ಝೆರೆಸ್ ಐ ಅಲ್ಫೆರೊವ್ (1923--) ೨೦೦೦
ರಷ್ಯಾ-ಇಂಜಿನಿಯರ್-ಅರೆವಾಹಕಗಳ ಸಂಶೋಧನೆಯ ಮುಂಚೂಣಿಗ.
ಅಲ್ಫೆರೊವ್‍ನ ತಂದೆ ಹಾಗೂ ತಾಯಿ 1912ರಲ್ಲಿ ಬೈಲೋ ರಷ್ಯಾದಿಂದ ಸೇಂಟ್ ಪೀಟರ್ಸ್‍ಬರ್ಗ್‍ಗೆ ಬಂದು ನೆಲೆಸಿದ್ದರು. ಈತ ರಷ್ಯಾದ ಕ್ರಾಂತಿಯಲ್ಲಿ ಹಾಗೂ ಮೊದಲನೆ ಜಾಗತಿಕ ಯುದ್ದದಲ್ಲಿ ಭಾಗವಹಿಸಿದ್ದನು. 1935ರಲ್ಲಿ ಕೈಗಾರಿಕಾ ತರಬೇತು ಪಡೆದು ಸರ್ಕಾರಿ ನೌಕರಿಗಾಗಿ , ಊರಿಂದ ಊರಿಗೆ ವರ್ಗವಾಗುತ್ತಿರುವಾಗ ಅಲ್ಫೆರೊವ್ ಜನಿಸಿದನು. ಅಲ್ಫೆರೊವ್ ಅಣ್ಣ ಜೂನ್ 21, 1941ರಲ್ಲಿ ಪ್ರೌಢಶಿಕ್ಷಣ ಮುಗಿಸಿದನು. ಅದರ ಮರುದಿನವೇ ರಷ್ಯಾ ನಾಝಿಗಳ ಆಕ್ರಮಣಕ್ಕೊಳಗಾಯಿತು. ಆಗ ಅವನು ಸಿಡಿ ಮದ್ದಿನ ತಯಾರಿಕೆಯ ಕಾರ್ಖಾನೆಗೆ ಸೇರಿ ದೇಶದ ಸ್ವಾತಂತ್ರ್ಯ ರಕ್ಷಣೆಗಾಗಿ ಹೋರಾಡಿದನು. ಇದು ಅಲ್ಫೆರೊವ್‍ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಯುದ್ದದಿಂದ ಜರ್ಝರಿತವಾಗಿದ್ದ ಮಿನ್ಸ್ಕ್ ಸಿಟಿಯಲ್ಲಿ ಅಲ್ಫೆರೊವ್ ಶಿಕ್ಷಣ ಮುಂದುವರೆಯಿತು. ನಂತರ ಲೆನಿನ್‍ಗ್ರ್ಯಾಡ್‍ನ ಉಲ್ ಯಾನೊವ್ ಎಲೆಕ್ಟ್ರೋಟೆಕ್ನಿಕಲ್ ಇನ್ಸ್ಟಿಟ್ಯೂಟ್‍ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ರೇಡಿಯೋ ತಂತ್ರಜ್ಞಾನದಲ್ಲಿ ಶಿಕ್ಷಣ ಪಡೆಯಲು ಅಲ್ಫೆರೊವ್ ಪ್ರವೇಶ ಪಡೆದನು. ಇಲ್ಲಿ ಬಿಸ್ಮತ್ ಟೆಲ್ಯುರೈಡ್ ಸಂಯುಕ್ತಗಳ ದ್ಯುತಿಪಟುತ್ವವನ್ನು (Photoactivity) ಕುರಿತಾಗಿ ಅಲ್ಫೆರೊವ್ ಅಧ್ಯಯನ ನಡೆಸಿದನು. 1952ರಲ್ಲಿ ಫಿûಸಿಕೊ-ಟೆಕ್ನಿಕಲ್ ಇನ್ಸ್ಟಿಟಿಟ್ಯೂಟ್ ಸೇರಿ ಪಿ.ಎನ್ ಸಂಧಿಗಳಲ್ಲಿ (P-N junctions) ಟ್ರಾನ್ಸಿಸ್ಟರ್ ನಿರ್ಮಿಸುವ ತಂಡದ ಸದಸ್ಯನಾದನು. ಇಲ್ಲಿ ಅರೆವಾಹಕ ತಂತ್ರಜ್ಞಾನದಲ್ಲಿ ಖ್ಯಾತರಾಗಿದ್ದ ವಿಜ್ಞಾನಿಗಳ ದಂಡೇ ಇದ್ದಿತು. ಈ ತಂಡ ಟ್ರಾನ್ಸಿಸ್ಟರ್ ಆಧಾರಿತ ಎಲೆಕ್ಟ್ರಾನಿಕ್ ಮಂಡಲಗಳನ್ನು (Circuits) ಆ ಮೂಲಕ ಸಾಧನಗಳನ್ನು ನಿರ್ಮಿಸಿತು. ಅಲ್ಪ ಕಾಲದಲ್ಲೇ ಇವರು ಸೋವಿಯತ್ ರಷ್ಯಾದ ಮೊದಲ ಜರ್ಮೇನಿಯಂ ಶೋಧಕ (Germanium Filter) ಜರ್ಮೇನಿಯಂ ದ್ಯುತಿ ಡಯೋಡ್‍ಗಳನ್ನು (Filter/Rectifier) ನಿರ್ಮಿಸಿದರು. 1958ರಲ್ಲಿ ಸೋವಿಯತ್ ರಷ್ಯಾದ ಪರಮಾಣು ಚೈತನ್ಯ ಆಧಾರಿತ ಜಲಾಂತರ್ಗಾಮಿಯನ್ನು ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಯಿತು. ಈ ಯೋಜನೆಗೆ ಫಿಸಿಕೋ ಟೆಕ್ನಿಕಲ್ ಇನ್ಸಿಟಿಟ್ಯೂಟ್‍ನಿಂದ ಆಲ್ಫೆರೊವ್ ಸದಸ್ಯನಾಗಿದ್ದ ತಂಡವನ್ನು ಎಲೆಕ್ಟ್ರಿಕಲ್ ನಿಯಂತ್ರಣ ಸಾಧನಗಳನ್ನು ವಿನ್ಯಾಸಿಸಲು ನಿಯೋಜಿಸಲಾಯಿತು. 