অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೊರ್ಸ್ಟ್ ಎಲ್ ಸ್ಟೋರ್‍ಮರ್ (19490--) 1998

ಹೊರ್ಸ್ಟ್ ಎಲ್ ಸ್ಟೋರ್‍ಮರ್ (19490--) 1998

ಹೊರ್ಸ್ಟ್ ಎಲ್ ಸ್ಟೋರ್‍ಮರ್ (19490--) ೧೯೯೮

ಜರ್ಮನಿ-ಭೌತಶಾಸ್ತ್ರ-ಅಂಶಿಕ ಕ್ವಾಂಟಂ ಹಾಲ್ ಪರಿಣಾಮ ಅನಾವರಣಗೊಳಿಸಿದಾತ.

ಸ್ಟೊರ್‍ಮರ್ 6 ಏಪ್ರಿಲ್ 1949ರಂದು ಫ್ರಾಂಕ್ಫರ್ಟ್‍ನಲ್ಲಿ ಜನಿಸಿದನು. ಸ್ಟೊರ್‍ಮರ್ ಹುಟ್ಟಿದಾಗ ಹೊಕ್ಕಳಬಳ್ಳಿ ತಲೆಯನ್ನು ಬಿಗಿದಿದ್ದರಿಂದ ಮಗ ಮುಂದೆ ವಿಕಲಮತಿಯಾಗುವ ಭಯ ಆತನ ತಂದೆ ತಾಯಿಗಳಿಗಿದ್ದಿತು. ಸ್ಟೊರ್‍ಮರ್‍ನ ಪೂರ್ವಿಕರು ಕೃಷಿ , ಕಮ್ಮಾರಿಕೆ, ಮರಗೆಲಸಗಳಲ್ಲಿ ಪ್ರವೀಣರಾಗಿದ್ದರು. ಸ್ಟ್ರೆಂಡ್ಲಿನ್‍ಜೆನ್ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದ ಸ್ಟೊರ್‍ಮರ್ ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದನು. ಸ್ಟೊರ್‍ಮರ್ ಪೂರ್ವಿಕರಲ್ಲಿ ಯಾರೂ ಪ್ರೌಢಶಾಲೆಯ ಮೆಟ್ಟಿಲನ್ನೇ ಹತ್ತಿರದ ಕಾರಣ ತಮ್ಮ ಮಗನು ಹೆಚ್ಚಿನ ವಿದ್ಯಾಭ್ಯಾಸ ಮಾಡುವನೋ ಇಲವೋ ಎಂ¨ ಚಿಂತೆ ಸ್ಟೊರ್‍ಮರ್‍ನ ತಾಯಿ ತಂದೆಯನ್ನು ಕಾಡಿತು. ಸಾಮಾಜಿಕವಾಗಿ ಆರ್ಥಿಕವಾಗಿ ಮುಂದುವರೆಯಲು ಶಿಕ್ಷಣದಂತಹ ಬೇರೊಂದು ಮಾರ್ಗವಿಲ್ಲವೆಂದು  ಅವರು ಅರಿತಿದ್ದರು. ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸ್ಟೊರ್‍ಮರ್ ನ್ಯೂ ಐಸೆನ್‍ಬರ್ಗ ಸನಿಹದ ಗೊಥೆ ಜೆಮ್ನಾಷಿಯಂ ಸೇರಿದನು. ಸ್ಟೊರ್‍ಮರ್ ಅಂತಹ ಉತ್ತಮ ವಿದ್ಯಾರ್ಥಿಯಾಗಿರದಿದ್ದುದರಿಂದ ಅಲ್ಲಿನ ಶಿಕ್ಷಣ ಮಟ್ಟ ಅವನಿಗೆ ಕಠಿಣವೆನಿಸಿತು. ಇಲ್ಲಿ ಗಣಿತ, ವಿಜ್ಞಾನವನ್ನು ಹೇಗೋ ನಿಭಾಯಿಸಿದ ಸ್ಟೊರ್‍ಮರ್‍ಗೆ ಜರ್ಮನ್, ಫ್ರೆಂಚ್ ಹಾಗೂ ಇಂಗ್ಲೀಷ್ ಭಾಷೆಗಳು ಕಬ್ಬಿಣದ ಕಡಲೆಯಾಗಿದ್ದವು. ಇವುಗಳಿಂದ ಹಲವಾರು ಸಲ ಓದಿದ ತರಗತಿಯಲ್ಲೇ ಮತ್ತೊಮ್ಮೆ ಓದಬೇಕಾದ ಪರಿಸ್ಥಿತಿ ಅಗಾಗ ಎದುರಾಗುತ್ತಿದ್ದಿತು. ಒಂದು ವಿಷಯದಲ್ಲಿ  ಬಂದ ಹೆಚ್ಚಿನ ಅಂಕಗಳನ್ನು ಇನ್ನೊಂದು ಅಲ್ಪ ಗಳಿಕೆಯ ವಿಷಯಕ್ಕೆ ಸೇರಿಸುವ ಪರಿಸ್ಥಿತಿಯಿಂದಾಗಿ ಸ್ಟೊರ್‍ಮರ್ ಶಿಕ್ಷಣ ಮುಂದೆ ಸಾಗಿತು. ಪ್ರೌಢಶಾಲೆಯಲ್ಲಿರುವಾಗ ರೇಡಿಯೋ ನಿರ್ಮಾಣ ಕಲಿತ ಸ್ಟೊರ್ಮರ್ ಘನ ಇಂಧನ ಬಳಸಿ ತಯಾರಿಸಿದ ರಾಕೆಟ್ ಮಾದರಿ ಸಿಡಿದು ಹೆಬ್ಬೆರಳನ್ನು ಕಳೆದುಕೊಂಡನು. ವಾಸ್ತುಶಿಲ್ಪಶಾಸ್ತ್ರಕ್ಕೆ ನೋಂದಾಯಿಸಿಕೊಂಡ ಸ್ಟೊರ್‍ಮರ್ ಇಂಜಿನಿಯರಿಂಗ್ ಡ್ರಾಯಿಂಗ್‍ನಲ್ಲಿ ಪರಿಣಿತನಿದ್ದರೂ ಮುಕ್ತ ಚಿತ್ರಗಳನ್ನು ಬರೆಯುವುದರಲ್ಲಿ ಎಂದಿಗೂ ಯಶಸ್ಸನ್ನು ಕಾಣಲಿಲ್ಲ. ಈ ಕಾರಣದಿಂದಾಗಿ 1968ರಲ್ಲಿ ಭೌತಶಾಸ್ತ್ರದ ಅಧ್ಯಯನಕ್ಕೆ ಸ್ಟೊರ್‍ಮರ್ ಬದಲಾಯಿಸಿಕೊಂಡನು. ಇದೇ ವರ್ಷ ವಿದ್ಯಾರ್ಥಿಗಳು ಜರ್ಮನಿಯಾದ್ಯಂತ ಮುಷ್ಕರ ಪ್ರಾರಂಭಿಸಿದರು. ಜರ್ಮನಿಯ ವಿಶ್ವವಿದ್ಯಾಲಯ, ಬೋಧಕ ಸಿಬ್ಬಂದಿ, ಸರ್ಕಾರದ ಆಸ್ತಿಪಾಸ್ತಿಗಳು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾದವು. ಮುಂದೆ ಇದು ಶಿಕ್ಷಣ ಪದ್ದತಿಯ ಸುಧಾರಣೆಗೆ ನಾಂದಿ ಹಾಡಿತು. ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಎ ಶ್ರೇಣಿ ಪಡೆದ ಸ್ಟೊರ್‍ಮರ್ ರಸಾಯನಶಾಸ್ತ್ರದಲ್ಲಿ ಯಾವಾಗಲೂ ಹಿಂದಿರುತ್ತಿದ್ದನು. ನೂರಾರು ರಾಸಾಯನಿಕ ಸೂತ್ರಗಳನ್ನು ನೆನಪಿನಲ್ಲಿರಿಸಿಕೊಳ್ಳುವುದು ಅವುಗಳ ಗುಣ ಲಕ್ಷಣಗಳನ್ನು ವಿವರಿಸುವುದು ಅಸಂಬದ್ಧವೆಂದು ಸ್ಟೊರ್‍ಮರ್‍ಗೆ ಭಾಸವಾಗುತ್ತಿದ್ದಿತು. ಆದರೆ ಮುಂದೆ ಭೌತಶಾಸ್ತ್ರದಲ್ಲಿ ಕ್ವಾಂಟಂ ಬಲವಿಜ್ಞಾನ ಕಲಿತ ನಂತರ ಇದರ ಪ್ರಾಮುಖ್ಯತೆ ಸ್ಟೊರ್‍ಮರ್ಗೆ ಮನದಟ್ಟಾಯಿತು. ಪದವಿ ಪೂರೈಸಿದ ನಂತರ ಡಾಕ್ಟರೇಟ್ ಗಳಿಸಲು ಸ್ಟೊರ್‍ಮರ್ ಪ್ರೊಫೆಸರ್ ವೆರ್ನರ್ ಮಾರ್ಟಿಯೆನ್‍ಸನ್ ಫಿûಸಿಕಲ್ ಇನ್ಸ್ಟಿಟ್ಯೂಟ್ ಸೇರಿದನು. ಇಲ್ಲಿ ಎಕ್ ಹಾರ್ಡಲ್ ಹೋನಿ ಮಾರ್ಗದರ್ಶನದಲ್ಲಿ ಬಹು ಸೂಕ್ಷ್ಮ ಸಂವೇದನಾಶೀಲವಾದ ಪತ್ತೆಕಾರಕಗಳನ್ನು (Detector)  ಬಳಸಿ ಹಲವಾರು ಪ್ರಯೋಗಗಳನ್ನು ಕೈಗೊಂಡನು. ಹಿಮೋಗ್ಲೋಬಿನ್ ಆಮ್ಲಜನಕದೊಂದಿಗೆ ಹೊಂದಿರುವ ಬಂಧದ ನಿರ್ಧಾರವನ್ನು ಅದರ ಕಾಂತೀಯ ಗುಣಗಳ ಮೂಲಕ ಅರಿಯುವ ಹೊಣೆ ಸ್ಟೊರ್‍ಮರ್ ಹೆಗಲಿಗೆ ಬಂದಿತು. ಇದರೊಂದಿಗೆ ನಿಮ್ನ ತಾಪಮಾನದ ತಂತ್ರಗಳು ಸ್ಟೊರ್‍ಮರ್ ಕೈವಶವಾದವು. ಮುಂದೆ ಒಂದು ವರ್ಷದ ಪ್ರಯತ್ನದ ನಂತರವೂ ಹಿಮೋಗ್ಲೋಬಿನ್ ಮೇಲೆ ನಡೆಸಿದ ಪ್ರಯೋಗಗಳು ಫಲ ಪ್ರಧವಾಗಲಿಲ್ಲ. ಹಾಗಾಗಿ ಸ್ಟೊರ್‍ಮರ್ ಕಬ್ಬಿಣದ ಕಲುಷಿತಗಳ (Dopes)  ಕಾಂತೀಯ ಅಸಮದೈಶಿಕತೆಯ (Anisotropy)    ಮೇಲೆ ಸಂಪ್ರಂಬಂಧ ಬರೆದು ಡಾಕ್ಟರೇಟ್ ಗಳಿಸಿದನು. ಸ್ಟುರ್ಟ್‍ಗರ್ಟ್‍ನಿಂದ ಡಾಕ್ಟರೇಟ್ ಗಳಿಸಿ ಜೊತೆಗೆ ಫ್ರೆಂಚ್ ಭಾಷೆಯನ್ನು ಸಹಕಲಿತನು. ಸ್ಟೊರ್‍ಮರ್‍ಗೆ ಮಾರ್ಗದರ್ಶಕನಾಗಿದ್ದ ಕ್ವೇಸರ್, ಅಸಂಸಂದ  ಬೆಲ್ ಪ್ರಯೋಗಾಲಯಗಳಿಗೆ ಹೋಗಿ ಸಂಶೋಧನೆ ಮಾಡಬೇಕೆಂದು ಸ್ಟೊರ್‍ಮರ್‍ಗೆ ಒತ್ತಾಯಿಸಿದನು. ಇಲ್ಲಿ ಅಂಶಿಕ ಕ್ವಾಂಟಂ ಹಾಲ್ ಪರಿಣಾಮವನ್ನು ಸ್ಟೊರ್‍ಮರ್ ಹಾಗೂ ಸಂಗಡಿಗರು ಅನಾವರಣಗೊಳಿಸಿದರು. ಇವರ ಕಾರ್ಯಚಟುವಟಿಕೆಗಳು ಸೂಕ್ಷ್ಮಾತಿಸೂಕ್ಷ್ಮವಾದ ಭೌತ ವಿದ್ಯಾಮಾನಗಳನ್ನು ಅರಿಯಲು ನೆರವಾದವು. ಇದಕ್ಕಾಗಿ ಸ್ಟೊರ್‍ಮರ್ 1998ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 8/21/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate