ಜಾನ್ , ಕ್ರಾಮ್‍ವೆಲ್ ಮ್ಯಾಥರ್ (1946--) ೨೦೦೭
ಖಭೌತಶಾಸ್ತ್ರ-ವಿಶ್ವದ ಉಗಮ ಕುರಿತಾದ ಸಾಕ್ಷ್ಯಾಧಾರಗಳ ಸಂಗ್ರಹಣೆಯ ಯೋಜನೆ ರೂಪಿಸಿದಾತ.
ಜಾನ್, 7 ಆಗಸ್ಟ್ 1946ರಂದು ವರ್ಜೀನಿಯಾದ ರೋವನ್‍ಓಕ್‍ನಲ್ಲಿ ಜನಿಸಿದನು. ಬಕ್ರ್ಲೆಯ ಕ್ಯಾಲಿಫೋರ್ನೀಯಾ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ಟಾರ್ಥ್‍ಮೋರ್ ಕಾಲೇಜಿನಿಂದ ಭೌತಶಾಸ್ತ್ರದ ಪದವಿ ಹಾಗೂ ಡಾಕ್ಟರೇಟ್ ಗಳಿಸಿದನು. ಮ್ಯಾಥರ್ ಈಗ ಅಸಂಸಂಗಳ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ಮೇರಿಲ್ಯಾಂಡ್‍ನಲ್ಲಿರುವ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್‍ನಲ್ಲಿ ಪ್ರಾಧ್ಯಾಪಕನಾಗಿದ್ದಾನೆ,. ಈ ವಿಶ್ವದ ಉಗಮ ಮಹಾಬಾಜಣೆಯಿಂದಾಗಿದೆಂಬ ಸಿದ್ದಾಂತವಿದೆ. ಇದು ನಿಜವಾಗಿದ್ದಲ್ಲಿ ವಿಶ್ವದ ಹಿನ್ನೆಲೆಯಲ್ಲಿ ಅದರ ಉಳಿಕೆಯಾಗಿ ಸೂಕ್ಷ್ಮ ತರಂಗ ಹಿನ್ನೆಲೆಯ ಕಪ್ಪುಕಾಯದ ವಿಕಿರಣತೆ ವ್ಯಾಪಿಸಿರಬೇಕು. ಇಂತಹ ಹಿನ್ನೆಲೆ ವಿಕಿರಣತೆಯನ್ನು ಶೋಧಿಸಲು ವಿಶ್ವ ಹಿನ್ನೆಲೆ ಶೋಧಕ (COBE-Cosmic Back Ground Exploration) ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆಯ ರೂವಾರಿಗಳು ಜಾರ್ಜ್ ಸ್ಮೂಲ್ ಮತ್ತು ಮ್ಯಾಥರ್ ಜಾರ್ಜ್. ಸ್ಮೂಲ್ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಜನ ವಿಜ್ಞಾನಿಗಳು ಹಾಗೂ ಇಂಜಿನಿಯರ್‍ಗಳು ಈ ಯೋಜನೆಯಲ್ಲಿ ಭಾಗಿಗಳಾಗಿದ್ದಾರೆ. ಈ ಯೋಜನೆಯಲ್ಲಿ ದೊರೆತ ದತ್ತಾಂಶಗಳಿಂದ ವಿಶ್ವದ ಉಗಮ ಮಹಾ ಬಾಜಣೆಯಿಂದಾUದೆಯೆನ್ನುವುದಕ್ಕೆ ಪುರಾವೆಗಳು ಲಭ್ಯವಾಗಿವೆ. ವಿಶ್ವದ ಹಿನ್ನೆಲೆಯಲ್ಲಿರುವ ಸೂಕ್ಷ್ಮತರಂಗ ಎಲ್ಲಾ ಕಡೆಗೂ ಒಂದೇ ಬಗೆಯದಾಗಿರದೆ ಅಸಮದೈಶಿಕವಾಗಿದೆಯೆಂದು (Anisotropic) ಗೊತ್ತಾಗಿದೆ. ಮ್ಯಾಥರ್ ಹಾಗೂ ಜಾನ್ ಸ್ಮೂಲ್‍ರ ಪ್ರಯೋಗಗಳಿಂದ ವಿಶ್ವದ ಉಗಮ, ವಿಕಾಸದ ಬಗೆಗೆ ವೈಜ್ಞಾನಿಕ ವಿವರಣೆಗಳು ದಕ್ಕಿವೆ. ವಿಶ್ವಶಾಸ್ತ್ರ (Cosmology) ಇವರ ಕಾರ್ಯಗಳಿಂದ ಸಿದ್ಧಾಂತಗಳಿಂದ, ಪರಿಶೋಧನೆಗಳತ್ತ ಸಾಗಿತು. ಈ ನಿಟ್ಟಿನಲ್ಲಿನ ಪರಿಶ್ರಮಕ್ಕಾಗಿ ಮ್ಯಾಥರ್ 2007ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019