ರಾಯ್ , ಜೆ ಗ್ಲೌಬೆರ್ –(1926--) ೨೦೦೫
ಅಸಂಸಂ-ರಸಾಯನಶಾಸ್ತ್ರ- ಕ್ಷೀಣ ಬೈಜಿಕ ಬಲಗಳನ್ನು ಕುರಿತಾದ ಸಿದ್ಧಾಂತ ನೀಡಿದಾತ.
ಗ್ಲೌಬೆರ್ ತಂದೆ ಮಾರಾಟ ಪ್ರತಿನಿಧಿಯಾಗಿದ್ದನು. ಗ್ಲೌಬೆರ್ ಬಾಲಕನಾಗಿರುವಾಗ ಅಸಂಸಂ ಆರ್ಥಿಕ ಖಿನ್ನತೆಗೊಳಗಾಗಿ ನೂರಾರು ಜನ ತಮ್ಮ ಕೆಲಸಗಳನ್ನು ಕಳೆದುಕೊಂಡು ಜೀವನೋಪಾಯಕ್ಕಾಗಿ ಪರದಾಡುವಂತಾಯಿತು. ಇದೇ ಸ್ಥಿತಿ ಎದುರಿಸಿದ ಗ್ಲೌಬೆರ್ ತಂದೆ ನ್ಯೂಯಾರ್ಕ್‍ನಲ್ಲಿ ಮುಂದಿನ ಭವಿಷ್ಯ ಕಂಡುಕೊಳ್ಳಲು ನಿರ್ಧಿರಿಸಿದನು. ಜೂಲ್ಸ್ ವರ್ನ್ , ಅಲೆಕ್ಸಾಂಡರ್ ಡ್ಯೂಮಾ, ವಾಲ್ಟರ್ ಸ್ಕಾಟ್‍ರ ರಮ್ಯಾದ್ಬುತ ಕಥೆಗಳನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದುತ್ತಾ ಗ್ಲೌಬೆರ್ ಭಾವ ಪ್ರಪಂಚ ಹಿಗ್ಗಿತು. ಉತ್ತಮ ಕಲಾವಿದ ಹಾಗೂ ಕುಶಲಕರ್ಮಿಯಾಗಬೇಕೆಂಬುದು ಗ್ಲೌಬೆರ್ ಹಂಬಲವಾಗಿದ್ದಿತು. ಪ್ರೌಢಶಾಲೆಯಲ್ಲಿರುವಾಗ ಹೆಡೆನ್ ತಾರಾಲಯಕ್ಕೆ ಭೇಟಿ ಕೊಟ್ಟ ನಂತರ ವಿಜ್ಞಾನ ಒಮ್ಮೆ ತನ್ನತ್ತ ಕೈಬೀಸಿ ಕರೆದಂತೆ ಗ್ಲೌಬೆರ್‍ಗೆ ಭಾಸವಾಯಿತು. ಇದಾದ ನಂತರ ದೂರದರ್ಶಕ , ತಾರೆ, ನಕ್ಷತ್ರ , ಮಸೂರಗಳ ಬಗೆಗೆ ಸಿಕ್ಕಿದ್ದನ್ನೆಲ್ಲಾ ಓದುವ ಗೀಳು ಗ್ಲೌಬೆರ್‍ಗೆ ಅಂಟಿಕೊಂಡಿತು. ಹವ್ಯಾಸಿಗಳಿಗಾಗಿ ಬರೆದ ಪ್ರತಿಫಲನ ದೂರದರ್ಶಕ ನಿರ್ಮಿಸುವ ಪುಸ್ತಕವನ್ನು ಕೊಂಡು,. ಗ್ಲೌಬೆರ್ ತನ್ನದೇ ಆದ ಉಪಕರಣವನ್ನು ನಿರ್ಮಿಸಿಕೊಂಡನು. ಗ್ಲೌಬೆರ್ ಇದೇ ವೇಳೆಗೆ ವಿದ್ಯಾರ್ಥಿ ವೈಜ್ಞಾನಿಕ ಸಂಘಕ್ಕೆ ಸೇರಿ ಹಲವಾರು ಭಾಷಣಗಳನ್ನು ಸಹ ನೀಡಿದನು. ಇದರ ಫಲವಾಗಿ 1914ರಲ್ಲಿ ಹಾರ್ವರ್ಡ್ ಕಾಲೇಜಿಗೆ ಪ್ರವೇಶ ದೊರೆಯಿತು. ಇದೇ ವರ್ಷ ಡಿಸೆಂಬರ್ 7 ರಂದು ಜಪಾನ್ ಪರ್ಲ್ ಹಾರ್ಬರ್‍ಗೆ ದಾಳಿಯೆಸಗಿರುವುದರಿಂದ ಅಸಂಸಂ ಎರಡನೇ ಜಾಗತಿಕ ಯುದ್ದಕ್ಕೆ ಧುಮಿಕಿತು. ಕಾಲೇಜಿನ ಸಿಬ್ಬಂದಿಯನ್ನು ಯುದ್ದ ಸೇನೆಗಳಿಗೆ ನಿಯೋಜಿಸಲಾಯಿತು. ಸೇನೆಗೆ ಸೇರಲು ಬೇಕಾಗಿದ್ದ ಕನಿಷ್ಟ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಸಲಾಯಿತು. ಇದರಿಂದ ಕಾಲೇಜಿನ ಬಹು ಸಂಖ್ಯಾತ ವಿದ್ಯಾರ್ಥಿಗಳು ಸಹ ಮಿಲಿಟg ಸೇವೆಗೆ ಹೋಗಬೇಕಾಯಿತು. ಇದರಿಂದ ಮಿಲಿಟರಿಯ ಗಾತ್ರ ಅಗತ್ಯಕ್ಕಿಂತ ಹೆಚ್ಚಾಯಿತು. ಇದಕ್ಕೆ ಪರ್ಯಾಯವಾಗಿ ಮಿಲಿಟರಿ ಕೆಲಸವನ್ನು ತರಬೇತು ನೀಡಿ ಕಾಲೇಜಿನಲ್ಲೇ ಉಳಿಸಿತು. ಅಂತಹವರ ಗುಂಪಿನಲ್ಲಿ ಗ್ಲೌಬೆರ್ ಸಹ ಸೇರಿದ್ದನು. 1943ರ ಅಕ್ಟೋಬರ್‍ನಲ್ಲಿ ರಹಸ್ಯ ಕಾರ್ಯಾಚರಣೆಗಾಗಿ ನ್ಯೂ ಮೆಕ್ಸಿಕೊದ ಮ್ಯಾನ್‍ಹಟನ್‍ಗೆ ತೆರಳುವ ಅಹ್ವಾನ ಬಂದಿತು. ಈ ವೇಳೆಗೆ ಬೈಜಿಕ ಸರಣಿ ಕ್ರಿಯೆ (Nuclear Chain Reaction)ಕುರಿತಾಗಿ ಹಲವಾರು ಲೇಖನಗಳು ಪ್ರಕಟಗೊಂಡಿದ್ದವಾದರೂ ಯುದ್ದ ಕಾಲದಲ್ಲಿ ಅವುಗಳು ಬೆಳಕಿಗೆ ಬಂದಿರಲಿಲ್ಲ. ಗ್ಲೌಬೆರ್‍ಗೆ ಇಂತಹುದೇ ಒಂದು ಯೋಜನೆ ಇದಾಗಿರಬಹುದೆಂಬ ಗುಮಾನಿ ಮೂಡಿತು. ಮ್ಯಾನ್‍ಹಟನ್ ಯೋಜನೆಯ ಕೇಂದ್ರವಾದ ಲಾಸ್ ಆಲ್ಮೋಸ್ ತಲುಪಿದ ನಂತರವೇ ನಿಯಂತ್ರಿತ ಬೈಜಿಕ ಕ್ರಿಯಾ ಸರಣಿಯನ್ನು ಅಸಂಸಂ ಸಾಧಿಸುವ ರಹಸ್ಯ ಗ್ಲೌಬೆರ್‍ಗೆ ತಿಳಿದು ಬಂದಿತು. ಇಲ್ಲಿ ಜರ್ಮನಿಗಿಂತಲೂ ಮೊದಲೇ ತಾವು ಬೈಜಿಕಾಸ್ತ್ರ ನಿರ್ಮಿಸಬೇಕೆಂಬ ತವಕ, ಕಾತರ ಪ್ರತಿಯೊಬ್ಬರಲ್ಲೂ ತುಂಬಿ ತುಳುಕುತ್ತಿದ್ದಿತು. ಇಲ್ಲಿ ಹ್ಯಾನ್ಸ್ , ಫೆಯ್ನ್’ಮನ್‍ನಂತಹ ಘಟಾನುಘಟಿಗಳಿಂದ ನೀಲ್ಸ್ ಬೊಹ್ರ್ ಹಾಗೂ ಅಗೆ ಬೊಹ್ರ್ ಆಗಾಗ್ಗೆ ಭೇಟಿ ಕೊಡುತ್ತಿದ್ದ ಖ್ಯಾತರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ಗ್ಲೌಬೆರ್ ಜೀವನ ಸಾಗಿತು. ಯುದ್ದ ಮುಗಿದ ನಂತರ 1946ರಲ್ಲಿ ಅಪೂರ್ಣಗೊಂಡಿದ್ದ ಪದವಿ ವ್ಯಾಸಂಗ ಪೂರ್ಣಗೊಳಿಸಲು ಮತ್ತೊಮ್ಮೆ ಗ್ಲೌಬೆರ್ ಕಾಲೇಜಿಗೆ ಮರಳಿ ಗ್ಲೌಬೆರ್ ಸ್ನಾತಕೋತ್ತರ ಪದವಿ ಗಳಿಸಲು ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಆಫ್ ಆಡ್ವಾನ್ಸ್‍ಡ್ ಸ್ಟಡಿಗೆ ಹೋದನು. 1950ರಲ್ಲಿ ವುಲ್ಫ್‍ಗ್ಯಾಂಗ್ ಪೌಲಿ ಈ ಸಂಸ್ಥೆಗೆ ಭೇಟಿಯಿತ್ತನು. ಇದೇ ವರ್ಷ ಗ್ಲೌಬೆರ್ ಜೂರಿಕ್‍ಗೆ ಹೋಗಿ ಪೌಲಿಯ ಕೆಳಗೆ ಒಂದು ವರ್ಷದ ಕಾಲ ಸಂಶೋಧಿಸಿದನು. ಇಲ್ಲಿಂದ ಹಿಂದಿರುಗಿದ ನಂತರ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿ ಲಿನಸ್ ಪೌಲಿಂಗ್‍ನೊಂದಿಗೆ ಬೈಜಿಕ ಚದುರಿಕೆ ಸಿದ್ಧಾಂತ ರೂಪಿಸುವಲ್ಲಿ ಶ್ರಮಿಸಿದನು. ಭಾರತೀಯ ಸಂಜಾತನಾದ ಸುದರ್ಶನ್ ಕ್ಷೀಣ ಬೈಜಿಕ ಬಲಗಳನ್ನು ಕುರಿತಾದ ಸಿದ್ಧಾಂತ ಮಂಡಿಸಿದ್ದನು. ಈ ಸಿದ್ಧಾಂತವನ್ನು ಬಳಸಿಕೊಂಡು ಗ್ಲೌಬೆರ್ , ಗ್ಲೌಬೆರ್-ಸುದರ್ಶನ್ ಸಮೀಕರಣ ರೂಪಿಸಿದನು. ಸುದರ್ಶನ್‍ನ ಮೂಲ ಸಿದ್ಧಾಂತವನ್ನು ಬಳಸಿಕೊಂಡು ಸ್ಟೀವೆನ್ ವೀನ್‍ಬರ್ಗ್, ಷೆಲ್ಡನ್ ಗ್ಲಾಷೋ ಹಾಗೂ ಅಬ್ಬಾಸ್ ಸಲಾಂ ಮುಂದುವರೆಸಿದ ಸಿದ್ಧಾಂತಗಳಿಗಾಗಿ 1979ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಜಿನೇವಾದ ಸಿಇಆರ್‍ಎನ್‍ನ ಅಧಿಕ ಚೈತನ್ಯದ ಸಂಘಟ್ಟಕಗಳಲ್ಲಿ ನಡೆಸಿದ ಪ್ರಯೋಗಗಳು ಗ್ಲೌಬೆರ್ ಸಿದ್ದಾಂತಕ್ಕೆ ಬೆಂಬಲ ಒದಗಿಸಿದವು. ಇದಕ್ಕಾಗಿ 2005ರಲ್ಲಿ ಗ್ಲೌಬೆರ್ ನೊಬೆಲ್ ಪ್ರಶಸ್ತಿ ಪಡೆದನು. ಆದರೆ ಮೂಲ ಸಿದ್ಧಾಂತ ರೂಪಿಸಿದ ಸುದರ್ಶನ್‍ನ್ನು ನೊಬೆಲ್ ಪ್ರಶಸ್ತಿಗೆ ಪರಿಗಣಿಸಲಾರದ ನೊಬೆಲ್ ಸಮಿತಿಯ ತೀರ್ಮಾನವನ್ನು ಹಲವಾರು ಖ್ಯಾತ ವಿಜ್ಞಾನಿಗಳು ವಿರೋಧಿಸಿದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019