ವಿಲಿಯಂ , ಡಿ ಫಿಲೆಪ್ಸ್ (1948--) ೧೯೯೭
ಅಸಂಸಂ-ಭೌತಶಾಸ್ತ್ರ-
ವಿಲಿಯಂ ಪೆನ್ಸೆಲ್ವೇನಿಯಾದ ವಿಲ್ಕ ಸ್ ಬ್ಯಾರೆಯಲ್ಲಿ 5 ನವಂಬರ್ 1948 ರಂದು ಜನಿಸಿದನು. ಈತನ ತಂದೆ ತಾಯಿಗಳು ಇಟಲಿಯಿಂದ ಅಸಂಸಂಗಳಿಗೆ ವಲಸೆ ಬಂದು ನೆಲೆಸಿದ್ದನು. ಈತನ ತಂದೆ, ತಾಯಿಯಿಬ್ಬರೂ ವೃತ್ತಿ ಪರ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಇವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವವನ್ನು ವಿವರಿಸಿ, ಓದಲು ಉತ್ತೇಜಿಸುತ್ತಿದ್ದರು. ವಿಜ್ಞಾನ, ಟೆನಿಸ್ ಆಟ ವಿಲಿಯಂನ ನೆಚ್ಚಿನ ಆಸಕ್ತಿ ಹಾಗೂ ಹವ್ಯಾಸಗಳಾಗಿದ್ದವು. ಪದವಿ ಪೂರ್ವ ಕಾಲೇಜಿನಲ್ಲಿರುವಾಗ ಭೌತಶಾಸ್ತ್ರದ ಅಧ್ಯಾಪಕ ಖ್ಯಾತ ವಿಜ್ಞಾನಿ ಫೆಯ್ನ್’ಮನ್ ಭೌತಶಾಸ್ತ್ರದ ಬಗೆಗೆ ನೀಡಿದ ಉಪನ್ಯಾಸಗಳ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದನು. ಇದನ್ನು ಕೇಳಿದ ನಂತರ ವಿಲಿಯಂಗೆ ಭೌತಶಾಸ್ತ್ರದಲ್ಲಿ ಆಸಕ್ತಿ ಮೂಡತೊಡಗಿತು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರ ವಿಭಾಗದಲ್ಲಿ ಫೆ್ರಡ್ ವಾಲ್ಟರ್‍ನ ಮಾರ್ಗದರ್ಶನದಲ್ಲಿ ಜಲಜನಕದ ಮೇಸರ್, ಕ್ಷ-ಕಿರಣ ಕಾಂತೀಯ ಅನುರಣನ ರೋಹಿತದರ್ಶಕದಲ್ಲಿ (Magnetic Resonance Spectroscopy ) ಪರಿಣಿತಿ ಗಳಿಸಿದನು. ನಂತರ ನೀರಿನಲ್ಲಿರುವ ಪ್ರೋಟಾನ್ ಕಣದ ಕಾಂತೀಯ ಭ್ರಾಮ್ಯತೆಯನ್ನು (Magnetic Moment) ಅಳೆದನು. 1976ರಲ್ಲಿ ಲೇಸರ್ ಸಂಘಾತದಿಂದ ಉದ್ರಿಕ್ತಗೊಂಡ ಪರಮಾಣುಗಳನ್ನು ಕುರಿತಾದ ಸಂಶೋಧನೆ ಪ್ರಾರಂಭಿಸಿದನು. ಡ್ಯಾನ್ ಹಾಗೂ ಟಾಮ್ ಗ್ರೆಯ್‍ಟರ್‍ರೊಂದಿಗೆ ಗಿರಕಿ ಧೃವೀಕೃತ (Spin Polarised) ಜಲಜನಕದಲ್ಲಿ ಬೋಸ್-ಐನ್‍ಸ್ಟೀನ್ ಸಾಂದ್ರೀಕರಣದ (ಅoಟಿಜeಟಿsಚಿಣioಟಿ) ಕುರಿತಾದ ಪ್ರಯೋಗಗಳನ್ನು ಕೈಗೊಂಡನು. ರಾಷ್ಟ್ರೀಯ ಮಾನಕ ಬ್ಯೂರೋದಲ್ಲಿ ನೇವಲ್ ಸಂಶೋಧನಾ ಸಂಸ್ಥೆಯ ನೆರವಿನೊಂದಿಗೆ ಲೇಸರ್ ತಂಪಿಸಿಕೆಯ ಯೋಜನೆಯಲ್ಲಿ ಭಾಗಿಯಾದನು. ಇಲ್ಲಿಯೇ ಲೇಸರ್ ಬೆಳಕಿನಿಂದ, ತಂಪಿಸಿ, ಪರಮಾಣುಗಳನ್ನು ಸೆರೆಹಿಡಿಯುವ ವಿಧಾನವನ್ನು ಅಭಿವೃದ್ಧಿಗೊಳಿಸಿದನು. ಇದಕ್ಕಾಗಿ 1997ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/20/2020