ಡೇವಿಡ್ ಜೆ.ಗ್ರಾಸ್ –(1941--) ೨೦೦೪
ಅಸಂಸಂ-ಭೌತಶಾಸ್ತ್ರ-ಮೂಲ ಬಲಗಳನ್ನು ಐಕ್ಯಗೊಳಿಸುವ ಸೂತ್ರ ಸಿದ್ಧಾಂತ ಮಂಡಿಸಿದಾತ.
ಡೇವಿಡ್‍ನ ಪೂರ್ವಜರು ಜೆಕೆಸ್ಲೋವಿಕಿಯಾ ಮತ್ತು ಹಂಗರಿ ಮೂಲದ ಯಹೂದಿಗಳಾಗಿದ್ದು ಅಸಂಸಂಗಳಿಗೆ ಬಂದು ನೆಲೆಸಿದ್ದರು. ಡೇವಿಡ್ 19 ಫೆಬ್ರವರಿ 1941ರಂದು ಫಿಲೆಡೆಲ್ಫಿಯಾದಲ್ಲಿ ಜನಿಸಿದನು. ಡೇವಿಡ್ ವಾಷಿಂಗ್ಟನ್‍ನ ಉಪನಗರ ಅರ್ಲಿಂಗ್ಟನ್‍ನಲ್ಲಿ ಬಾಲ್ಯವನ್ನು ಕಳೆದನು. 1953ರಲ್ಲಿ ಇಸ್ರೇಲಿಗೆ ನೆರವು ನೀಡಲು ಅಸಂಸಂದ ಅಧ್ಯಕ್ಷ ನಿಯೋಜಿಸಿದ ತಂಡದಲ್ಲಿ ಡೇವಿಡ್‍ನ ತಂದೆಯೂ ಸೇರಿದ್ದನು. ಈತ 1955ರಲ್ಲಿ ಜೆರುಸಲೇಂನ ಹೀಬ್ರೂ ವಿಶ್ವವಿದ್ಯಾಲಯ ಸೇರಿದನು. ಹೀಬ್ರೂನ ಬಗೆಗೆ ಒಂದಕ್ಷರವೂ ಗೊತ್ತಿರದಿದ್ದ ಡೇವಿಡ್‍ಗೆ ಅದನ್ನು ಕಲಿಯಲೇಬೇಕಾದ ಅನಿವಾರ್ಯತೆ ಬಂದೊದಗಿತು. ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಗಳಿಸಿದ ಡೇವಿಡ್ ಅಸಂಸಂದ ಕಾಲೇಜುಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆಯಲು ಅರ್ಜಿ ಸಲ್ಲಿಸಿದನು. ಆ ಕಾಲದಲ್ಲಿ ಇಸ್ರೇಲ್ ದೇಶದ ಹೆಸರು ಹಾಗೂ ಅಲ್ಲಿನ ವಿದ್ಯಾರ್ಥಿಗಳು ಅಸಂಸಂದಲ್ಲಿ ಅಪರಿಚಿತರಾಗಿದ್ದರು. ಡೇವಿಡ್ ಬಕ್ರ್ಲೆಯಲ್ಲಿರುವ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯ ಸೇರಿ, ಅಲ್ಲಿ ಕಣ ಭೌತಶಾಸ್ತ್ರ ವಿಭಾಗಕ್ಕೆ ಸೇರ್ಪಡೆಯಾದನು. 1966ರಲ್ಲಿ ಪದವಿ ಗಳಿಸಿ, ಹಾರ್ವರ್ಡ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದನು. ಈ ಅವಧಿಯಲ್ಲಿ, ಸೈದ್ಧಾಂತಿಕ ಭೌತಶಾಸ್ತ್ರದ ಖ್ಯಾತರಾದ ಷ್ಟಿಂಜರ್, ಷೆಲ್ಲಿ ,ಗ್ಲಾಷೋ ಹಾಗೂ ಸಿಡ್ನಿ ಕೊಲಮನ್ ಕಾರ್ಯನಿರತರಾಗಿದ್ದರು. 1969ರಲ್ಲಿ ಪ್ರಿನ್ಸ್‍ಟನ್‍ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇರಿದ ಡೇವಿಡ್ ಅಲ್ಲಿ ಹಿರಿಯ ಸಹೋದ್ಯೋಗಿಗಳಾದ ಮುರ್ಫ್’ ಗೋಲ್ಡ್ ಬರ್ಜರ್ ಹಾಗೂ ಸ್ಯಾಮ್ ಟ್ರೀಮನ್‍ನೊಂದಿಗೆ ಮುಂದೆ 27 ವರ್ಷಗಳ ಕಾಲ ಸಂಶೋಧನೆ ನಡೆಸಿದನು. ನಿಸರ್ಗದ ಎಲ್ಲಾ ಮೂಲ ಬಲಗಳನ್ನು ಸೇರಿಸುವ ಐಕ್ಯತಾ ಸಿದ್ಧಾಂತವನ್ನು ರೂಪಿಸಲು 1980ರಿಂದ ಡೇವಿಸ್ ಯತ್ನಿಸಿದನು. ಇದರ ಫಲವಾಗಿ 1984ರಲ್ಲಿ ಡೇವಿಡ್ ಹಾಗೂ ಸಂಗಡಿಗರು ಸೂತ್ರ ಸಿದ್ಧಾಂತ (String Theory ) ರೂಪಿಸಿದರು. ಇದಕ್ಕಾಗಿ ಡೇವಿಡ್ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/8/2020