অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಬರ್ಟ್, ಸಿ. ರಿಚರ್ಡ್‍ಸನ್

ರಾಬರ್ಟ್, ಸಿ. ರಿಚರ್ಡ್‍ಸನ್

ರಾಬರ್ಟ್, ಸಿ. ರಿಚರ್ಡ್‍ಸನ್ –(1937--)  ೧೯೯೬

ಅಸಂಸಂ-ಇಂಜಿನಿಯರ್-ಭೌತಶಾಸ್ತ್ರ-ನಿಮ್ನ ತಾಪಮಾನದ ಸಂಶೋಧನಾ ಮುಂದಾಳು.

ರಿಚರ್ಡ್‍ಸನ್ 26 ಜೂನ್ 1937ರಂದು ವಾಷಿಂಗ್ಟನ್‍ನಲ್ಲಿ ಜನಿಸಿದನು. ರಿಚರ್ಡ್‍ಸನ್ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ತಾಯಿ  ಅನಾಥಳಾಗಿ ಬೆಳೆದು ಕಾಲೇಜಿಗೆ ಸೇರುವ ಮುನ್ನ ಕೇವಲ ಒಂದು ವರ್ಷದ ಔಪಚಾರಿಕ ಶಿಕ್ಷಣ ಪೂರೈಸಿದ್ದಳು.  ಆದರೆ ಮುಂದೆ ತನ್ನ ಸ್ವಂತ ಪರಿಶ್ರಮದಿಂದ ಆಕೆ ಕಾಲೇಜು ವಿದ್ಯಾಭ್ಯಾಸವನ್ನು ಸಹ ಪೂರೈಸಿದ್ದಳು.  ರಿಚರ್ಡ್‍ಸನ್ ತಂದೆ, ಎರಡನೇ ಜಾಗತಿಕ ಯುದ್ದ ಹಾಗೂ ಕೊರಿಯಾ ಯುದ್ದಗಳಲ್ಲಿ ಭಾಗಿಯಾದುದರಿಂದ, ಸೇನೆಯಿಂದ ಲಭಿಸಿದ ಸವಲತ್ತುಗಳನ್ನು ಬಳಸಿಕೊಂಡು, 1955ರಲ್ಲಿ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದನು. ರಿಚರ್ಡ್‍ಸನ್ ಪ್ರಾಥಮಿಕ ಶಿಕ್ಷಣ ಮುಗಿಸಿ, ಪ್ರೌಧಶಾಲೆಗೆ ಸೇರಿದಾಗ ಸ್ಕಾಟ್ ದಳಕ್ಕೆ ಸೇರಿದನು. ಸ್ಕೌಟ್ ಶಿಬಿರಾರ್ಥಿಯಾಗಿ ಮೇರಿಲ್ಯಾಂಡ್‍ನ ವಿಶಾಲ ಜಾಗಗಳಲ್ಲಿ ಪ್ರಾಣಿ, ಪಕ್ಷಿ , ವೈವಿದ್ಯಗಳನ್ನು ಕಂಡು, ಅವುಗಳ ಬಗೆಗೆ ಕುತೂಹಲ ತಳೆದಿದ್ದನು.  ನೂರಾರು ಹಕ್ಕಿಗಳ ವಸತಿ, ಜೀವನ ವಿಧಾನ, ಕಲರವಗಳು ರಿಚರ್ಡ್‍ಸನ್‍ಗೆ ಚಿರಪರಿತವಾಗಿದ್ದವು.  ವಾಷಿಂಗ್ಟನ್ ಲೀ ಹೈ ಪ್ರೌಢಶಾಲೆಯಲ್ಲಿದ್ದಾಗ ರಿಚರ್ಡ್‍ಸನ್‍ಗೆ ವಿಜ್ಞಾನದಲ್ಲಿ ಅಂತಹ ಉತ್ತಮವಾದ ಶಿಕ್ಷಣವೇನೂ ಸಿಗಲಿಲ್ಲ.  1953ರಲ್ಲಿ ಆ ಶಾಲೆಯಲ್ಲಿನ ಕೆಲ ಉಪಾಧ್ಯಾಯರು ಪ್ರೋಟಾನ್‍ನ ಪರಿಕಲ್ಪನೆಯನ್ನು ವಿವಾದಾಸ್ಪದವೆಂದು ಪರಿಗಣಿಸಿದ್ದರು.  1954ರಲ್ಲಿ ವರ್ಜೀನಿಯಾ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್‍ನಲ್ಲಿ ವೈದ್ಯುತ್ ಇಂಜಿನಿಯರಿಂಗ್ ಕಲಿಯಲು ಸೇರಿದನು.  ಅತ್ಯಲ್ಪಕಾಲದಲ್ಲೇ ಇಂಜಿನಿಯರಿಂಗ್ ಡ್ರಾಯಿಂಗ್‍ನಿಂದ ಬೇಸರಗೊಂಡು ಆಸಕ್ತಿ ಕಳೆದುಕೊಂಡು, ರಸಾಯನಶಾಸ್ತ್ರಕ್ಕೆ ವರ್ಗಾವಣೆ ಪಡೆದನು.  ಇಲ್ಲಿ ರಿಚರ್ಡ್‍ಸನ್‍ಗೆ ಎದುರಾದ ತೊಂದರೆಗಳು ಹಲವಾರು ಪ್ರಯೋಗಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾಗಿ ಆಮ್ಲಗಳನ್ನು ಬೆರೆಸಿದನು, ವರ್ಣಗುರುಡಿನಿಂದಾಗಿ, ರಾಸಾಯನಿಕ ಕ್ರಿಯೆ ಪೂರ್ತಿಗೊಂಡಿದೆಯೇ ಇಲ್ಲವೋ ಎಂದು ನಿರ್ಧರಿಸಲಾರದ ಸ್ಥಿತಿಗೆ ಬಂದನು.  ಹೀಗಾಗಿ ರಿಚರ್ಡ್‍ಸನ್ , ಭೌತಶಾಸ್ತ್ರ ವಿಭಾಗ ಸೇರಿದನು.  ಇಲ್ಲಿಯೂ ಅಂತಹ ಉತ್ತಮ ವಿದ್ಯಾರ್ಥಿಯೆನಿಸಿಕೊಳ್ಳದೆ ಎರಡನೇ ಶ್ರೇಣಿ ಪಡೆದನು. ಕಾಲೇಜಿನಲ್ಲಿರುವಾಗ ಬೇಸಿಗೆ ರಜಾ ದಿನಗಳನ್ನು ಕಳೆಯಲು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್ರ್ಸ್ ಸೇರಿದನು. ಇಲ್ಲಿ ತಪಾಸಣೆಗಾಗಿ ಬರುತ್ತಿದ್ದ ವೈದ್ಯುತ್ ಉಪಕರಣಗಳನ್ನು ಪರಿಶೀಲಿಸುವ ಕೆಲಸಕ್ಕೆ  ನಿಯೋಜಿತನಾದನು. ಅತ್ಯಲ್ಪ ಕಾಲದಲ್ಲೇ ಇದರಲ್ಲಿ ಆಸಕ್ತಿ ಮೂಡಿ, ಬಿಡುವಿನ ವೇಳೆಯಲ್ಲಿ ವೈದ್ಯುತ್ ಇಂಜಿನಿಯರಿಂಗ್ ತತ್ತ್ವಗಳನ್ನು ಓದಿ ಅರಗಿಸಿಕೊಂಡನು.  ಪದವಿ ಮುಗಿದ ಮೇಲೆ ದೊಡ್ಡ ವ್ಯಾಪಾರಸ್ಥನಾಗಬೇಕೆಂದು ಬಯಸಿದನು.  ಸ್ವಲ್ಪ ದಿನಗಳಲ್ಲೇ ಇನ್ನೂ ವಿದ್ಯಾಭ್ಯಾಸ ಮುಂದುವರೆಸಿ, ಸ್ನಾತಕೋತ್ತರ ಪದವಿ ಪಡೆಯುವ ಆಸೆಯೂ ರಿಚರ್ಡ್‍ಸನ್ ತಲೆಯಲ್ಲಿ ಮಿಂಚಿ ಮಾಯವಾಯಿತು.  ಮಿಲಿಟರಿ ಸೇರಿ, ಅಲ್ಲಿನ ಹಲವಾರು ಕಾರ್ಯಕ್ರಮಗಳಲ್ಲಿ ರಿಚರ್ಡ್‍ಸನ್ ಭಾಗಿಯಾದನು.  ಇಲ್ಲಿನ ತರಬೇತಿಯಿಂದಾಗಿ, ವೃತ್ತಿ ತೃಪ್ತಿ ದಕ್ಕದೆ ಜುಗುಪ್ಸೆಗೊಂಡನು.  ಇವೆಲ್ಲವನ್ನೂ ಹಿಂದಿಟ್ಟು 1960ರಲ್ಲಿ ಹಾಸ್ರ್ಟ್ ಮೇಯರ್‍ನ ಕೆಳಗೆ ಸಂಶೋಧನಾ ವಿದ್ಯಾರ್ಥಿಯಾಗಿ ಡ್ಯೂಕ್ ವಿಶ್ವವಿದ್ಯಾಲಯ ನಿಮ್ನ ತಾಪಮಾನದ ವಿಭಾಗದಲ್ಲಿ ಅಧ್ಯಯನ ಪ್ರಾರಂಭಿಸಿದನು.  ಇಲ್ಲಿಗೆ ಸಂಶೋಧನಾ ಸಹಾಯಕನಾಗಿ ಸೇರಿದ ಅರ್ಲ್ ಹಂಟ್‍ನಿಂದ, ಬೈಜಿಕ ಕಾಂತೀಯ ಅನುರಣನ (Nuclear Magnetic Resonance)  ವಿದ್ಯಾಮಾನದ ಪರಿಚಯವಾಯಿತು.  ಘನ ಹೀಲಿಯಂನಲ್ಲಿನ ಅಂತಕ್ರಿಯೆಗಳನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿ 1965ರಲ್ಲಿ ಡಾಕ್ಟರೇಟ್ ಗಳಿಸಿದನು.  1966ರಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದ ಪರಮಾಣು ಹಾಗೂ ಘನಸ್ಥಿತಿ ಭೌತಶಾಸ್ತ್ರದ ಪ್ರಯೋಗಾಲಯ ಸೇರಿ, ಡೇವ್ ಲೀ ಮತ್ತು ಜಾನ್ ರೆಪ್ಪಿಯವರೊಂದಿಗೆ ನಿಮ್ನ ತಾಪಮಾನ ಭೌತಶಾಸ್ತ್ರದಲ್ಲಿ ಸಂಶೋಧನೆಯಲ್ಲಿ ಶ್ರಮಿಸಿದನು. ಈ ಮೂವರು ಸೇರಿ, ಅತ್ಯಲ್ಪ ತಾಪಮಾನದಲ್ಲಿರುವ ಹೀಲಿಯಂನ ಗುಣ ಸ್ವಭಾವಗಳನ್ನು ವಿಶದಪಡಿಸಿದರು  ಇದಕ್ಕಾಗಿ ರಿಚರ್ಡ್‍ಸನ್ 1996ರ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 5/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate