ಜಾಕ್, ಎಸ್. ಕಿಲ್ಬಿ (1923--) ೨೦೦೦
ಅಸಂಸಂ-ಇಂಜಿನಿಯರ್-ಆಧುನಿಕ ಎಲೆಕ್ಟ್ರಾನಿಕ್ಸ್ ಕ್ರಾಂತಿಗೆ ಕಾರಣವಾದ ಸಮಗ್ರಗೊಳಿತ ಮಂಡಲಗಳನ್ನು ( Integradted Circuits) ಪರಿಚಯಿಸಿದಾತ.
ಅಕ್ರ್ಯಾನ್ಸೆನ್ ನದಿ ಬಾಗುವ ದಂಡೆಯ ಮೇಲಿರುವ ಪಟ್ಟಣವಾದ ಕ್ಯಾನ್ಸಾಸ್‍ನಲ್ಲಿ 1923ರಲ್ಲಿ ಕಿಲ್ವಿ ಜನಿಸಿದನು. ಕಿಲ್ವಿಯ ತಂದೆ ಹವ್ಯಾಸಿ ರೇಡಿಯೋ ಬಳಕೆದಾರನಾಗಿದ್ದನು. ಇದರಿಂದ ಕಿಲ್ವಿಗೆ ಎಲೆಕ್ಟ್ರಾನಿಕ್ಸ್‍ನಲ್ಲಿ ಆಸಕ್ತಿ ಮೂಡಿತು. ಪ್ರೌಢ ಶಿಕ್ಷಣ ಮುಗಿಸಿದ ಕಿಲ್ವಿ ಇಲಿನಾಯ್ “ವಿಶ್ವವಿದ್ಯಾಲಯದಲ್ಲಿ ವೈದ್ಯುತ್ ಇಂಜಿನಿಯರಿಂಗ್ ಪದವಿಗೆ ಸೇರಿದನು. 1947ರಲ್ಲಿ ಕಿಲ್ವಿ ಇಂಜಿನಿಯರಿಂಗ್ ಪದವಿಯೊಂದಿಗೆ ಹೊರ ಬಂದಾಗ, ಬೆಲ್ ಪ್ರಯೋಗಾಲಯ ಟ್ರಾನ್ಸಿಸ್ಟರ್‍ಗಳ ಉಪಜ್ಞೆಯನ್ನು ಸಾರಿ, ನಿರ್ವಾತ ನಳಿಕೆಗಳು (Vaccum Tubes) ಇಲ್ಲವಾಗುವ ದಿನಗಳನ್ನು ಸಾರಿತು. ವಿಸ್ಕಾನ್ಸಿನ್‍ನಲ್ಲಿನ ರೇಡಿಯೋ ತಯಾರಿಕಾ ಕಂಪನಿ ಸೇರಿ ಕಿಲ್ವಿ ವೃತ್ತಿ ಜೀವನ ಪ್ರಾರಂಭಿಸಿದನು. ವಿಸ್ಕಾನ್ಸಿನ್ ವಿಶ್ವವಿದ್ಯಾಲಯ ನಡೆಸುತ್ತಿದ್ದ ಸಂಜೆ ತರಗತಿಗಳಿಗೆ ಹಾಜರಾಗಿ ವೈದ್ಯುತ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದನು. ಟ್ರಾನ್ಸಿಸ್ಟರ್‍ಗಳಿಂದ ಸಮಗ್ರ ಮಂಡಲಗಳನ್ನು ರಚಿಸುವುದು ಸಾಧ್ಯವೆಂದು ತಿಳಿದು ಬಂದಿತು. ಮಿಲಿಟರಿ ಹಾಗೂ ಗಣಕ ತಯಾರಿಕೆ ಕಂಪನಿಗಳು ಈ ದಿಶೆಯಲ್ಲಿ ಕಾರ್ಯೋನ್ಮುಖವಾದವು. ಟೆಕ್ಸಾಸ್ ಇನ್‍ಸ್ಟ್ರುಮೆಂಟ್ ಸಂಸ್ಥೆ ಈ ಹೊಸ ಸಾಧ್ಯತೆಯನ್ನು ಹಲವಾರು ಕ್ಷೇತ್ರಗಳಿಗೆ ಹಿಗ್ಗಿಸುವ ಯೋಜನೆಯಲ್ಲಿದ್ದಿತು. ಇಲ್ಲಿ ಸೇರಿದ ಕಿಲ್ಬಿ ಜಗತ್ತಿನ ಮೊಟ್ಟ ಮೊದಲ ಕರಲೀನ ಕ್ಯಾಲ್ಕುಲೇಟರ್ (Handheld Calculator) ಹಾಗೂ ಶಾಖ ಮುದ್ರಕ (Thermal Printer) ಉಪಜ್ಞಾ ತಂಡದ ಸದಸ್ಯನಾಗಿ ಯಶಸ್ವಿಯಾದನು. 1970ರಲ್ಲಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯಿಂದ ವೇತನರಹಿತ ರಜೆ ಪಡೆದ ಕಿಲ್ವಿ ಸಿಲಿಕಾನ್ ತಂತ್ರಜ್ಞಾನ ಬಳಸಿ ಸೂರ್ಯನ ಬಿಸಿಲಿನಿಂದ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾದನು. 1978ರಿಂದ 1984 ರವರೆಗೆ ಟೆಕ್ಸಾಸ್‍ನ ಎ ಅಂಡ್ ಎಂ ವಿಶ್ವವಿದ್ಯಾಲಯದಲ್ಲಿ ವೈದ್ಯುತ್ ಇಂಜಿನಿಯರಿಂಗ್‍ನ ಪ್ರಾಧ್ಯಾಪಕನಾದನು. ಟ್ರಾನ್ಸಿಸ್ಟರ್‍ಗಳನ್ನು ಬಳಸಿ ಸಮಗ್ರ ಮಂಡಳಗಳನ್ನು ನಿರ್ಮಿಸಿ, ವಾಣಿಜ್ಯ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್ ಕ್ರಾಂತಿಗೆ ಕಾರಣವಾದ ಅನ್ವಯಿಕ ಭೌತಶಾಸ್ತ್ರಕ್ಕೆ ಕಿಲ್ವಿ ನೀಡಿದ ಕೊಡುಗೆ ಗಮನಿಸಿ, ಜಾಕ್ ಕಿಲ್ಬಿಯನ್ನು 2000ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/19/2020