ಸ್ಟೆವೆನ್ ಚು –(1933--) ೧೯೯೭
ಅಸಂಸಂ-ಭೌತಶಾಸ್ತ್ರ-ಪರಮಾಣುಗಳನ್ನು ಬೆಳಕಿನ ಕಿರಣಗಳಿಂದ ಸೆರೆ ಹಿಡಿದಾತ -–ಒಂಟಿ ಡಿಎನ್‍ಎ ಅಣು ವೀಕ್ಷಿಸಿದಾತ.
ಸ್ಟೆವೆನ್ ಚು ತಂದೆ ಜು ಚಿನ್ ಚು 1943ರಲ್ಲಿ ರಾಸಾಯನಿಕ ಇಂಜಿನಿಯರಿಂಗ್‍ನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಎಂಐಟಿಗೆ ಬಂದು ಸೇರಿದನು. ಈತನ ತಂದೆ, ಕಾರ್ನೆಲ್ “ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಿ, ತಾಯ್ನಾಡಿಗೆ ಮರಳಿದ್ದನು. 1945ರಲ್ಲಿ ಚೀನಾದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದ್ದರಿಂದ, ಜು ಚಿನ್ ಚು ಚೀನಾಕ್ಕೆ ಹಿಂದುರುಗಲಿಲ್ಲ. ಸ್ಟೆವೆನ್, 1948ರಲ್ಲಿ ಸೇಂಟ್ ಲೂಯಿಯಲ್ಲಿ ಜನಿಸಿದನು. 1950ರಲ್ಲಿ ಸ್ಟೆವೆನ್ ಕುಟುಂಬ ನ್ಯೂಯಾರ್ಕ್ ಸನಿಹದ ಗಾರ್ಡನ್ ಸಿಟಿಯಲ್ಲಿ ನೆಲೆಸಿತು. ಸ್ಟೆವೆನ್ ತಾತ, ಕಿರಿತಾತ, ತಂದೆ , ಚಿಕ್ಕಪ್ಪ, ಹಾಗೂ ಇನ್ನಿತರು ಅತ್ಯುನ್ನತ ವಿದ್ಯಾಭ್ಯಾಸ ಮಾಡಿ, ಹೆಚ್ಚಿನವರು ಡಾಕ್ಟರೇಟ್ ಗಳಿಸಿದ್ದರು. ಇದೇ ಮಟ್ಟದ ಸಾಧನೆಯನ್ನು ಇವರು ಸ್ಟೆವೆನ್‍ನಿಂದ ನಿರೀಕ್ಷಿಸಿದರು. ಆದರೆ ಅವರಿಗೆ ನಿರಾಸೆಯಾಗುವಂತೆ ಸ್ಟೆವೆನ್ ಪದವಿ ಪೂರ್ಣಗೊಳಿಸಿದ ನಂತರ ವಿದ್ಯಾಭ್ಯಾಸ ಮುಂದುವರೆಸಲಿಲ್ಲ. ಆದರೆ ಸ್ಟೆವೆನ್ ತನ್ನ ವಿಜ್ಞಾನದ ಅಧ್ಯಾಪಕರುಗಳಿಂದ, ಮೂಲ ತತ್ತ್ವಗಳನ್ನು ಬಳಸಿಕೊಂಡು ಹೇಗೆ ಸ್ವತಂತ್ರವಾಗಿ ಚಿಂತಿಸುವುದೆಂದು ಕಲಿತಿದ್ದನು. ಮುಕ್ತವಾಗಿ ಚಿಂತಿಸಲು ಪ್ರೇರಣೆ ನೀಡುತ್ತಿದ್ದ ಗಣಿತ ಸ್ಟೆವೆನ್‍ಗೆ ಪ್ರಿಯವೆನಿಸಿತು. ರೊಚೆಸ್ಟರ್ “ವಿಶ್ವವಿದ್ಯಾಲಯದಲ್ಲಿರುವಾಗ ಫೆಯ್ನ್‍ಮನ್‍ನಿಂದ ಕೊಡಲ್ಪಟ್ಟ ಭೌತಶಾಸ್ತ್ರದ ಉಪನ್ಯಾಸಗಳು ಸ್ಟೆವೆನ್‍ಗೆ ವಿಜ್ಞಾನದ ಅಂತರಂಗದ ದರ್ಶನ ಮಾಡಿಸಿದವು. ಅಲ್ಪಕಾಲದಲ್ಲೇ ನ್ಯೂಟನ್, ಮಾಕ್ಸ್‍ವೆಲ್, ಐನ್‍ಸ್ಟೀನ್,ಫೆಯ್ನ್’ಮನ್, ಸ್ಟೆವೆನ್‍ನ ಆದರ್ಶ ವ್ಯಕ್ತಿಗಳಾದರು. ಸೈದ್ಧಾಂತಿಕ ಭೌತಶಾಸ್ತ್ರದಲ್ಲಿನ ಶಿಕ್ಷಣ ಮುಂದುವರೆಸಲು ಸ್ಟೆವೆನ್ 1970ರಲ್ಲಿ ಬಕ್ರ್ಲೆ ವಿಶ್ವವಿದ್ಯಾಲಯ ಸೇರಿದನು. ಆದರೆ ಅಲ್ಪ ಕಾಲದಲ್ಲೇ ಪ್ರಯೋಗಶೀಲ ಭೌತಶಾಸ್ತ್ರವೇ ತನಗೆ ಸೂಕ್ತವೆಂದು ಭಾವಿಸಿ, ತನ್ನ ಮಾರ್ಗದರ್ಶಕರಿಗೆ ತಿಳಿಸಿದರು. ಇದಕ್ಕೆ ಒಪ್ಪಿಗೆ ಸಿಕ್ಕು ಸ್ಟೆವೆನ್ ಜಲಜನಕದಂತಹ ಅಯಾನುಗಳಲ್ಲಿನ ಲ್ಯಾಂಬ್ ಪಲ್ಲಟ ಅಳೆಯಲು ಯತ್ನಿಸಿದನು. 1974ರಲ್ಲಿ ಕ್ಲೌಡೆ ಹಾಗೂ ಮಾರಿ ಬುಖಾರೆಟ್ ಪರಮಾಣ್ವಿಕ ಸ್ಥಿತ್ಯಂತರಗಳಲ್ಲಿ ಸಾಮ್ಯತೆ ಭಂಗವಾಗುವುದೆಂದು ತಿಳಿಸಿದ್ದರು. ವೀನ್‍ಬರ್ಗ್, ಅಬ್ದಸ್ ಸಲಾಂ ಹಾಗೂ ಗ್ಲಾಷೋ, ಕ್ಷೀಣ ಬೈಜಿಕ ಕ್ರಿಯೆಗಳು ಜರುಗುವಾಗ, ಸಧ್ಯಕ್ಕೆ ಗೊತ್ತಿರುವ ಅವಿಷ್ಟಿತ ಬಲಗಳಲ್ಲದೆ ತಟಸ್ಥ ಮಧ್ಯವರ್ತಿ ಬಲಗಳಿರುವುವೆಂದು ಸೂಚಿಸಿ ವೈದ್ಯುತ್ ಕಾಂತೀಯ ಹಾಗೂ ಕ್ಷೀಣ ಬೈಜಿಕ ಬಲಗಳ ಐಕ್ಯತಾ ಸಿದ್ಧಾಂತ ಮಂಡಿಸಿದ್ದರು. ಇಂತಹ ಮಧ್ಯವರ್ತಿ ಬಲದಿಂದಾಗಿ ಕಾಂತೀಯ ದ್ವಿ ಧೃವ ಸ್ಥಿತ್ಯಂತರದಲ್ಲಿ (Bipole Transition), ಎಡ ಹಾಗೂ ಬಲ ದಿಶೆಯ ಧೃವೀಕೃತ ಬೆಳಕಿನ ಹೀರಿಕೆ ಅಸಮಾಂಗೀಯವಾಗಿರುವುದೆಂದು (Unsymmetrical), ಸೂಚಿಸಿದ್ದರು. ಇದಕ್ಕಾಗಿ ಸ್ಟೆವೆನ್ ಚು ಹಾಗೂ ಇತರರು ಹಲವಾರು ಪ್ರಯೋಗಗಳನ್ನು ಕೈಗೊಂಡರು. ಆದರೆ ಇದೇ ವೇಳೆಗೆ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯದಲ್ಲಿದ್ದ ಸರೇಖೀಯ ಸಂಘಟ್ಟಕದಲ್ಲಿ ಕ್ಷೀಣ ಬೈಜಿಕ ಅಂತಕ್ರಿಯೆಗಳಲ್ಲಿ (Weak Nuclear Interactions), ಪಾಲ್ಗೊಳ್ಳುವ ಮಧ್ಯವರ್ತಿ ತಟಸ್ಥ ಬಲದ ಅಸ್ತಿತ್ವವನ್ನು ಸಾರುವ ಫಲಿತಾಂಶಗಳು ದೊರೆತವು. 1978ರಲ್ಲಿ ಸ್ಟೆವೆನ್ ಚು ಬಕ್ರ್ಲೆಯಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇದೇ ವರ್ಷ ಬೆಲ್ ಪ್ರಯೋಗಾಲಯಗಳಿಗೆ ಆಯ್ಕೆಯಾಗಿ, ಎಲೆಕ್ಟ್ರಾನ್ ಹಾಗೂ ಅದರ ಪ್ರತಿಕಣದ ಸಂಯೋಜಿತ ಪಾಸಿಟ್ರಾನ್ ಕಣವನ್ನು ಹುಡುಕುವ ಪ್ರಯತ್ನಗಳನ್ನು ಪ್ರಾರಂಭಿಸಿದನು.1950ರಲ್ಲಿ ಪರಮಾಣುಗಳ ಆವಿಷ್ಕಾರವಾದ ನಂತರ ಅಸ್ತಿತ್ವದಲ್ಲಿರಬಹುದಾದ ಇಂತಹ ಕಣದ ಚೈತನ್ಯವನ್ನು ನಿಖರವಾಗಿ ನಿರ್ಧರಿಸಲು ಹಲವಾರು ಜನ ಯತ್ನಿಸಿದ್ದರು. ಪಾಸಿಟ್ರಾನ್ ಪರಮಾಣುವಿನ ಸನಿಹಕ್ಕೆ ಬಂದ 14x10-9 ಸೆಕೆಂಡ್‍ಗಳಲ್ಲಿ ಗಾಮಾ ವಿಕಿರಣಗಳಾಗಿ ನಿರ್ಮೂಲನಗೊಳ್ಳುತ್ತದೆ. ಅಷ್ಟೇ ಅಲ್ಲದೆ ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಬೇಕಾದಷ್ಟು ಪಾಸಿಟ್ರಾನ್‍ಗಳನ್ನು, ಉತ್ಪಾದಿಸುವುದೂ ಸಹ ಕಠಿಣ. ಸ್ಟುವೆನ್ ಚು ಈ ದಿಶೆಯಲ್ಲಿ ಪ್ರಯತ್ನ ನಡೆಸುವುದಕ್ಕಿಂತ ಮುಂಚೆ 12 ವಿಫಲ ಪ್ರಯೋಗಗಳಾಗಿದ್ದವು. ಎರಡು ವರ್ಷಗಳ ಸತತ ಪರಿಶ್ರಮ, ಪ್ರಯೋಗಗಳ ನಂತರವೂ ಸ್ಟೆವೆನ್‍ಗೆ ಯಾವ ಫಲಿತಾಂಶಗಳೂ ದಕ್ಕದೆ, ಬೆಲ್ ಪ್ರಯೋಗಾಲಯದ ಆಡಳಿತ ಮಂಡಳಿ, ಸಂಶೋಧನೆಯನ್ನು ಮೊಟಕುಗಳಿಸುವಂತೆ ಸೂಚಿಸಿತು. ಛಲ ಬಿಡದ ಸ್ಟೆವೆನ್ ಅಲೆನ್ಸ್ ಮಿಲ್‍ನ ಜೊತೆಗೂಡಿ, ಕ್ವಾಂಟಂ ಮಟ್ಟದ ವೈದ್ಯುತ್‍ಗತೀಯ ಕ್ರಿಯೆಗಳನ್ನು ಕರಾರುವಕ್ಕಾಗಿ ಅಳೆಯುವ ಸಾಧನ ತಯಾರಿಸಿನು. 1983ರಲ್ಲಿ ಬೆಲ್ ಪ್ರಯೋಗಾಲಯದ ಕ್ವಾಂಟಂ ಎಲೆಕ್ಟ್ರಾನಿಕ್ಸ್ ಸಂಶೋಧನಾ ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಹೊಂದಿದ ಸ್ಟೆವೆನ್‍ನ್ನು ನ್ಯೂಜೆರ್ಸಿಯ ಹೋಮ್‍ಡೆಲ್‍ಗೆ ವರ್ಗಾಯಿಸಲಾಯಿತು. ಇಲ್ಲಿ ಎಲೆಕ್ಟ್ರಾನ್ ರೋಹಿತ ಮಾಪಕ (Electron Spectometer), ನಿರ್ಮಿಸಿದ ಸ್ಟೆವೆನ್‍ಗೆ ಆರ್ಟ್ ಆ್ಯಸ್ಟಿನ್‍ನ ಪರಿಚಯವಾಯಿತು. ಆರ್ಟ್ ಬೆಳಕಿನ ಕಿರಣಗಳಿಂದ ಪರಮಾಣುಗಳನ್ನು ಸೆರೆ ಹಿಡಿಯುವ ಯೋಜನೆಯಲ್ಲಿದ್ದನು. ಬೆಲ್ ಆಡಳಿತ ಮಂಡಳಿ ಇದಕ್ಕೆ ನಾಲ್ಕು ವರ್ಷಗಳ ಹಿಂದೆಯೇ ಇಂತಹ ಯೋಜನೆಯನ್ನು ನಿಲ್ಲಿಸುವಂತೆ ಹೇಳಿದ್ದಿತು. ಪರಮಾಣುಗಳನ್ನು ಲೇಸರ್ ಮೂಲಕ ಪೂರ್ಣವಾಗಿ ತಂಪಿರಿಸಿದರೆ ಮಾತ್ರ ಇದು ಸಾಧ್ಯವೆಂದು ಸ್ಟೆವೆನ್‍ಗೆ ಮನದಟ್ಟಾಯಿತು. ಹೊಲ್‍ಬರ್ಗ್ ,ಅಲೆಕ್ಸ್ ಕೇಬಲ್‍ರ ನೆರವಿನೊಂದಿಗೆ ಸ್ಟೆವೆನ್ ಇದರಲ್ಲಿ ಯಶಸ್ಸನ್ನು ಗಳಿಸಿ 1997ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು. ಸ್ಟೆವನ್ ಚು ಇಂದಿಗೂ ಲೇಸರ್ ತಂಪಿರಿಸಿಕೆಯ ಮೂಲಕ ಪರಮಾಣುಗಳನ್ನು ಸೆರೆ ಹಿಡಿಯುವ ನಾನಾ ಪ್ರಯೋಗಗಳಲ್ಲಿ ನಿರತನಾಗಿದ್ದಾನೆ. 1986ರಲ್ಲಿ ಆರ್ಟ್ ಆ್ಯಸ್ಟಿನ್ ಬೆಲ್ ಪ್ರಯೋಗಾಲಯದಲ್ಲಿ ಬೆಳಕಿನಿಂದ, ಪರಮಾಣು ಸೆರೆ ಹಿಡಿದುದನ್ನು ಪ್ರದರ್ಶಿಸಿದನು . 1987ರಲ್ಲಿ ಸ್ಟೆವೆನ್ ಚು ಸ್ಟ್ಯಾನ್’ಫೋರ್ಡ್‍ಗೆ ಬಂದು ಸೇರಿದನು. ವೈದ್ಯಕೀಯ ವಿಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದ್ದ ಸ್ಟೀವ್‍ಕ್ರೋನ್‍ನಿಂದ ಸ್ಟೆವೆನ್‍ಗೆ ಅಣ್ವಯಿಕ ಭೌತಶಾಸ್ತ್ರದ ಪರಿಚಯವಾಯಿತು. 1990ರಲ್ಲಿ ಪ್ರದೀಪ್ತಿಯಿಂದ ಎದ್ದು ಕಾಣುವಂತೆ ಮಾಡಿದ ಒಂಟಿ ಡಿಎನ್‍ಎ ಅಣುವನ್ನು ಸ್ಟೆವೆನ್ ಹಾಗೂ ಸ್ಟೀವ್‍ಕ್ರೋನ್ ವೀಕ್ಷಿಸಿದರು. ಇದರಿಂದ ಡಿಎನ್‍ಎಯಂತಹ ಬೈಜಿಕ ಅಣುವನ್ನು , ಪ್ರತ್ಯೇಕಿಸಿ ವೀಕ್ಷಿಸುವ ಹಾಗೂ ಅದನ್ನು ಮಾರ್ಪಡಿಸುವ ಹೊಸ ಸಾಧ್ಯತೆಗಳು ದಕ್ಕಿದವು. ದಶಕಗಳಿಂದ ಪಾಲಿಮರ್ ಗತಿಶಾಸ್ತ್ರದಲ್ಲಿ ಅಪರಿಹಾರ್ಯವಾಗದೇ ಉಳಿದಿದ್ದ ಪ್ರಶ್ನೆಗಳಿಗೆ ಈ ಮೂಲಕ ಉತ್ತರ ಕಂಡು ಕೊಳ್ಳುವುದು ಸಾಧ್ಯವಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/3/2019