ಜೋಸೆಫ್. ಎಚ್ ಟೇಲರ್ (1941--) ೧೯೯೩
ಅಸಂಸಂ-ಖಗೋಳಶಾಸ್ತ್ರ-ರೇಡಿಯೋ ಖಗೋಳ ಶಾಸ್ತ್ರದಲ್ಲಿ ಹೊಸ ತಂತ್ರಗಳನ್ನು ಪರಿಚಯಿಸಿದಾತ.
ಜೋಸೆಫ್29 ಮಾರ್ಚ್ 1941ರಂದು ಪೆನ್‍ಸಿಲ್ವೇನಿಯಾದ ಫಿಲೆಡೆಲ್ಫಿಯಾದಲ್ಲಿ ಜನಿಸಿದನು. ಜೋಸೆಫ್ಏಳು ವರ್ಷದವನಿರುವಾಗ ಆತನ ಕುಟುಂಬ ನ್ಯೂಜರ್ಸಿಯ ಸಿನ್ನಾಮಿನ್ಸನ್ ಪಟ್ಟಣಕ್ಕೆ ಹೋಗಿ ನೆಲೆಸಿತು. ಇಲ್ಲಿ ಡೆಲಾವೇರ್ ನದಿ ದಂಡೆಯ ತಾತನ ತೋಟದಲ್ಲಿ ಜೋಸೆಫ್ಹಾಗೂ ಇನ್ನಿತರ ಎಂಟು ಜನ ದಾಯಾದಿಗಳು ಮುಕ್ತ ವಾತಾವರಣದಲ್ಲಿ ಬೆಳೆದರು. ಬಾಲಕನಾಗಿದ್ದ ಜೋಸೆಫ್ಅಣ್ಣಂದಿರೊಂದಿಗೆ ಹವ್ಯಾಸಿ ರೇಡಿಯೋ ಕೇಂದ್ರ ಸ್ಥಾಪಿಸಿದ್ದನು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮೂರ್ಸಟಾನ್ ಫೆ್ರಂಡ್ಸ್ ಸ್ಕೂಲ್‍ನಲ್ಲಿ ಪೂರ್ಣಗೊಳಿ¸, ಹೇವರ್ ಫೋರ್ಡ್ ಕಾಲೇಜನ್ನು ಸೇರಿದನು. ಹಿಎಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯೋಗಗಳನ್ನು ಗಮನಿಸಿದ ಜೋಸೆಫ್ತನ್ನದೇ ಆದ ರೂಕ್ಷ ರೇಡಿಯೋ ದೂರದರ್ಶಕ ನಿರ್ಮಿಸಿಕೊಂಡಿದ್ದನು. ಮುಂದೆ ಹಾವರ್ಡ್‍ನ ಖಗೋಳಶಾಸ್ತ್ರ, ವಿಭಾಗ ಸೇರಿ ಅಲ್ಲಿ ಅಲ್ಯನ್ ಮಾಕ್ಸಾವೇಲ್‍ನ ಮಾರ್ಗದರ್ಶನದಲ್ಲಿ ರೇಡಿಯೋ ಖಗೋಳಶಾಸ್ತ್ರ ಒಳ ಹೊರಗುಗಳನ್ನು ಅರಿತನು. ಎಂ.ಐ.ಟಿ ಹಾಗೂ ಪ್ರಿನ್ಸ್‍ಟನ್‍ನಲ್ಲಿ ಖ್ಯಾತ ಖಗೋಳಶಾಸ್ತ್ರದೊಂದಿಗೆ ಕೆಲಸಮಾಡುವ ಅವಕಾಶ ಜೋಸೆಫ್’ಗೆ ದಕ್ಕಿತು. ಇಲ್ಲಿ ಜೋಸೆಫ್ರೇಡಿಯೋ ಖಗೋಳಶಾಸ್ತ್ರದ ತತ್ವ , ದತ್ತ ಸಂಕೇತಗಳ ವಿಶ್ಲೇಷಣೆ, ಗಣಿತೀಯ ಅರ್ಥೈಸಿಕೆಯಲ್ಲಿ ಪರಿಣಿತಿ ಗಳಿಸಿದನು. ಪಲ್ಸಾರ್ ತಾರೆಗಳಿಂದ ದಕ್ಕಿದ ಸಂಜ್~ಗಳ ಪರಿಷ್ಕರಣೆಯಲ್ಲಿ ಮತ್ತು ಪಲ್ಸಾರ್‍ಗಳನ್ನು ಅರಿಯುವಲ್ಲಿ ಜೋಸೆಫ್ಪರಿಚಯಿಸಿದ ತಂತ್ರಗಳು ಮನ್ನಣೆ ಗಳಿಸಿದವು. ಇದಕ್ಕಾಗಿ ಜೋಸೆಫ್ 1993ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಈಗಿನ ಯುವಕರು ಸಂಶೋಧನೆಗಳಿಗಿಂತಲೂ ತಮ್ಮ ಭವಿಷ್ಯ , ತಾವು ಕೆಲಸ ಮಾಡುವ ಸಂಸ್ಥೆಯ ಪ್ರತಿಷ್ಟಿತತೆ, ಮಾರ್ಗದರ್ಶಕರ ಖ್ಯಾತಿಯನ್ನು ಗಂಭೀರವಾಗಿ ಪರಿಗಣಿಸುತ್ತಿರುವರೆಂಬ ವಿಷಾದ ವ್ಯಕ್ತಪಡಿಸಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/27/2020