ಜಾರ್ಜ್, ಚಾರ್ಪಾಕ್ (1946--) ೧೯೯೨
ಪೋಲೆಂಡ್-ಭೌತಶಾಸ್ತ್ರ- ಕಣಗಳ ಪತ್ತೆ ಹಚ್ಚುವ ತಂತ್ರಗಳ ಅಭಿವೃದ್ಧಿಗೆ ಶ್ರಮಿಸಿದಾತ.
ಜಾರ್ಜ್ 1 ಆಗಸ್ಟ್ 1924ರಲ್ಲಿ ಡೆಬ್ರೊವಿಕಾ ಪಟ್ಟಣದಲ್ಲಿ ಜನಿಸಿದನು. ಫ್ರಾನ್ಸ್’ನ ಲೈಸಿಸೇಂಟ್ ಲೂಯಿಸ್ ಹಾಗೂ ಲೈಸೀ ಡೆ ಮೌಂಟ್ ಪೆಲ್ಲರ್‍ಗಳಲ್ಲಿ ಶಿಕ್ಷಣ ಗಳಿಸಿ, ಪ್ಯಾರಿಸ್‍ನ ಎಕೊಲೆ ಡೇ ಮೈನ್ಸ್‍ನಿಂದ 1948ರಲ್ಲಿ ಪದವಿ ಗಳಿಸಿದನು. 1946ರಲ್ಲಿ ಫ್ರಾನ್ಸ್’ನ ನಾಗರಿಕನಾದನು. ಇದಾದ ನಂತರ ಕಾಲೇಜ್ ಡೆ ಫ್ರಾನ್ಸ್’ನಲ್ಲಿ ಸಂಶೋಧಕನಾಗಿ ಸೇರಿ, ಬೈಜಿಕ ಭೌತಶಾಸ್ತ್ರದಲ್ಲಿ ವಿಸ್ತೃತ ಅಧ್ಯಯನ ನಡೆಸಿ, ಡಾಕ್ಟರೇಟ್ ಗಳಿಸಿದನು. 1960ರಲ್ಲಿ ಮ್ಯುಯಾನ್‍ನ ಕಾಂತೀಂಯ ಭ್ರಾಮ್ಯತೆಯನ್ನು (Magnetic Moment) ಅಳೆಯಲು ರೂಪಿಸಿದ್ದ ಮೊಟ್ಟ ಮೊದಲ ಪ್ರಯೋಗದಲ್ಲಿ ಭಾಗಿಯಾದನು. ಜಾರ್ಜ್ ಕ್ಷ ಕಿರಣ ವಿವರ್ತನ ನೆರವಿನಿಂದ ಗೋಳೀಯ ಪಲ್ಲಟ ಕೋಠಿಯಲ್ಲಿ ಪೆÇ್ರೀಟೀನ್‍ಗಳ ರಾಚನಿಕ ಸ್ವರೂಪ ನಿರ್ಧರಿಸುವ ಹೊಸ ವಿಧಾನ ಪರಿಚಯಿಸಿದನು. 1979 ರಿಂದ 1989ರ ದಶಕದ ಅವಧಿಯಲ್ಲಿ ಅಯಾನೀಕರಣಗೊಂಡ ವಿಕರಣತೆಯ ಬಿಂಬ ಪಡೆಯಲು ಪ್ರೋಟಾನ್ ಎಣಿಕೆಕಾರಗಳನ್ನು (Counter) ಬಳಸಿದನು. ನಂತರ ಜೀವ ವೈದ್ಯಕೀಯ ಸಂಶೋಧನೆಗಾಗಿ ಸ್ಪಷ್ಟವಾದ ಬಿಂಬಗಳನ್ನು ಪಡೆಯುವ ತಂತ್ರಗಳನ್ನು ಪರಿಚಯಿಸುವಲ್ಲಿ ಗಣನೀಯ ಪಾತ್ರ ವಹಿಸಿದನು. ಕಣಗಳ ಪತ್ತೆ ಹಚ್ಚುವ ತಂತ್ರಗಳ ಅಭಿವೃದ್ಧಿಯಲ್ಲಿನ ಸಾಧನೆಗಾಗಿ 1992ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ, ಜಾರ್ಜ್‍ಗೆ ನೀಡಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019