ಜಾನ್ , ಲೆವಿಸ್ ಹಾಲ್ ( 1934---) ೨೦೦೫
ಅಸಂಸಂ- ಭೌತಶಾಸ್ತ್ರ-ಲೇಸರ್ ಅನ್ವಯಿತ ಅಳತೆ ಹಾಗೂ ಮಾಪನೆಗಳ ಅಭಿವೃದ್ಧಿಗೆ ಶ್ರಮಿಸಿದಾತ.
ಹಾಲ್ 21 ಆಗಸ್ಟ್ 1934ರಂದು ಕೊಲರಡೋ ಪ್ರಾಂತದ ಡೆನ್‍ವರ್‍ನಲ್ಲಿ ಜನಿಸಿದನು. ಹಾಲ್ ತಂದೆ ವೈದ್ಯುತ್ ಇಂಜಿನಿಯರಾಗಿದ್ದು ಸರ್ಕಾರಿ ಸೇವೆಯಲ್ಲಿದ್ದನು. ಪ್ರೌಢಾಶಾಲಾ ಶಿಕ್ಷಣ ಮುಗಿಸಿದ ನಂತರ ವೆಸ್ಟಿಂಗ್ ಹೌಸ್ ವಿದ್ಯಾರ್ಥಿ ವೇತನ ಗಳಿಸಿ ಈಗ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯವೆಂದು ಹೆಸರಾಗಿರುವ ಆಗಿನ ಕಾರ್ನೆಗೆ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. 1961ರಲ್ಲಿ ಇಲ್ಲಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಸಿಎಎಫ್ ಸ್ಪಟಿಕಗಳ, ಜಲಜನಕದ ಅಣುಗಳ ಅತಿಸೂಕ್ಷ್ಮ ರೋಹಿತ ಪಟ್ಟಿಗಳ ಅಧ್ಯಯನ ನಡೆಸಿದನು. ನಂತರ ರಾಷ್ಟ್ರೀಯ ಮಾನಕ ಸಂಸ್ಥೆ ಸೇರಿದನು. 1962 ರಿಂದ ಲೇಸರ್ ತಂತಜ್ಞಾ ನ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ನಿರತನಾದನು. ನೂರಾರು ಸಂಶೋಧನಾ ಲೇಖನ ಪ್ರಕಟಿಸಿರುವ ಹಾಲ್ ಹಲವಾರು ತಾಂತ್ರಿಕ ಸ್ವಾಮ್ಯಗಳನ್ನು ಸಹ ಹೊಂದಿದ್ದಾನೆ. 2004ರಲ್ಲಿ ನಿವೃತ್ತನಾದ ನಂತರ ಹಾಲ್ ಸ್ಟೇಬಲ್ ಲೇಸರ್ಸ್ ಎನ್ನುವ ಸಮಾಲೋಚನಾ ಸಂಸ್ಥೆ ಸ್ಥಾಪಿಸಿ ಕ್ರಿಯಾಶೀಲನಾಗಿದ್ದಾನೆ. ಲೇಸರ್ ಅನ್ವಯಿತ ಅಳತೆ ಹಾಗೂ ಮಾಪನೆಗಳಲ್ಲಿನ ಪರಿಶ್ರಮಕ್ಕಾಗಿ ಹಾಲ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/29/2019