ಫ್ರಾಂಕ್, ವಿಲ್ಕ್‍ಝೆಕ್ (1951--) ೨೦೦೪
ಅಸಂಸಂ-ಭೌತಶಾಸ್ತ್ರ-ಪ್ರಬಲ ಬೈಜಿಕ ಬಲಗಳನ್ನು ವಿವರಿಸುವ ಸಿದ್ಧಾಂತ ನೀಡಿದಾತ.
ಫ್ರಾಂಕ್ ತಂದೆಯ ಪೂರ್ವಜರು ಪೋಲೆಂಡ್‍ನವರಾಗಿದ್ದು, ತಾಯಿಯ ಕಡೆಯವರು ಇಟಲಿ ಮೂಲದವರಾಗಿದ್ದರು. ಈ ಕುಟುಂಬಗಳು ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಅಸಂಸಂಗಳಿಗೆ ವಲಸೆ ಬಂದಿದ್ದವು. ಫ್ರಾಂಕ್ 1951ರಲ್ಲಿ ನ್ಯೂಯಾರ್ಕ್ ನಗರದ ಹೊರವಲಯದಲ್ಲಿ ಜನಿಸಿದನು. ಫಾ್ರಂಕ್‍ನ ತಂದೆ ಆರ್ಥಿಕ ಖಿನ್ನತೆಯ ಕಾಲದಲ್ಲಿ ಕಡುಕಷ್ಟ ಅನುಭವಿಸಿದ್ದನು. ತನ್ನ ಮಕ್ಕಳು ವೈದ್ಯಕೀಯ ಅಥವಾ ತಾಂತ್ರಿಕ ಪದವಿ ಗಳಿಸಿದರೆ, ಜಗತ್ತಿನಲ್ಲಿ ಎಲ್ಲಾದರೂ ಸುಖವಾಗಿ ಬಾಳಬಲ್ಲರೆಂದು ಯೋಚಿಸಿದ್ದನು. ಆದರೆ ಇದಕ್ಕೆ ಬದಲಾಗಿಫ್ರಾಂಕ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಗಳಿಸಿದನು. ಪ್ರಬಲ ಬೈಜಿಕ ಬಲಗಳನ್ನು ವಿವರಿಸುವ ಕ್ಯು-ಸಿ-ಡಿ ಸಿದ್ಧಾಂತ ರೂಪಿಸುವಲ್ಲಿಫ್ರಾಂಕ್ ಭಾಗವಹಿಸಿದ್ದನು. ಅಂಶಿಕ ಕ್ವಾಂಟಂ ಸಂಖ್ಯೆಗಳು , ಪಾರವಿಕಲ್ಪಿತ (Transmutated) ಕ್ವಾಂಟಂ ಸ್ಥಿತಿಶಾಸ್ತ್ರ, ಅತಿಪ್ರವಾಹಿತೆಗಳ (Transmutated) ಸಿದ್ಧಾಂತದಲ್ಲಿ ಫ್ರಾಂಕ್ ಗಮನಾರ್ಹ ಕೊಡುಗೆ ನೀಡಿದ್ದಾನೆ. ಇದಕ್ಕಾಗಿ 2004ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019