ಪೀರೆ-ಗಿಲ್ಲೆಂಡ್ ಗೆನ್ನೆಸ್ –(1932--) ೧೯೯೧
ಫ್ರಾನ್ದ್-ಇಂಜಿನಿಯರ್-ಸಮತಲಗಳ ಅಂತಕ್ರಿಯೆ , ಸಂಲಗ್ನತೆ, ಸಂಸ್ನಿಗ್ಧತೆಗಳನ್ನು ಕುರಿತಾಗಿ ಸಂಶೊಧಿಸಿದಾತ.
ಪೀರೆ 1932ರಲ್ಲಿ ಪ್ಯಾರಿಸ್‍ನಲ್ಲಿ ಜನಿಸಿದನು. 1955ರಲ್ಲಿ ಎಕೊಲೆ ನಾರ್ಮಲೆಯಿಂದ ಪದವಿ ಗಳಿಸಿದನು. 1959ರಿಂದ 1959ರವರೆಗೆ ಸಾಕ್ಲೆಯಲ್ಲಿರುವ ಪರಮಾಣು ಚೈತನ್ಯ ವಿಭಾಗದಲ್ಲಿ ಸಂಶೋಧಕ ಇಂಜಿನಿಯರ್ ಆಗಿದ್ದನು. ಇಲ್ಲಿ ಕಾಂತತ್ವ ಹಾಗೂ ನ್ಯೂಟ್ರಾನ್ ಚದುರಿಕೆಯನ್ನು ಕುರಿತಾಗಿ ಅಧ್ಯಯನ ಮಾಡಿದನು. 1959ರಲ್ಲಿ ಬಕ್ರ್ಲೆಯಲ್ಲಿ ಕೆಲಸ ಮಾಡಿದನು. ಇದಾದ ನಂತರ ಫ್ರಾನ್ಸ್’ಗೆ ಮರಳಿ, ಸುಮಾರು ಎರಡು ವರ್ಷಗಳ ಕಾಲ ಫ್ರೆಂಚ್ ನೌಕಾದಳದಲ್ಲಿ ಸೇವೆ ಸಲ್ಲಿಸಿದನು. 1961ರಲ್ಲಿ ಓರ್‍ಸೆಯಲ್ಲಿ ಸಹಾಯಕ ಪ್ರಾಧ್ಯಾಪಕನಾದ ಪೀರೆ ಕೆಲ ಕಾಲದಲ್ಲೇ ಓರ್ಸೆ ಸಂಘ ಸ್ಥಾಪಿಸಿ, ಅತಿರಿಕ್ತ ವಾಹಕಗಳ (Hyper Conductors) ಅಧ್ಯಯನ ನಡೆಸಿದನು. 1968ರಲ್ಲಿ ದ್ರವ ಸ್ಪಟಿಕಗಳ ಸಂಶೋಧನೆಗೆ ತೊಡಗಿದನು. 1971ರಲ್ಲಿ ಕಾಲೇಜೆ ಡೆ ಫ್ರಾನ್ಸ್’ನಲ್ಲಿ ಪ್ರಾಧ್ಯಾಪಕನಾದನು. 1980ರಿಂದ, ಸಮತಲಗಳ ಅಂತಕ್ರಿಯೆ, ಅವುಗಳು ಒದ್ದೆಯಾಗುವ ವಿದ್ಯಾಮಾನ, ಅಂಟುವ ಕ್ರಿಯೆಯ ಹಿಂದಿರುವ ಭೌತಿಕ ಹಾಗೂ ರಾಸಾಯನಿಕ ಕಾರಣಗಳತ್ತ ಆಕರ್ಷಿತನಾದನು. ಬ್ರಿಟಿಷ್ ಹಾಗೂ ಫ್ರೆಂಚ್ ಫಿಸಿಕಲ್ ಸೊಸೈಟಿಗಳ ಜಂಟಿಯಾದ ಹೊಲ್‍ವೆಕ್ ಪ್ರಶಸ್ತಿ ಪಡೆದ ಪೀರೆ, ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಸ್ವರ್ಣ ಪದಕ ಸಹ ಪಡೆದನು. 1976ರಿಂದ 2000ರವರೆಗೆ ಪೀರೆ ಎಕೊಲೆ ಡೆ ಫಿಸಿಕ್ ಎಟ್ ಷಾಮಿಯ ನಿರ್ದೇಶಕನಾದನು. ಈ ಸಂಸ್ಥೆ ಇಂಜಿನಿಯರ್‍ಗಳನ್ನು ಭೌತ ಹಾಗೂ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಮಾಡಲು ಉತ್ತೇಜಿಸುತ್ತದೆ. ಪೀರೆ, ಮೇಲೈ ಹಾಗೂ ಸಮತಲಗಳ ಅಂತಕ್ರಿಯೆ ಸಂಲಗ್ನತೆ (Cohesion), ಸಂಸ್ನಿಗ್ಧತೆಗಳ (Viscosity) ಮೇಲೆ ನಡೆಸಿದ ಸಂಶೋಧನೆಗಳು ಜೀವಶಾಸ್ತ್ರದಲ್ಲಿ, ಕೋಶಗಳ ಕಾರ್ಯವಿಧಾನ ಅರಿಯಲು ನೆರವಾದವು. ಇದಕ್ಕಾಗಿ ಪೀರೆ 1991ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರವಾದನು. ಪೀರೆ, ಈಗ ಪ್ಯಾರಿಸ್‍ನಲ್ಲಿರುವ ಅಂತರ್ ಶಿಸ್ತೀಯ ಕೇಂದ್ರ ಹಾಗೂ ಕ್ಯಾನ್ಸರ್ ಆಸ್ಪತ್ರೆ ಹೊಂದಿರುವ ಕ್ಯೂರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪ್ರೌಢಶಾಲೆಗಳಿಗೆ ಹೋಗಿ, ಬಾಲಕರಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಮೂಡುವಂತಹ ಕಾರ್ಯಕ್ರಮಗಳನ್ನು ನೀಡುವುದು ಪೀರೆಯ ನೆಚ್ಚಿನ ಹವ್ಯಾಸವಾಗಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/23/2020