ಡೇನಿಯಲ್-ಸಿ ಸುಯಿ ಆಚಿಟಿ ೧೯೯೮
ಚೀನಾದ ಕುಗ್ರಾಮದಲ್ಲಿ ಬರಪೀಡಿತ ಬಾಲ್ಯ, ಹಾಂಗ್‍ಕಾಂಘ್‍ನಲ್ಲಿನ ವಿದ್ಯಾರ್ಥಿ ಜೀವನ ಮತ್ತು ಕಾಲೇಜು ಶಿಕ್ಷಣದ ನಂತರ ಅಸಂಸಂಗಳ ಅವಕಾಶಪೂರಿತ ನೆನಪುಗಳಿಂದ ನನ್ನ ಜೀವನ ಸಾಗಿ ಬಂದಿದೆಯೆಂದು ಸಿ-ಸುಯಿ ಹೇಳಿದ್ದಾನೆ. ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಸುಯಿಯ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಹೆಣಗಿದರು. 1958ರಲ್ಲಿ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಸಂಸಂಗಳ ಚಿಕಾಗೊ ವಿಶ್ವವಿದ್ಯಾಲಯ ಸೇರಿದನು. ಇಲ್ಲಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು . 1968ರಲ್ಲಿ ಸಿ-ಸುಯಿ ಬೆಲ್ ಲ್ಯಾಬೊರೇಟರೀಸ್ ಸೇರಿದನು. ಇಲ್ಲಿ ಅರೆವಾಹಕಳ ವಾಹಕತ್ವ ಕುರಿತಾಗಿ ನಡೆಸಿದ ಸಂಶೋಧನೆಗಳಿಂದ ಅಂಶಿಕ ಕ್ವಾಂಟಂ ಹಾಲ್ ಪರಿಣಾಮಗಳ ಅನಾವರನ ಮಾಡಿದನು. ಇದಕ್ಕಾಗಿ ಸಿ-ಸುಯಿ 1998ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/17/2019