ರಾಬರ್ಟ್ ಬಿ. ಲಾಘ್‍ಲಿನ್ (1950--) ೧೯೯೮
ಅಸಂಸಂ-ಭೌತಶಾಸ್ತ್ರ-ಸಮಗ್ರ ಕ್ವಾಂಟಂ ಹಾಲ್ ಪರಿಣಾಮಕ್ಕೆ ಸೈದ್ಧಾಂತಿಕ ವಿವರಣೆ ನೀಡಿದಾತ.
ರಾಬರ್ಟ್ ನವೆಂಬರ್ 1950 ರಂದು ಕ್ಯಾಲಿಫ್ಲೋರ್ನಿಯಾದ ವಿಸಾಲಿಯ ಹಳ್ಳಿಯಲ್ಲಿ ಜನಿಸಿದನು. ಈತನ ತಂದೆ ವಕೀಲನಾಗಿದ್ದನು. ಬಾಲ್ಯದಿಂದಲೇ ತಂದೆಯಿಂದ, ವೈಚಾರಿಕ ನಿಲುವು, ಗಣಿತದಲ್ಲಿನ ಆಸಕ್ತಿಗಳನ್ನು ಬಳುವಳಿಯಾಗಿ ಪಡೆದನು. ಪ್ರೌಢ ಶಿಕ್ಷಣ ಮುಗಿಸಿ, ವೈದ್ಯುತ್ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಲು ರಾಬರ್ಟ್ ಬಕ್ರ್ಲೆ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಈ ಹಿಂದೆ , ಹಲವಾರು ಜಗದ್ವಿಖ್ಯಾತ ಭೌತಶಾಸ್ತ್ರಜ್ಞರು ಇದ್ದುದನ್ನು ಅರಿತ ರಾಬರ್ಟ್ ಅವರಂತೆಯೇ ತಾನಾಗಬೇಕೆಂದು ಕನಸು ಕಂಡನು. ಇಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಚಾಲ್ರ್ಸ್ ಟೌನೆಸ್, ಓವೆನ್ ಛೇಂಬರ್ಲಿನ್‍ರಂತಹವರನ್ನು ಕಾಣುವ ಅವರ ಉಪನ್ಯಾಸಗಳನ್ನು ಕೇಳುವ ಅವಕಾಶಗಳು ರಾಬರ್ಟ್‍ಗೆ ಬಂದೊದಗಿದವು. ಪ್ರತಿಪ್ರೋಟಾನ್ ಅಸ್ತಿತ್ವವನ್ನು ಅನಾವರಣಗೊಳಿಸಿ, ನೊಬೆಲ್ ಪ್ರಶಸ್ತಿ ಗಳಿಸಿದ್ದ ಎಮಿಲೋ ಸೆಗ್ರೆಯಿಂದಲೂ ರಾಬರ್ಟ್ ಪ್ರಭಾವಿತನಾದನು. ವಿಯೆಟ್ನಾಂ ಯುದ್ದ ಪ್ರಾರಂಭವಾಗಿ, ಅದು ಅಸಂಸಂದಲ್ಲಿನ ವಿದ್ಯಾರ್ಥಿಗಳ ಜೀವನದ ಮೇಲೂ ಅಪಾರ ಪರಿಣಾಮ ಬೀರಿತು. ಚಿಂತಕರನ್ನೂ, ಸ್ವತಂತ್ರ ವಿಚಾರಧಾರೆ ಹೊಂದಿದ್ದ ವಿದ್ಯಾರ್ಥಿಗಳನ್ನು ವಿಯೆಟ್ನಾಂ ಯುದ್ದದಲ್ಲಿ ಸರ್ಕಾರವನ್ನು ಬೆಂಬಲಿಸಬೇಕೆ ? ಅಥವಾ ಬೇಡವೇ ಎಂಬ ತುಮುಲ ಕಾಡಿತು. ಇಂತಹ ಸಂದಿಗ್ಥದಲ್ಲಿ ಮುಳುಗಿದ ರಾಬರ್ಟ್‍ಗೆ ವಿದ್ಯಾಭ್ಯಾಸದಲ್ಲಿ ಗಮನಾರ್ಹ ಸಾಧನೆ ಮಾಡಲಾಗಲಿಲ್ಲ. ವಿಯೆಟ್ನಾಂ ಯುದ್ದ ಪಡೆಯಲ್ಲಿ ಕೆಳ ಹಂತದಲ್ಲಿ ನೇಮಕಗೊಂಡ ರಾಬರ್ಟ್ ಸೈದ್ಧಾಂತಿಕ ಭೌತಶಾಸ್ತ್ರಜ್ಞನಾಗಿದ್ದರೂ, ಗಣಕ, ದೂರವಾಣಿ, ರೇಡಿಯೋದಂತಹ ಉಪಕರಣಗಳನ್ನು