ಅಲೆಕ್ಸ್ ಎ.ಅಬ್ರಿಕೊಸೊವ್ (1928- ) ೨೦೦೩
ರಷ್ಯಾ-ಭೌತಶಾಸ್ತ್ರ- ಅತಿವಾಹಕತೆ ಸಂಶೋಧನೆಯ ಮುಂಚೂಣಿಗ.
ಅಲೆಕ್ಸ್ 25 ಜೂನ್ 1928ರಂದು ಮಾಸ್ಕೋದಲ್ಲಿ ಜನಿಸಿದನು. 1943ರಲ್ಲಿ ಪ್ರೌಢಶಿಕ್ಷಣ ಪೂರೈಸಿದ ನಂತರ ಇನ್ಸ್ಟಿಟಿಟ್ಯೂಟ್ ಆ¥sóï ಪವರ್ ಇಂಜಿನಿಯರ್ಸ್‍ಗೆ ಸೇರಿದನಾದರೂ 1945ರಲ್ಲಿ ಮಾಸ್ಕೋ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗಕ್ಕೆ ವರ್ಗಾಯಿಸಲ್ಪಟ್ಟನು. 1948ರಲ್ಲಿ ಪದವಿಯೊಂದಿಗೆ ಹೊರಬಂದು, ಈಗ ಪಿ.ಎಲ್ ಕಪಿಟ್ಜಾ ಸಂಸ್ಥೆಯೆಂದು ಹೆಸರಾಗಿರುವ ಆಗಿನ ಭೌತ ಸಮಸ್ಯೆಗಳ ಪರಿಹಾರ ಸಂಸ್ಥೆ ಸೇರಿದನು. ಇಲ್ಲಿ ಲ್ಯಾಂಡೋ ಮಾರ್ಗದರ್ಶನದಲ್ಲಿ ಪೂರ್ಣ ಹಾಗೂ ಅಂಶಿಕವಾಗಿ ಅಯಾನೀಕರಣಗೊಂಡ ಪ್ಲಾಸ್ಮಾಗಳಲ್ಲಿನ ಔಷ್ಣೀಯ ವಿಸರಣೆ ಕುರಿತಾಗಿ ಸಂಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಸಹಾಯಕ ಬೋಧಕ ಸಿಬ್ಬಂದಿಯಾದನು. ಈ ಸಂಸ್ಥೆಯಲ್ಲಿ 1951ರಲ್ಲಿ ನಡೆಯುತ್ತಿದ್ದ ಅತಿವಾಹಕತೆಯ ಪ್ರಯೋಗಗಳಲ್ಲಿ ಭಾಗಿಯಾದನು. ಇದರ ಫಲಿತಾಂಶವಾಗಿ ಅತಿವಾಹಕಗಳ ಎರಡನೇ ವರ್ಗದ ಆವಿಷ್ಕಾರವಾಯಿತು. ಮುಂದುವರೆದ ಸಂಶೋಧನೆಗಳಿಂದ ಅತಿವಾಹಕಗಳಲ್ಲಿ ಉಗಮಗೊಳ್ಳುವ ಕ್ವಾಂಟಂ ಸುಳಿಗಳ ಸ್ವರೂಪ ತಿಳಿದು ಬಂದಿತು. ಈಗ ಇವನ್ನು ಅಬ್ರಿಕೊಸೊವ್ ಸುಳಿಗಳೆಂದೇ ಕರೆಯಲಾಗುತ್ತಿದೆ. 1957ರಲ್ಲೇ ಇದರ ವಿವರಣೆಯನ್ನು ಅಬ್ರಿಕೊಸೊವ್ ನೀಡಿದ್ದನು. ಹತ್ತು ವರ್ಷಗಳ ನಂತರವಷ್ಟೇ ಇವನ್ನು ಪ್ರಯೋಗಗಳಿಂದ ಖಚಿತಪಡಿಸಲಾಯಿತು. ಇದೇ ಕಾಲದಲ್ಲಿ ಜಲಜನಕದಲ್ಲಿ ಅವಾಹಕ ಪರಮಾಣು ಪ್ರಾವಸ್ಥೆಯಿಂದ (Phಚಿse) ಪರಮಾಣ್ವಿಕ ಲೌಹಿಕ ಪ್ರವಾಸ್ಥೆಗೆ (Metalic Phase) ಬದಲಾಗುವ ಸ್ಥಿತ್ಯಂತರವನ್ನು (Transitions) ವಿವರಿಸಿದನು. ಅಬ್ರಿಕೊಸೊವ್ ಹಾಗೂ ಎಲ್. ಗೊರ್ಕೋವ್, ಅತಿವಾಹಕಗಳ ಸೂಕ್ಷ್ಮ ಮಟ್ಟದ ರಚನೆಯನ್ನು ವಿವರಿಸುವ ಸಿದ್ಧಾಂತ ರೂಪಿಸಿದರು. 1962ರಲ್ಲಿ ವಿದ್ಯಾರ್ಥಿಯಾಗಿದ್ದ ಎಲ್.ಫಿûಲ್ಕೋವ್ಸ್‍ಕಿಯೊಂದಿಗೆ ಈ ಬಗೆಯ ಅರೆಲೋಹಗಳಲ್ಲಿನ ವಾಹಕತೆಯ ಅಧ್ಯಯನ ನಡೆಸಿದನು. 1966ರಲ್ಲಿ ಈಗ ಲ್ಯಾಂಡೋ ಸಂಸ್ಥೆಯೆಂದು ಹೆಸರಾಗಿರುವ ಆಗಿನ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆಯ ಸಾಂದ್ರೀಕೃತ ದ್ರವ್ಯ ಪ್ರಯೋಗಾಲಯದ ಮುಖ್ಯಸ್ಥನಾಗಿ ಅಬ್ರಿಕೊಸೋವ್ ನೇಮಕಗೊಂಡನು. ಇದೇ ವರ್ಷ ಪ್ರಬಲ ಕಾಂತ ಕ್ಷೇತ್ರಗಳಲ್ಲಿನ ಅತಿವಾಹಕತೆ ಸಂಶೋಧನೆಗಾಗಿ ಲೆನಿನ್ ಪ್ರಶಸ್ತಿ ಪಡೆದನು. 1991ರಲ್ಲಿ ಅಸಂಸಂದ ಅರ್ಗೊನ್ನೆ ನ್ಯಾಷನಲ್ ಲ್ಯಾಬೋರೇಟಎಯ ಆಹ್ವಾನದ ಮೇರೆಗೆ ಗೌರವ ವಿಜ್ಞಾನಿ ಗೌರವ ದಕ್ಕಿತು. 1992ರಲ್ಲಿ ಅಸಂಸಂ ಭೌತಶಾಸ್ತ್ರ ಸಮಾಜದ ಫೆಲೊ ಆಗಿ ಆಯ್ಕೆಗೊಂಡನು. 1998ರಲ್ಲಿ ಕ್ವಾಂಟಂ ಸರೇಖೀಯ ಕಾಂತೀಯ ವಿರೋಧತ್ವ ಎನ್ನುವ ಹೊಸ ವಿದ್ಯಾಮಾನವನ್ನು ಪರಿಚಯಿಸಿದನು. 1999ರಲ್ಲಿ ಅಸಂಸಂ ಪ್ರಜೆಯಾದ ಅಬ್ರಿಕೊಸೊವ್, ಅತಿ ವಾಹಕತೆಗಾಗಿ ನಡೆಸಿದ ಸಂಶೋಧನೆಗಳಿಗಾಗಿ 2003ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಹಲವಾರು ದೇಶ, ಸಂಸ್ಥೆ, ಸಮಾಜಗಳಿಂದ ಅಬ್ರಿಕೊಸೊವ್ ಸನ್ಮಾನಿತನಾಗಿ, ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019