ರೇಮಂಡ್ ,ಡೇವಿಸ್ –(1914--) ೨೦೦೨
ಅಸಂಸಂ-ಭೌತಶಾಸ್ತ್ರ-ನ್ಯೂಟ್ರಿನೋ ಸಂಶೋಧನೆಯಲ್ಲಿ ಪರಿಶ್ರಮಿಸಿದಾತ.
ಡೇವಿಸ್ 14 ಅಕ್ಟೋಬರ್ 1914 ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಜನಿಸಿದನು. ಈತನ ತಂದೆ ನ್ಯಾಷನಲ್ ಬ್ಯೂರೋ ಅಫ್ಸ್ಟ್ಯಾಂಡಡ್ರ್ಸ್‍ನಲ್ಲಿ ಛಾಯಾಗ್ರಾಹಕನಾಗಿದ್ದನು. ವಾಷಿಂಗ್ಟನ್ ಗ್ರಂಥಾಲಯದಲ್ಲಿನ ವಿಜ್ಞಾನದ ಪುಸ್ತಕಗಳು ಡೇವಿಡ್‍ನ ಮನಸೂರೆಗೊಂಡಿದ್ದವು. ವಾಷಿಂಗ್ಟನ್ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಣ ಮುಗಿಸಿದ ಡೇವಿಸ್, 1936ರಲ್ಲಿ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದನು. ಮಿಷಿಗನ್ ಮಿಡ್‍ಲ್ಯಾಂಡ್‍ನಲ್ಲಿದ್ದ ಡೆ ಕೆಮಿಕಲ್ ಕಂಪನಿ ಸೇರಿ ಅಲ್ಪ ಕಾಲದಲ್ಲೇ ಅದನ್ನು ತೊರೆದು, ಮೇರಿಲ್ಯಾಂಡ್ “ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದನು. 1942ರಲ್ಲಿ ಮೇಟ್ ವಿಶ್ವವಿದ್ಯಾಲಯದಿಂದ ಭೌತ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಮಿಲಿಟರಿ ಸೇರಿದ ಡೇವಿಸ್, ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಉತ್ಸಾಹದಿಂದ ರಾಸಾಯನಿಕ ಅಸ್ತ್ರಗಳ ಅಭಿವೃದ್ಧಿಯಲ್ಲಿ ಭಾಗವಹಿಸಿದನು. 1945ರಲ್ಲಿ ಮಿಲಿಟರಿ ಸೇವೆ ಪೂರ್ಣಗೊಳಿಸಿ ಮೊನ್ಸ್ಯಾಂಟೋ ಕೆಮಿಕಲ್ ಕಂಪನಿಯ ಮೌಂಡ್ ಪ್ರಯೋಗಾಲಯ ಸೇರಿದನು. 1948ರಲ್ಲಿ ಅದೇ ತಾನೇ ಪ್ರಾರಂಭವಾಗಿದ್ದ ಬ್ರೂಕ್‍ಹ್ಯಾವೆನ್ ರಾಷ್ಟ್ರೀಯ ಪ್ರಯೋಗಾಲಯ ಸೇರಿ ಶಾಂತಿಗಾಗಿ ಪರಮಾಣು ಶಕ್ತಿಯನ್ನು ಪಡೆಯುವ ಸಂಶೋಧಕ ತಂಡದ ಸದಸ್ಯನಾದನು, ಬ್ರೂಕ್‍ಹ್ಯಾವೆನ್ ಪ್ರಯೋಗಾಲಯದಲ್ಲಿ , 1946ರಲ್ಲಿ ಬ್ರುನೋ ಪಾಂಟಿಕೊರ್ವೋ ಸೂಚಿಸಿದ್ದ ಕ್ಲೋರಿನ್-ಆರ್ಗಾನ್ ಪತ್ತೆ ವಿಧಾನದಲ್ಲಿ ನ್ಯೂಟ್ರಿನೋಗಳನ್ನು ಹುಡುಕಲು ಪ್ರಾರಂಭಿಸಿದನು. ಈ ವಿಧಾನದಲ್ಲಿ 37 ಕ್ಲೋರಿನ್ ಪರಮಾಣು