1961ರಲ್ಲಿ ಆಲ್ಫೆರೊವ್ ಜರ್ಮೇನಿಯಂ ಅರೆವಾಹಕ ಟ್ರಾನ್ಸಿಸ್ಟರ್‍ಗಳ ಮೇಲೆ ಸಂಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. ಅಲ್ಫೆರೊವ್ 1969ರ ವೇಳೆಗೆ ಫಿûಸಿಕೋಟೆಕ್ನಿಕಲ್ ಇನ್ಸ್ಟಿಟ್ಯೂಟ್‍ನಲ್ಲಿ ಹಿರಿಯ ಸಹಾಯಕ ಸಂಶೋಧಕವಾದನು. ಈ ಕಾಲದಲ್ಲೇ ಟ್ರಾನ್ಸಿಸ್ಟರ್‍ನ್ನು ಲೇಸರ್, ಸೌರಕೋಶ, ಲೇಸರ್ ಇತ್ಯಾದಿಗಳೊಂದಿಗೆ ಸಮನ್ವಯಗೊಳಿಸುವ ಕೆಲಸಗಳು ಯಶಸ್ಸನ್ನು ಕಂಡವು. 1969ರಲ್ಲಿ ಅಸಂಸಂಗಳಿಗೆ ಭೇಟಿ ನೀಡಿದ ಅಲ್ಫೆರೊವ್ ಡೆಲಾವರ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಾಮಾನ್ಯ ತಾಪಮಾನದಲ್ಲಿರುವ ಲೇಸರ್ ಉತ್ಪಾದನೆಯ ಬಗೆಗೆ ಭಾಷಣ ಮಾಡಿದನು. ನಂತರ ಬೆಲ್ ಪ್ರಯೋಗಾಲಯಗಳಿಗೆ ಭೇಟಿ ನೀಡಿದನು. ಇಲ್ಲಿ ರಷ್ಯಾ ಹಾಗೂ ಆಸಂಸಂದ ವಿಜ್ಞಾನಿಗಳ ಮಧ್ಯೆ ಇರುವ ಸಾಮ್ಯ, ವೈದೃಶ್ಯ ಹಾಗೂ ಸ್ಪರ್ದೆಗಳನ್ನು ಅರಿತನು. ದೃಗ್ ರಜ್ಜುವಿನಲ್ಲಿ ಬೆಳಕನ್ನು ಕಳಿಸುವ ವಿಧಾನಗಳಲ್ಲಿ ಅಲ್ಫೆರೊವ್ ತಂಡ ಗಮನಾರ್ಹ ಯಶಸ್ಸನ್ನು ಕಂಡಿತು. 1970-1971ರಲ್ಲಿ ಅಸಂಸಂ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಅಲ್ಫೆರೊವ್, ಅರೆವಾಹಕಗಳನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಇಲ್ಲಿ ನಿಕ್ ಹೋಲೊನ್ಯಾಕ್‍ನ ಸ್ನೇಹ ದಕ್ಕಿತು. ನಿಕ್ ಹೊಲೊನ್ಯಾಕ್ ದೃಗ್ಗೋಚರ ಅರೆವಾಹಕ ಲೇಸರ್ ಹಾಗೂ ದ್ಯುತಿ ಉತ್ಸರ್ಜಕ ಡಯೋಡ್ (Photo Emmitting Diode) ಉಪಜ್ಞಿಸಿದಾತ. ಇದೇ ವರ್ಷ ಅಲ್ಫೆರೊವ್‍ಗೆ ಅಸಂಸಂ ಫಾ್ರಂಕ್‍ಲಿನ್ ಸಂಸ್ಥೆಯ ಸ್ವರ್ಣ ಪದಕ ದಕ್ಕಿತು. 1972ರಲ್ಲಿ ಅಲ್ಫೆರೋವ್ ಹಾಗೂ ಸಂಗಡಿಗರಿಗೆ ಸೋಷಿಯತ್ ರಷ್ಯಾದ ಅತ್ಯುನ್ನತ ವಿಜ್ಞಾನ ಪ್ರಶಸ್ತಿಯಾದ ಲೆನಿನ್ ಪ್ರಶಸ್ತಿ ದಕ್ಕಿತು. ಮುಂದೆ ಕ್ವಾಂಟಂ ಬಿಂದು ರಚನೆಗಳ (Quantum Point Structures) ಅಧ್ಯಯನಕ್ಕೆ ಜಗತ್ತಿನಾದ್ಯಂತ ಒಲವು ಮೂಡಿತು. ಈ ಕ್ಷೇತ್ರದಲ್ಲಿ ಅಲ್ಫೆರೊವ್ ಹಾಗೂ ಶಿಷ್ಯಂದಿರು ಗಮನಾರ್ಹ ಸಾಧನೆ ಮಾಡಿದ್ದಾರೆ. ಅರೆ ವಾಹಕಗಳ ಕ್ಶೇತ್ರದಲ್ಲಿನ ಅಲ್ಫೆರೊವ್ ಸಾಧನೆಗಾಗಿ 2000ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/27/2020