ಬಳಸುವ ಅನುಮತಿಯಿರಲಿಲ್ಲ. ಕೆಲಕಾಲದ ನಂತರ ಕ್ಷಿಪಣಿ ದಳಗಳಿಗೆ ರಾಬರ್ಟ್ ವರ್ಗಾವಣೆಗೊಂಡನು. ಇಲ್ಲಿ ಯುದ್ದ, ಸರ್ಕಾರದ ರೀತಿ, ನೀತಿ, ಶಿಸ್ತು , ಏಕತೆ, ವರ್ಣ ದ್ವೇಷಗಳ ನಿಕಟ, ದಟ್ಟ ಪರಿಚಯವಾಗಿ ರಾಬರ್ಟ್‍ನ ಅನುಭವ ಕೋಶ ಹಿಗ್ಗಿತು. ಇಲ್ಲಿಂದ ಜರ್ಮನಿಯ ಸ್ಟುಟ್‍ಬರ್ಗ್ ನಗರದ ಬಳಿಯ ಶಿಬಿರಕ್ಕೆ ರಾಬರ್ಟ್‍ನ ತಂಡವನ್ನು ನಿಯೋಜಿಸಲಾಯಿತು. ಸೇನೆಯಿಂದ ಬಿಡುಗಡೆಗೊಂಡ ನಂತರ, 1974ರಲ್ಲಿ ಎರಡು ವರ್ಷಗಳ ಅಂತರದ ನಂತರ ಎಂ.ಐ.ಟಿ ಸೇರಿದನು. ಇಲ್ಲಿ ಜಾನ್ ಜೊವನೊಪ್ಪಾಲಿಸನ್ ಮಾರ್ಗದರ್ಶನದಲ್ಲಿ ಸಿಲಿಕಾನ್ ಗಾಜು. ಪುಡಿರೂಪದ ಸೆಲೆನಿಯಂಗಳ ಮೇಲೆ ಹಲವಾರು ಪ್ರಯೋಗಗಳನ್ನು ಕೈಗೊಂಡನು. ಇಲ್ಲಿ ಕ್ಷ ಕಿರಣ ವಿವರ್ತನೆ (Diffraction), ನ್ಯೂಟ್ರಾನ್ ಚದುರಿಕೆ, ರಾಮನ್ ಚದುರಿಕೆ ,ಎಲೆಕ್ಟ್ರಾನ್ ಅನುರಣನಗಳಂತಹ ಘನಸ್ಥಿತಿ ಭೌತಶಾಸ್ತ್ರದ ಪ್ರಯೋಗಗಳಲ್ಲಿ ಮುಳುಗಿದನು. ಡಾಕ್ಟರೇಟ್ ಗಳಿಸಿದ ರಾಬರ್ಟ್ ಬೆಲ್ ಪ್ರಯೋಗಾಲಯದಿಂದ ವೃತ್ತಿ ಜೀವನ ಪ್ರಾರಂಭಿಸಿದನು. ಇಲ್ಲಿ ಅರೆ ವಾಹಕಗಳ ಬಗೆಗೆ ದಾಖಲಾಗಿದ್ದ ವಿಜ್ಞಾನ ವಿಸ್ತಾರರೂಪ ತಳೆಯಿತು. ಆದರೆ ರಾಬರ್ಟ್‍ಗೆ ಬೆಲ್ ಪ್ರಯೋಗಾಲಯದಲ್ಲಿ ಶಾಶ್ವತ ಕೆಲಸ ದೊರೆಯದ ಕಾರಣ ಜಾನ್ ಜೋವನಾಪ್ಪುಲಸ್‍ನ ಸಲಹೆಯ ಮೇರೆಗೆ ಮಾರ್ಕ್ ಕಾರ್ಡಿಲ್ಲೋ ನಡೆಸುತ್ತಿದ್ದ ಪ್ರಯೋಗಗಳ ಫಲಿತಾಂಶಗಳಿಗೆ ಸೈದ್ಧಾಂತಿಕ ವಿವರಣೆ ನೀಡುವ ಜವಾಬ್ದಾರಿ ವಹಿಸಿಕೊಂಡನು. ಇದಕ್ಕಿಂತಲೂ ಸ್ವಲ್ಪ ಮೊದಲು ಬೆಲ್ ಪ್ರಯೋಗಾಲಯದಲ್ಲಿದ್ದ ಕ್ಲಾವುಸ್ ವಾನ್ ಕ್ಲಿಟ್‍ಜಿಂಗ್ ಸಮಗ್ರ ಕ್ವಾಂಟಂ ಹಾಲ್ ಪರಿಣಾಮವನ್ನು ಬೆಳಕಿಗೆ ತಂದಿದ್ದನು. ಇದಕ್ಕೆ ಸರಿಯಾದ ಸೈದ್ಧಾಂತಿಕ ವಿವರಣೆ ಲಭ್ಯವಿರಲಿಲ್ಲ. ಈ ಸಮಸ್ಯೆಯನ್ನು ಕೈಗೆತ್ತಿಕೊಂಡ ರಾಬರ್ಟ್ ಸಮರ್ಪಕ ವಿವರಣೆ ನೀಡುವಲ್ಲಿ ಯಶಸ್ವಿಯಾದನು. ಇದಕ್ಕಾಗಿ 1998ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020