ನ್ಯೂಟ್ರಿನೋದೊಂದಿಗೆ ಪ್ರತಿಕ್ರಿಯೆ ಹೊಂದಿ 37 ಆರ್ಗಾನ್ ಆಗುತ್ತದೆ. ಆರ್ಗಾನ್ ಆದರ್ಶ ಅನಿಲವಾಗಿದ್ದು 35 ದಿನಗಳ ಅರ್ಧಾಯುಷ್ಯ ಹೊಂದಿರುತ್ತದೆ. ಆದರೆ ಡೇವಿಸ್ ಪ್ರಯೋಗಗಳಿಂದ ನ್ಯೂಟ್ರಿನೋ ಪತ್ತೆಯಾಗಲಿಲ್ಲ. ಆ ಕಾಲದಲ್ಲಿ ನ್ಯೂಟ್ರಿನೋಗಳಂತೆಯೇ ಪ್ರತಿ ನ್ಯೂಟ್ರಿನೋಗಳಿರುವುದು ತಿಳಿದಿರಲಿಲ್ಲ. ಇವೆರಡು ಕಣಗಳು ಸರ್ವ ಸಾಮ್ಯದಲ್ಲೂ ಇಲ್ಲ. ಮುಂದೆ, ಡೇವಿಡ್ ಸವನ್ನ ರಿವರ್ ಪ್ರತಿಕ್ರಿಯಾಕಾರಕದಲ್ಲಿ (Reactor) ವಿಸ್ತೃತ ತಯಾರಿ ನಡೆಸಿ ನ್ಯೂಟ್ರಿನೋಗಳನ್ನು ಪಡೆದನು. ಈ ಹಿನ್ನೆಲೆಯಲ್ಲಿ ನ್ಯೂಟ್ರಿನೋಗಳ ಮೇಲೆ ಹೆಚ್ಚಿನ ಸಂಶೋಧನೆ ಮಾಡಿದ ಫೆ್ರಡ್ ರೀನ್ಸ್ ಮುಂದೆ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು. ಡೇವಿಡ್, ಆಲಿವರ್ ಷಾಫೆರ್‍ನೊಂದಿಗೆ, ಶಿಲೆಗಳ ಮೇಲೈನಲ್ಲಿರುವ 36ಕ್ಲೋರಿನ್‍ನಿಂದ ಅವುಗಳ ಅವಧಿ ನಿರ್ಧರಿಸುವ ವಿಧಾನವನ್ನು ರೂಪಿಸಿದನು. ವೇಗೋತ್ಕರ್ಷಕ ದ್ರವ್ಯ ರೋಹಿತ ಮಾಪನೆ ಬಂದ ನಂತರ ಭೂರಸಾಯನಶಾಸ್ತ್ರದಲ್ಲಿ ಇವರ ವಿಧಾನ ಪ್ರಾಮುಖ್ಯತೆ ಗಳಿಸಿತು. ಇವರು ಉಲ್ಕೆಯೊಂದರ ತುಣುಕಿನಲ್ಲಿದ್ದ 36ಕ್ಲೋರಿನ್‍ನಿಂದ ವಿಕಿರಣಪಟುತ್ವ (Radioactivity) ಹಾಗೂ ಅದರ ಸಂಚಯಿತವಾದ ಶೈಥಿಲ್ಯದ ಉತ್ಪನ್ನ ಅಳೆದು ಅದರ ಅವಧಿಯನ್ನು ಸಹ ನಿರ್ಧರಿಸಿದರು. ವಿಕಿರಣಪಟುತ್ವ ಹೊಂದಿದ ಆರ್ಗಾನ್ ಸಮಸ್ಥಾನಿಗಳನ್ನು (Isotope) ಅಳೆದು ಸೌರವ್ಯವಸ್ಥೆಯ ಆಂತರ್ಯದಲ್ಲಿರುವ ವಿಶ್ವ ಕಿರಣಗಳ ತೀವ್ರತೆಯ ವ್ಯತ್ಯಾಸವನ್ನು ಅಳೆದರು. ಚಂದ್ರ ಯಾನದಲ್ಲಿ ತಂದ ಶಿಲೆಗಳಲ್ಲಿನ 37-ಅರ್ಗಾನ್, 39-ಆರ್ಗಾನ್ ಟ್ರೈಟಿಯಂ ಹಾಗೂ 222RN ಗಳ ಪ್ರಮಾಣದ ಮೂಲಕ ಚಂದ್ರ ವಾತಾವರಣವನ್ನು ವಿವರಿಸುವಲ್ಲಿ ಡೇವಿಸ್ ಭಾಗಿಯಾಗಿದ್ದನು.ಡೇವಿಸ್ ಸೂರ್ಯನಿಂದ ಹೊರ ಹೊಮ್ಮುವ ನ್ಯೂಟ್ರಿನೋಗಳ ಪತ್ತೆಗಾಗಿ ಓಹಿಯೋ ರಾಜ್ಯದ ಆಕ್ರಾನ್ ಬಳಿಯಿರುವ 750 ಮೀ ಆಳದ ಬಾರ್ಬೆರ್ಟಾನ್ ಸುಣ್ಣದ ಗಣಿಯೊಂದನ್ನು ಆಯ್ದುಕೊಂಡನು. 