ಮಸಾತೋಷಿ ಕೋಷಿಬಾ –(1961--) ೨೦೦೨
ಜಪಾನ್-ಭೌತಶಾಸ್ತ್ರ- ಕಣಗಳ ಸಂಶೋಧನೆಯ ಮುಂದಾಳು.
ಮಸಾತೋಷಿ 19 ಸೆಪ್ಟೆಂಬರ್ 1926 ರಂದು ಟೊಯೊಹಸಿ ನಗರದಲ್ಲಿ ಜನಿಸಿದನು. 1951ರಲ್ಲಿ ಟೋಕಿಯೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದನು. 1953ರಲ್ಲಿ ಅಸಂಸಂಗಳಿಗೆ ತೆರಳಿ ನ್ರ್ಯಯಾರ್ಕ್‍ನ ರೊಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ವಿಶ್ವ ಕಿರಣಗಳ ಅತ್ಯಧಿಕ ಚೈತನ್ಯದ ವಿದ್ಯಾಮನದ ಬಗೆಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದನು. 1955ರಿಂದ 1958ರವರೆಗೆ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕನಾದನು. 1955ರಿಂದ 1963ರವರೆಗೆ ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಚಿಕಾಗೋ ವಿಶ್ವವಿಶ್ವವಿದ್ಯಾಲಯದ ಅಧಿಕ ಚೈತನ್ಯ ಪ್ರಯೋಗಾಲಯದ ನಿರ್ದೇಶಕನಾದನು. 1984ರಲ್ಲಿ ಅಂತರಾಷ್ಟ್ರೀಯ ಕಣ ಭೌತಶಾಸ್ತ್ರ ಸಂಘಟನೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದನು. ಹಲವಾರು ವಿಶ್ವವಿದ್ಯಾಲಯ ಭೌತಶಾಸ್ತ್ರದ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಮಸಾತೋಷ ಕಣ ಭೌತಶಾಸ್ತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2002ರ ನೊಬೆಲ್ ಪ್ರಶಸ್ತಿ ನೀಡಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/1/2019