ಡಗ್ಲಾಸ್. ಡಿ ಒಷೆರಾಫ್ ೧೯೯೬
ಅಸಂಸಂ-ಭೌತಶಾಸ್ತ್ರ-ಅತಿಪ್ರವಾಹಿತ್ವ ಅಧ್ಯಯನದ ಮುಂದಾಳು.
ಒಷೆರಾಫ್ ತಂದೆ ರಷ್ಯಾ ಮೂಲದವನಾಗಿದ್ದರೆ ತಾಯಿ ಸ್ಲೊವಾಕಿಯದವಳು . ಇವರು ಇಪ್ಪತ್ತನೇ ಶತಮಾನದ ಆದಿಯಲ್ಲಿ ಅಸಂಸಂಗಳಿಗೆ ವಲಸೆ ಬಮ್ದು ನೆಲೆಸಿದ್ದರು. ಒಷೆರ ತಂದೆ ವೈದ್ಯನಾಗಿದ್ದರೆ ತಾಯಿ ದಾದಿಯಾಗಿದ್ದಳು. ಇವರ ಐದು ಮಕ್ಕಳಲಿ ಎರಡನೆಯವಾದ ಒಷೆರಾ¥sóï, ವಾಷಿಂಗ್ಟನ್ ಸನಿಹದ ಅಬೆರ್‍ಡೀನ್ ಪಟ್ಟಣದಲ್ಲಿ ಬಾಲ್ಯವನ್ನು ಕಳೆದನು. ತಂದೆ ವೈದ್ಯನಾಗಿದ್ದರೂ ರಕ್ತ, ಮಾಂಸಗಳೆಂದರೆ ಒಷೆರಾ¥sóï ಹಿಂಜರಿಯುತ್ತಿದ್ದನು. ಪ್ರೌಢಶಾಲೆಗೆ ಬರುವ ವೇಳೆಗೆ ನಾನಾ ತರದ ಯಾಂತ್ರಿಕ ಉಪಕರಣಗಳನ್ನು ಸಂಗ್ರಹಿಸುವುದು ತಾನೇ ಸ್ವಯಂ ಜೋಡಿಸುವುದು ನಿರ್ಮಿಸುವುದು ಒಷೆರಾಫ್ನ ನೆಚ್ಚಿನ ಹವ್ಯಾಸವಾಗಿದ್ದಿತು. ಒಷೆರಾಪ್ಫ಼ ಭೌತಶಾಸ್ತ್ರದ ಪದವಿಗಾಗಿ ಕ್ಯಾಲ್‍ಟೆಕ್ ವಿಶ್ವ ವಿದ್ಯಾಲಯ ಸೇರಿದನು. ಇಲ್ಲಿ ಖ್ಯಾತ ವಿಜ್ಞಾನಿ ಮುಂದೆ ನೊಬೆಲ್ ಪ್ರಶಸ್ತಿ ವಿಜೇತನಾದ ಫೆಯ್ನಮನ್ ಉಪನ್ಯಾಸ ನೀಡುತ್ತಿದ್ದನು. ಫೆಯ್ನ್ಮನ್ ಒಡ್ಡುತ್ತಿದ್ದ ಭೌತಶಾಸ್ತ್ರದ ಸಮಸ್ಯೆಗಳಿಗೆ ಪರಿಹಾರಗಳನ್ನು ಚಿಂತಿಸುತ್ತಾ ಒಷೆರಾಫ್ ಪದವಿಯಲ್ಲಿ ಮುಂದುವರೆದನು. ಇದೇ ಸಮಯದಲ್ಲಿ ಡಾನ್ ಮೆಕ್‍ಕಾಲ್ಮ್ ಮತ್ತು ವಾಲ್ಟರ್ ಒಗಿಯರ್, ಅತಿನಿಮ್ನ ತಾಪಮಾನ ಗಳಿಸಿ ಹೀಲಿಯಂನ್ನು 0.5 ಕೆಲ್ವಿನ್ ತಾಪಮಾನಕ್ಕಿಳಿಸಲು ಪ್ರಯೋಗಗಳನ್ನು ಹಮ್ಮಿಕೊಂಡಿದ್ದರು. ಒಷೆರಾಫ್ ಇವರ ತಂಡ ಸೇರಿ ನಿಮ್ನ ತಾಪಮಾನದ ಬಗೆಗೆ ಗಮನಾರ್ಹ ಜ್ಞಾನ ಸಂಪಾದಿಸಿದನು. ಪದವಿಯ ನಂತರ ಕಾರ್ನೆಲ್ ವಿಶ್ವವಿದ್ಯಾಲಯ ಸೇರಿದ ಒಷೆರಾಫ್ ಇಲ್ಲಿ ಡೇವಿಡ್ ಲೀಯೊಂದಿಗೆ ನಿಮ್ನ ತಾಪಮಾನ ಸಂಶೋಧನಾ ತಂಡ ಸೇರಿದನು. ನಂತರ ಬೆಲ್ ಪ್ರಯೋಗಾಲಯದಲ್ಲಿ ಹೀಲಿಯಂ ಅತಿಪ್ರವಾಹಿತತೆಯ (Superfluidity) ಸಂಶೋಧನೆಗೆ ನಿಯೋಜಿತನಾದನು. 1974ರ ಅವಧಿಯಲ್ಲಿ ಒಷೆರಾಫ್ ಹಾಗೂ ಸಂಗಡಿಗರು ಕ್ರಮಭಂಗಿತ (Disordered) ಘನ 3Heನಲ್ಲಿ ಪ್ರತಿಫೆರೋಕಾಂತೀಯ ಅನುರಣನವಿರುವುದನ್ನು ಪತ್ತೆ ಹಚ್ಚಿದರು. ಇದೇ ವಿದ್ಯಾಮಾನವನ್ನು ಫ್ಲೊರಿಡಾ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಸಹ ಗುರುತಿಸಿದ್ದರು. ಒಷೆರಾಫ್ 1987ರಲ್ಲಿ ಬೆಲ್ ಪ್ರಯೋಗಾಲಯ ತೊರೆದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗ ಸೇರಿದನು. ಇಲ್ಲಿ ನಡೆಸಿದ ಪ್ರಯೋಗಗಳಿಂದ 3He ಅತಿಪ್ರವಾಹಿತ್ವದ ಸಂಪೂರ್ಣ ಸ್ವರೂಪ ತಿಳಿದು ಬಂದಿತು. ಇದಕ್ಕಾಗಿ ಒಷೆರಾಫ್ 1996ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/26/2019