1950ರಲ್ಲಿ ಪ್ರೋಟಾನ್-ಪ್ರೋಟಾನ್‍ಗಳ ಸರಣಿ ಪ್ರತಿಕ್ರಿಯೆಯಿಂದ ನ್ಯೂಟ್ರಿನೋಗಳು ಉತ್ಪನ್ನವಾಗುವುವೆಂದು ನಂಬಲಾಗಿದ್ದಿತು. ಆದರೆ ಈ ಮೂಲದ ನ್ಯೂಟ್ರಿನೋಗಳ ಚೈತನ್ಯ ಭಾವಿಸುದದ್ದಕ್ಕಿಂತಲೂ ಕಡಿಮೆಯಿದ್ದಿತು. ಬ್ರೂಕ್‍ಹೇವನ್ ಪ್ರಯೋಗಾಲಯ ಅಸಂಸಂ ಪರಮಾಣು ಚೈತನ್ಯ ಸಮಿತಿಯ ನೆರವಿನಿಂದ ಡೇವಿಸ್ ದಕ್ಷಿಣ ಡಕೋಟಾದ ಲೀಡ್‍ನಲ್ಲಿರುವ ಚಿನ್ನದ ಗಣಿಯಲ್ಲಿ ಸುಮಾರು 1.6 ಕಿ,ಮೀ ಭೂಗರ್ಭದಲ್ಲಿ ಸೌರ ನ್ಯೂಟ್ರಿನೋ ಅಧ್ಯಯನ ಕೈಗೊಂಡನು. ಇದರಿಂದ, ಲೆಕ್ಕಾಚಾರ ಹಾಕಿದುದರ ಮೂರನೇ ಒಂದರಷ್ಟು ಮಾತ್ರ ಸೌರ ನ್ಯೂಟ್ರಿನೋಗಳು ಹೊರ ಹೊಮ್ಮುವುದೆಂದು ತಿಳಿದು ಬಂದು ಸೌರ ನ್ಯೂಟ್ರಿನೋ ಸಮಸ್ಯೆ ಎದುರಾಯಿತು. ಇದು ಭೌತಶಾಸ್ತ್ರಜ್ಞರ ಗಮನ ಸೆಳೆಯಿತು. ಇದಕ್ಕೆ ವಿವರ ನೀಡುವ ಪ್ರಯತ್ನಗಳು ಸಾಗಿದವು. ಆದರೆ ಅವು ಯಾವುವು ಸಮರ್ಪಕವಾಗಿರಲಿಲ್ಲ. ಕೆನಡಾ ದೇಶದ ಓಂಟೋರಿಯಾ ರಾಜ್ಯದ , ಸಂಡ್‍ಟರಿಯಲ್ಲಿರುವ ನಿಕೆಲ್ ಗಣಿಯ ಆಳದಲ್ಲಿ ನಡೆಸಿದ ಬೃಹತ್ ಹಾಗೂ ವಿಸ್ತೃತ ಪ್ರಮಾಣದ ಪ್ರಯೋಗಗಳಿಂದ ಸೌರ ನ್ಯೂಟ್ರಿನೋಗಳ ಪ್ರಮಾಣ ಸೈದ್ಧಾಂತಿಕ ಲೆಕ್ಕಚಾರಕ್ಕೆ ತಾಳೆಯಾಗುವುದೆಂದು ತಿಳಿದುಬಂದು ಸೌರ ನ್ಯೂಟ್ರಿನೋ ಸಮಸ್ಯೆಗೆ ಸಧ್ಯದಲ್ಲಿ ಪರಿಹಾರ ಒದಗಿಸಿವೆ. ಸೂರ್ಯನಿಂದ ಹೊರ ಹೊಮ್ಮಿದ ನ್ಯೂಟ್ರಿನೋಗಳು ಮಾರ್ಗ ಮಧ್ಯದಲ್ಲಿ ಎಂ ಹಾಗೂ ಮ್ಯೂನ್ಯೂಟ್ರಿನೋಗಳಾಗಿ ಬದಲಾಗುವುವೆಂದೂ ಇಂತಹ ವಿದ್ಯಾಮಾನ ನ್ಯೂಟ್ರಿನೋ ಆಂದೋಳನವೆಂದು (Oscillation) ತಿಳಿದು ಬಂದಿದೆ. ಕ್ಲೋರಿನ್ ಆರ್ಗಾನ್ ವಿಕಿರಣಪಟುತ್ವ ವಿಧಾನದಿಂದ , ಎಲೆಕ್ಟ್ರಾನ್ ನ್ಯೂಟ್ರಿನೋಗಳನ್ನು ಮಾತ್ರ ಪತ್ತೆ ಹಚ್ಚಬಹುದೆಂದು ಈಗ ಖಚಿತವಾಗಿದೆ. ನ್ಯೂಟ್ರಿನೋಗಳನ್ನು ಕುರಿತು ಡೇವಿಸ್ ನಡೆಸಿದ ಸಂಶೋಧನೆಗಳಿಗಾಗಿ 2002ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/2/2020