ರಿಕಾರ್ಡೋ , ಗಯಾಕ್ಕೊನಿ (1931--) ೨೦೦೨
ಇಟಲಿ-ಭೌತಶಾಸ್ತ್ರ- ರೇಡಿಯೋ ದೂರದರ್ಶಕದ್ ಅಧ್ಯಯನದ ಮುಂದಾಳು
ರಿಕಾರ್ಡೋ 6 ಅಕ್ಟೋಬರ್ 1931ರಂದು ಇಟಲಿಯ ಜೆನೋವಾದಲ್ಲಿ ಜನಿಸಿದನು. ಈತನ ತಾಯಿ ಪ್ರೌಢಶಾಲಾ ಉಪಾಧ್ಯಾಯಳಾಗಿದ್ದು ಹಲವಾರು ಪಠ್ಯಪುಸ್ತಕಗಳನ್ನು ಸಹ ಲೇಖಕಿಯಾಗಿ ರಚಿಸಿದ್ದಳು. ರಿಕಾರ್ಡೋ ತಂದೆ, ಚಿಕ್ಕ ವ್ಯಾಪಾರನಾಗಿದ್ದು ಫಾ್ಯಸಿಸ್ಟ್ ವಿರೋಧಿಯಾಗಿದ್ದನು. ರಿಕಾರ್ಡೋ ಎಂಟು ವರ್ಷದವನಿರುವಾಗ ಇವರು ವಿಚ್ಛೇದನ ಪಡೆದರು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ ಹದಿಮೂರು ವರ್ಷದವನಾಗಿದ್ದ ರಿಕಾರ್ಡೋ ಚಿಕ್ಕಮ್ಮ ಹಾಗೂ ಅಜ್ಜಿಯರ ಆರೈಕೆಯಲ್ಲಿ ಬೆಳೆದನು. 1942ರಲ್ಲಿ ಮಿಲಾನೋ ಬಾಂಬ್ ದಾಳಿಗೆ ತುತ್ತಾಯಿತು. ಆದ್ದರಿಂದ ಮಿಲಾನೋ ತೊರೆದು ಹೋದ ರಿಕಾರ್ಡೋ, 1944ರಲ್ಲಿ ಮತ್ತೆ ಮರಳಿದನು. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜರ್ಮನಿಯ ಕಿಂಟರ್‍ಗಾರ್ಡನ್‍ನಲ್ಲಿ ನಂತರದ ಪ್ರಾಥಮಿಕ ಶಿಕ್ಷಣವನ್ನು ಮಿಲಿಟರಿ ಶಾಲೆಯಲ್ಲಿ ಪಡೆದನು. ಪ್ರೌಢಶಾಲೆ ಮುಗಿಸಿ ಮಿಲಾನೋ ವಿಶ್ವವಿದ್ಯಾಲಯ ಸೇರಿದ ರಿಕಾರ್ಡೋ ನಾಲ್ಕು ವರ್ಷಗಳಲ್ಲೇ ಭೌತಶಾಸ್ತ್ರದಲ್ಲಿನ ಡಾಕ್ಟರೇಟ್‍ನೊಂದಿಗೆ ಹೊರ ಬಂದನು. ಮಿಲಾನೋ ವಿಶ್ವವಿದ್ಯಾಲಯದಲ್ಲಿರುವ ಮ್ಯೂಯಾನ್, ಲ್ಯಾಂಬ್ಡಾ ಕಣ ಹಾಗೂ ಮೇಘ ಕೋಠಿಗಳ ಸಂಶೋಧನೆಯಲ್ಲಿದ್ದವರಿಗೆ ಅಲ್ಪ ನೆರವು ದೊರೆಯುತ್ತಿದ್ದಿತು. ರಿಕಾರ್ಡೋ ಪ್ರೋಟಾನ್ ಅಂತಕ್ರಿಯೆಗಳನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿದ್ದನು. ಡಾಕ್ಟರೇಟ್ ಗಳಿಸಿದ ನಂತರ ಮಿಲಾನೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವಾಗ, ಖ್ಯಾತ ಭೌತಶಾಸ್ತ್ರಜ್ಹ ಗಯ್ಸಪ್ಪೆ ಒಖಿಯಾಲಿನಿಯ ಪರಿಚಯವಾಯಿತು. ಈತನ ಸಲಹೆಯ ಮೇರೆಗೆ ರಿಕಾರ್ಡೋ ಪುಲ್‍ಬ್ರೈಟ್ ಸ್ಕಾಲರ್‍ಷಿಫ್ಗಳಿಸಿ, 1956ರಲ್ಲಿ ಅಸಂಸಂಗಳಿಗೆ ಹೋದನು. ಆರ್ ಡಬ್ಲ್ಯೂ ಥಾಮ್ಸನ್ ಹಾಗೂ ಸಂಗಡಿಗರು ಈ ಹಿಂದೆ ಮೇಘ ಕೋಠಿಗಳ (Cloud Chamber) ಮೇಲೆ ನಡೆಸಿದ್ದ ಪ್ರಯೋಗಫಲಿತಾಂಶದ ವಿಶ್ಲೇಷಣೆ ಮಾಡಿದನು. 