ಈಕೆಯ ಮೂಲಕ ವಿಟಾಲಿಗೆ ಎಮ್ಜೆನಿ ಬಖ್ಮೆಟಿವ್‍ನ ಪರಿಚಯವಾಯಿತು. ಎಮ್ಜೆನಿ ಕ್ಷ ಕಿರಣ ರೋಹಿತಶಾಸ್ತ್ರದಲ್ಲಿ ಪರಿಣಿತನಾಗಿದ್ದರೂ, ಆತನಿಗೆ ಸಮರ್ಪಕವಾದಂತಹ ಕೆಲಸಗಳು ಕಮ್ಯೂನಿಸ್ಟ್ ರಷ್ಯಾದಲ್ಲಿ ದೊರೆತಿರಲಿಲ್ಲ. ಎಮ್ಜೆನಿಯ ನೆರವಿನಿಂದ ವಿಟಾಲಿ  ಕ್ಷ ಕಿರಣ ಪ್ರಯೋಗಾಲಯದಲ್ಲಿ ಸಹಾಯಕನಾದನು.  1933ರಲ್ಲಿ ಮಾಸ್ಕೊ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ಸೇರಲು ಸ್ಪರ್ಥಾಪರೀಕ್ಷೆಗಳು ಜಾರಿಗೆ ಬಂದವು.  ಇದಕ್ಕಾಗಿ ಕನಿಷ್ಟ ಪ್ರೌಢಾಶಾಲಾ ಶಿಕ್ಷಣ ಪೂರೈಸಬೇಕಾಗಿದ್ದಿತು.  ಆದರೆ ವಿಟಾಲಿ ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿದ್ದನು.  ಮೂರು ತಿಂಗಳ ಕಾಲ ಖಾಸಗಿ ಉಪಾಧ್ಯಾಯನಿಂದ ಪ್ರೌಢಶಾಲೆಯ ಪಾಠಗಳನ್ನು ಕಲಿತು ಅಪಾರ ಪರಿಶ್ರಮದಿಂದ ತನ್ನ ಕೊರತೆಯನ್ನು ನೀಗಿಸಿಕೊಳ್ಳಲು ಯತ್ನಿಸಿದನಾದರೂ, ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ.  ಆದ್ದರಿಂದ ಬಾಹ್ಯ ವಿದ್ಯಾರ್ಥಿಯಾಗಿ , ನಂತರ ಒಳ ವಿದ್ಯಾರ್ಥಿಯಾಗಿ ವಿಟಾಲಿ ಪ್ರವೇಶ ಗಳಿಸುವಲ್ಲಿ ಸಫಲನಾದನು. ಶಿಕ್ಷಣ ಮುಂದುವರೆಸಿ 1940ರಲ್ಲಿ ಸ್ನಾತಕೋತ್ತರ ಪದವಿ ಪಡೆದು ಲೆಬೆಡೆವ್ ಭೌತಶಾಸ್ತ್ರ ಸಂಸ್ಥೆಯಲ್ಲಿ ಕೆಲಸಕ್ಕೆ ನಿಯೋಜಿಸಲ್ಪಟ್ಟನು. ಕಾಲೇಜಿನಲ್ಲಿರುವಾಗ, ವಿಟಾಲಿಯ ತಂದೆ, ಚಿಕ್ಕಮ್ಮ, ಹೆಂಡತಿ, ಹಾಗೂ ಮಗಳು ಒಂದೇ ಕೋಣೆಯ ಮನೆಯಲ್ಲಿ ಜೀವಿಸಿದ್ದರು. 22 ಜೂನ್ 1941ರಂದು ರಷ್ಯಾ ಎರಡನೇ ಜಾಗತಿಕ ಯುದ್ದಕ್ಕಿಳಿಯಿತು.  ಆಗ ಲೆಬೆಡೆವ್ ಭೌತಶಾಸ್ತ್ರ ಸಂಸ್ಥೆಯನ್ನು ಕಝನ್‍ಗೆ ಸ್ಥಳಾಂತರಿಸಲಾಯಿತು.  ಯುದ್ದ ಕಾಲದಲ್ಲಿ ಎಲ್ಲಾ ಬಗೆಯ ದೈಹಿಕ ಕಾರ್ಯಗಳನ್ನು ಮಾಡುವ ಅನಿವಾರ್ಯತೆ ಇಲ್ಲಿಯ ಸಿಬ್ಬಂದಿಗೆ ಬಂದೊದಗಿತು.  ಇಲ್ಲಿ ಮರದ ದಿಮ್ಮಿಗಳನ್ನು ಹೆಗಲ ಮೇಲೆ ಹೊತ್ತು ಸಾಗಿಸುವ ಹೊಣೆ ವಿಟಾಲಿಗೆ ಬಂದೊದಗಿತು.  ಈ ಕೆಲಸದಲ್ಲಿ ಕುತ್ತಿಗೆಯಲ್ಲಿನ ರಕ್ತ ನಾಳಗಳಲ್ಲಿ ಕೆಲವು ಹರಿದು ಆಸ್ಪತ್ರೆಗೆ ದಾಖಲಾದನು.  1945ರಲ್ಲಿ ಅಲೆಕ್ಸಾಂಡರ್ ಅಂಡ್ರೋನೀವ್‍ನಿಂದ ಗೋರ್ಕಿ ವಿಶ್ವವಿದ್ಯಾಲಯ ಸೇರಲು ವಿಟಾಲಿಗೆ ಅಹ್ವಾನ ಬಂದಿತು.  ಇಲ್ಲಿ ವಿಕಿರಣ ಭೌತಶಾಸ್ತ್ರ ವಿಭಾಗದ ಸಂದರ್ಶಕ ಪ್ರಾಧ್ಯಾಪಕನಾದನು.  1942ರಲ್ಲಿ ವಿಟಾಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯನಾದರೂ  ಹಿಟ್ಲರ್ ಹಾಗೂ ಸ್ಟ್ಯಾಲಿನ್ ಬೇರೆ ಬೇರೆ ರೂಪದಲ್ಲಿರುವ ಒಂದೇ ಗುಣಗಳ  ಸರ್ವಾಧಿಕಾರಿಗಳೆಂದೂ, ಆತನಿಗೆ ದಿನಗಳೆದಂತೆ  ಭಾಸವಾಗತೊಡಗಿತು.  