1956ರಿಂದ 1958ರವರೆಗೆ ವಿಶ್ವಕಿರಣಗಳ ಅಧ್ಯಯನಕ್ಕಾಗಿ ಇಂಡಿಯಾನಾದ ಬ್ಲೂಮಿಂಗ್‍ಟನ್‍ನಲ್ಲಿ ಬೃಹತ್ ಮೇಘ ಕೋಠಿಯ ನಿರ್ಮಾಣ ನಡೆಯಿತು ರಿಕಾರ್ಡೋ ಇದರಲ್ಲಿ ಭಾಗಿಯಾಗಿದ್ದನು. ಆರ್.ಡಬ್ಲ್ಯೂ.ಥಾಮ್ಸನ್ ಯುವಕನಾಗಿದ್ದಾಗ ಸಂಶೋಧನೆಯಲ್ಲಿ ಪ್ರಮಾದವೆಸಗಿದ್ದನಲ್ಲದೆ, ದ್ರವ್ಯವನ್ನು ಆವಿಷ್ಕರಿಸಿದ್ದನಾದರೂ ಅವನಿಗೆ ಅದರ ಕೀರ್ತಿ ದಕ್ಕಿರಲಿಲ್ಲ. ಇವೆರಡು ಈತನನ್ನು ಬಹುವಾಗಿ ಕಾಡಿಸಿದವು. ಇಲ್ಲಿ ಥಾಮ್ಸನ್ ನೇತೃತ್ವದ ತಂಡ ಪ್ರತಿ ಲ್ಯಾಂಬ್ದಾ ಕಣಗಳ ಪತ್ತೆಯಲ್ಲಿ ವಿಫಲವಾಗಿದ್ದಿತು. ಇಲ್ಲಿಯ ಸಂಶೋಧನಾ ವಾತಾವರಣಕ್ಕೆ ಒಗ್ಗಿಕೊಳ್ಳದೆ ರಿಕಾರ್ಡೋ 1958ರಲ್ಲಿ ಪ್ರಿನ್ಸ್‍ಟನ್‍ನಲ್ಲಿದ್ದ ಜೆ.ರೆನಾಲ್ಡ್ಸ್ ಪ್ರಯೋಗಾಲಯ ಸೇರಿದನು. ಇಲ್ಲಿ ಎಮ್-ಮೆಸಾನ್‍ಗಳ ಸಂಶೋಧನೆ ನಡೆಸಿ, ರಷ್ಯಾದ ವಿಜ್ಞಾನಿಗಳು ಗುರುತಿಸಿದ್ದರೆಂದು ಹೇಳಲಾಗಿದ್ದ ಅಜ್ಞಾತ ಕಣದ ಶೋಧನೆಯಲ್ಲಿ ರಿಕಾರ್ಡೋ ವಿಫಲನಾದನು. 1959ರಲ್ಲಿ ಸಿಇಆರ್‍ಎನ್‍ಗೆ ಹೋಗಿ, ಅಲ್ಲಿ ಒಖಿಯಾಲಿನಿಯನ್ನು ಭೇಟಿ ಮಾಡಿದ ರಿಕಾರ್ಡೋಗೆ ನಿರಾಶೆ ಕಾದಿದ್ದಿತು. ಇದಕ್ಕೆ ಬದಲಾಗಿ ಎಂಐಟಿಯಲ್ಲಿನ ಹರ್ಬಲ್ ಬ್ರಿಡ್ಜ್ ತಂಡದೊಂದಿಗೆ ಅಮೆರಿಕನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ರಿಕಾರ್ಡೋಗೆ ದಕ್ಕಿತು. ವಿಶ್ವ ಕಿರಣಗಳ ಬಗೆಗಿದ್ದ ಆಸಕ್ತಿಗಳು ಬಹುತೇಕ ಕಡೆ ಕುಗ್ಗತೊಡಗಿದವು. ಇದರಿಂದ ತಾನೇನೂ ಸಾಧಿಸಲಿಲ್ಲವೆಂದು ಕೊರಗು ರಿಕಾರ್ಡೋನನ್ನು ಕಾಡಿತು. ಇದೇ ಕಾಲದಲ್ಲಿ ವ್ಯಾಲ್ ಅಲೆನ್ ಆವಿಷ್ಕರಿಸಿದ ಪಟ್ಟಿಯಲ್ಲಿನ ಆಲ್ಫಾ ಕಣ ಹಾಗೂ ಪ್ರೋಟಾನ್‍ಗಳ ಅಧ್ಯಯನ ಸಾಧ್ಯತೆ ಗೋಚರಿಸಿತು. ಇಲ್ಲಿಂದ ಮುಂದೆ ಕ್ಷ-ಕಿರಣ ದೂರದರ್ಶಕ ನಿರ್ಮಾಣದ ಆರಂಭಿಕ ಸ್ಥಿತಿಗಳಲ್ಲಿ ರಿಕಾರ್ಡೋ ಭಾಗವಹಿಸಿದನು. ರಿಕಾರ್ಡೋ ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿ ಖಭೌತಶಾಸ್ತ್ರವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇಲ್ಲಿ ಚಂದ್ರ ಎಂದು ಕರೆಯಲಾಗುತ್ತಿರುವ ಕ್ಷ-ಕಿರಣ ದೂರದರ್ಶಕ ನಿರ್ಮಾಣದಲ್ಲಿ ಭಾಗಿಯಾದನು. ಕೆಲಕಾಲದಲ್ಲೇ ಕ್ಷ- ಕಿರಣ ದೂರದರ್ಶಕ ಖಭೌತಶಾಸ್ತ್ರ ಅಧ್ಯಯನದಲ್ಲಿ ಅನನ್ಯ ಉಪಕರಣವೆಂಬುದನ್ನು ವಿಜ್ಞಾನಿಗಳು ಮನಗಂಡರು. ಈ ದೂರದರ್ಶಕದಿಂದ ದಕ್ಕುವ ದತ್ತಾಂಶ ವಿಶ್ಲೇಷಣೆಗೆ ಗಣಕ ಕ್ರಮವಿಧಿಯನ್ನು ಅಭಿವೃದ್ಧಿಪಡಿಸುವಲ್ಲಿ ರಿಕಾರ್ಡೋ ಪಾಲ್ಗೊಂಡನು. 1960ರಲ್ಲಿ ರೇಡಿಯೋ ದೂರದರ್ಶಕ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆಗೆ ಸಜ್ಜಾಗಿ, 1963ರಲ್ಲಿ ರೇಡಿಯೋ ದೂರದರ್ಶಕದಿಂದ ಖಭೌತಶಾಸ್ತ್ರದ ಅಧ್ಯಯನ ಗರಿಗೆದರಿತು . ಇವೆಲ್ಲವುದರಲ್ಲಿ ರಿಕಾರ್ಡೋ ಭಾಗಿಯಾಗಿದ್ದನು. 1970ರಲ್ಲಿ ನಾಸಾ ಸಂಸ್ಥೆಗಾಗಿ ಕ್ಷ-ಕಿರಣ ದೂರದರ್ಶಕ ವೀಕ್ಷಣಾಲಯವನ್ನು ಸ್ಥಾಪಿಸುವ ಗುತ್ತಿಗೆ ರಿಕಾರ್ಡೋ ಹಾಗೂ ಸಂಗಡಿಗರಿಗೆ ದಕ್ಕಿತು. ವೈಕಿಂಗ್ ಯೋಜನೆಯಲ್ಲಿ ಹೆಚ್ಚಿನ ಹಣ ವ್ಯಯವಾದುದರಿಂದ ಈ ಗುತ್ತಿಗೆ ಮುಂದೆ ರದ್ದಾಯಿತು. ಹಬಲ್ ಅಂತರಿಕ್ಷ ದೂರದರ್ಶಕ ನಿರ್ಮಾಣದಲ್ಲಿ ರಿಕಾರ್ಡೋ ಕೊಡುಗೆ ಗಮನಾರ್ಹವಾದುದು. 1991ರಲ್ಲಿ ಯುರೋಪಿಯನ್ ಸ್ಪೇಸ್ ಏಜೆಸ್ಸಿ ಹಿಂದೆಂದೂ ಕಂಡು, ಕೇಳರಿಯದಂತಹ ಬೃಹತ್ ದೂರದರ್ಶಕದ ನಿರ್ಮಾಣಕ್ಕೆ ಇಳಿಯಿತು. ರಿಕಾರ್ಡೋ ಇದರಲ್ಲೂ ಭಾಗಿಯಾಗಿದ್ದನು. ರೇಡಿಯೋ ದೂರದರ್ಶಕ ಹಾಗೂ ಖಗೋಳಶಾಸ್ತ್ರದ ಸಾಧನೆಗಾಗಿ ರಿಕಾರ್ಡೋ 2002ರ ನೊಬೆಲ್ ಪ್ರಶಸ್ತಿ ಪುರಸ್ಕೃತವಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/22/2020