ಕೆ.ಜಿ.ಟಿ. ಕ್ರಾಂತಿ ವಿರೋಧಿಯೆಂದು ಪರಿಗಣಿಸಿದ್ದ , ಒಮ್ಮೆ ಸೆರೆವಾಸ ಅನುಭವಿಸಿದ್ದ ನಿನಾ ಐವಾನೋನ್ನಳನ್ನು 1946ರಲ್ಲಿ ಮದುವೆಯಾದುದರಿಂದ ವಿಟಾಲಿಯ ಎಲ್ಲಾ ಚಟುವಟಿಕೆಗಳು ಬೇಹುಗಾರಿಕೆಯ ವಿಷಯವಾದವು.  ಇದರೊಂದಿಗೆ ವಿಟಾಲಿಯ ಯಹೂದಿ ಮೂಲ ಕೂಡ ಶಂಕೆಗೊಳಗಾಯಿತು.  4 ಅಕ್ಟೋಬರ 1947ರಂದು ವಿಟಾಲಿ ಹಾಗೂ ಇನ್ನಿತರರನ್ನು ದೇಶ ದ್ರೋಹಿಗಳೆಂದು ದಿನಪತ್ರಿಕೆಯೊಂದು ಲೇಖನ ಪ್ರಕಟಿಸುವುದರೊಂದಿಗೆ, ವಿಟಾಲಿಗೆ ದಕ್ಕಬೇಕಾದ ಹುದ್ದೆ, ಗೌರವ, ಬಡ್ತಿಗಳು ನಿಂತುಹೋದವು. 1948 ರಿಂದ ವಿಟಾಲಿ ಹಾಗೂ ಐ.ಟ್ಯಾಮ್‍ರನ್ನು ಜಲಜನಕ ಪರಮಾಣು ಅಸ್ತ್ರ ತಯಾರಿಕೆಯ ಯೋಜನೆಗೆ ನಿಯೋಜಿಸಲಾಯಿತು.  ಇದರಲ್ಲಿ ಕಮ್ಯುನಿಸ್ಟ್ ತತ್ತ್ವಗಳಿಗೆ ವಿರುದ್ದವಾಗಿದ್ದ ಸಖರೋವ್ ಸಹ ಭಾಗಿಯಾಗಿದ್ದನು.  ವಿಟಾಲಿ ಹಾಗೂ ಸಖರೋವ್‍ನ ಖಚಿತ ವೈಜ್ಞಾನಿಕ ಪರಿಕಲ್ಪನೆ ಹಾಗೂ ನಿಲುವುಗಳಿಂದ 29 ಆಗಸ್ಟ್ 1949ರಂದು ಸೋವಿಯತ್ ರಷ್ಯಾ ಮೊದಲ ಪರಮಾಣು ಅಸ್ತ್ರದ ಪ್ರಯೋಗ ನಡೆಸಿತು.  ಆಗ ಪ್ರಯೋಗ ನಡೆದ ಅರ್ಝಮಾಸ್-16 ನೆಲೆಗೆ ವಿಟಾಲಿಯ ಪ್ರವೇಶವನ್ನು ನಿರಾಕರಿಸಲಾಯಿತು.  ಮುಂದೆ ಬೇರೆ ಬೇರೆ ದೇಶಗಳಿಂದ ಬಂದ ಹಲವಾರು ಆಹ್ವಾನಗಳಿಗೆ, ಸಮಾರಂಭಗಳಿಗೆ ಪತ್ನಿ ಸಮೇತ ಹಾಜರಾಗುವ ಅವಕಾಶವನ್ನು ವಿಟಾಲಿಗೆ ನಿರಾಕರಿಸಲಾಯಿತು.  1985ರಲ್ಲಿ ವಿಖಾಯಿಲ್ ಗೋರ್ಬಷೆವ್‍ನಿಂದ ಪೆರೆಸ್ಟ್ರೋಯಿಕ್ ಮೂಲಕ ಸುಧಾರಣೆಗಳು ಬಂದ ನಂತರ ವಿಟಾಲಿಯ ಪರಿಸ್ಥಿತಿ ಸುಧಾರಿಸತೊಡಗಿತು.  ವಿಟಾಲಿ, ಸೋವಿಯತ್ ರಷ್ಯಾದ ಕಮ್ಯುನಿಸ್ಟ್ ಆಡಳಿತ ಕಾಲದ ಜನ ಜೀವನ, ಉಸಿರುಗಟ್ಟುವ ಪರಿಸ್ಥಿತಿ, ಸರ್ಕಾರದ ಧೋರಣೆಗಳನ್ನು ಕುರಿತಾಗಿ ಎರಡು ಕಂತುಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ.  2003ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ವಿಟಾಲಿ ನೊಬೆಲ್ ಸಮಿತಿಗೋಸ್ಕರ ಸಿದ್ದಪಡಿಸಿದ ತನ್ನ ಪರಿಚಯ ಲೇಖನದಲ್ಲಿ  ವೈಜ್ಞಾನಿಕ ಸಾಧನೆಗಳಿಗಿಂತಲೂ ಜೀವನ ಚರಿತ್ರೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾನೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 6/10/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate