ಕ್ಲಿಫರ್ಡ್ ಜಿ. ಷುಲ್ –(1915-2001) ೧೯೯೪
ಅಸಂಸಂ-ಭೌತಶಾಸ್ತ್ರ-ನ್ಯೂಟ್ರಾನ್ ರೂಪಕ್ರಮಗಳನ್ನು ಗುರುತಿಸಿದಾತ
ಕ್ಲಿಫರ್ಡ್ 23 ಸೆಪ್ಟಂಬರ್ 1915ರಂದು ಪೆನ್‍ಸೆಲ್ವೇನಿಯಾದ ಪಿಟ್ಸ್‍ಬರ್ಗ್‍ನಲ್ಲಿ ಜನಿಸಿದನು. ಕ್ಲಿಫರ್ಡ್ ತಂದೆ ಸಣ್ಣ ಕೃಷಿಕನಾಗಿದ್ದು ಹಳ್ಳಿಯಿಂದ ಪಿಟ್ಸ್‍ಬರ್ಗ್‍ಗೆ ಹೋಗಿ ಚಿಕ್ಕದಾದ ವ್ಯಾಪಾರ ಪ್ರಾರಂಭಿಸಿದನು. ಪ್ರೌಢಶಾಲೆಯಲ್ಲಿರುವಾಗ ವಿಜ್ಞಾನದ ಉಪಾಧ್ಯಾಯನಾಗಿದ್ದ ಪೌಲ್ ಡೆಸಟ್‍ರನ ಬೊಧನೆಯಿಂದ ಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದನು. ವಾಯುಗತಿ ಇಂಜಿನಿಯರಿಂಗ್‍ನಲ್ಲಿ ಕುತೂಹಲವೂ ಇದರೊಂದಿಗೆ ಬೆರೆತಿತು. ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯ ಸೇರಿದ ಕ್ಲಿಫರ್ಡ್, ಭೌತಶಾಸ್ತ್ರವನ್ನು ಪ್ರಮುಖವಾಗಿ ಆರಿಸಿಕೊಂಡನು. ಇಲ್ಲಿ ಭೌತಶಾಸ್ತ್ರದ ಮುಖ್ಯಸ್ಥನಾಗಿದ್ದ ಹ್ಯಾರ್ ಓವರ್ ಪ್ರಭಾವಕ್ಕೊಳಗಾಗಿ, ದೃಗ್ಗೋಪಕರಣಗಳಲ್ಲಿ ಪರಿಣಿತಿ ಗಳಿಸಿದನು. ಮುಂದೆ ನ್ಯೂಯಾರ್ಕ್ ವಿಶ್ವವಿದ್ಯಾಲಯ ಸೇರಿದ ಕ್ಲಿಫರ್ಡ್, ಅಲ್ಲಿ ಪ್ರಯೋಗಾಲಯ ಹಾಗೂ ಬೋಧನಾ ಸಹಾಯಕನಾದನು. ಇಲ್ಲಿ ಫ್ರಾಂಕ್ ಮೇಯರ್ ಹಾಗೂ ರಾಬರ್ಟ್ ಹಂಬೂನ್ಸ್ ನೇತೃತ್ವದಲ್ಲಿ ಡ್ಯುಟೆರಾನ್‍ಗಳ ವೇಗೋತ್ಕರ್ಷಣೆಗಾಗಿ 220ಕೆವಿ ಸಾಮಥ್ರ್ಯದ ಕಾಕ್‍ರಾಫ್ಟ್-ವಾಲ್ಟನ್ ವಿದ್ಯುಜ್ಜನಕದ ನಿರ್ಮಾಣದಲ್ಲಿ ಕ್ಲಿಫರ್ಡ್ ಭಾಗಿಯಾದನು. ಅದಾದ ಎರಡು ವರ್ಷಗಳ ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗ ಎಲೆಕ್ಟ್ರಾನ್‍ಗಳ ವೇಗೋತ್ಕರ್ಷನೆಗಾಗಿ ಹೊಸ ವಿದ್ಯುಜ್ಜನಕವನ್ನು ನಿರ್ಮಿಸುವ ಹೊಣೆಯನ್ನು ಫ್ರಾಂ ಮೇಯರ್’ಗೆ ವಹಿಸಿತು. ಈತ ಕ್ಲಿಪರ್ಡ್‍ನನ್ನು ತನ್ನ ಸಹಾಯಕನಾಗಿ ಸೇರಿಸಿಕೊಂಡನು. ಇಲ್ಲಿ ಕ್ಲಿಫರ್ಡ್ ಎಲೆಕ್ಟ್ರಾನ್ ದ್ವಿ ಚದುರಿಕೆಯನ್ನು ಕುರಿತಾಗಿ ಸಂಶೋಧನೆ ಮಾಡಿ ಸಂಪ್ರಬಂಧ ಮಂಡಿಸಿ 1941ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಟೆಕ್ಸಾಸ್ ಮೂಲದ , ನ್ಯೂಯಾರ್ಕ್‍ನಲ್ಲಿ ಕಛೇರಿ ಹೊಂದಿದ್ದ ಪೆಟ್ರೋಲಿಯಂ ಇಂಧನ ಸಂಸ್ಕರಣ ಸಂಸ್ಥೆಯ ಪ್ರಯೋಗಾಲಯವನ್ನು ಕ್ಲಿಫರ್ಡ್ ಸೇರಿದನು. ಇಲ್ಲಿ ಪೆಟ್ರೋಲಿಯಂ ಹಾಗೂ ವಾಹನ ಸ್ನೇಹಕಗಳ ಸ್ವರೂಪವನ್ನು ಅನಿಲ ಹೀರಿಕೆಯನ್ನು ಕ್ಷ ಕಿರಣ ವಿವರ್ತನ ಹಾಗೂ ಚದುರಿಕೆ ಮೂಲಕ ನಿರ್ಧರಿಸುವ ಹೊಣೆ ಕ್ಲಿಫರ್ಡ್ ಹಾಗೂ ಸಂಗಡಿಗರ ಹೆಗಲೇರಿತು. ಇಂಧನಗಳ ಕ್ಷಮತೆಯನ್ನು ಸುಧಾರಿಸುವ ವೇಗವರ್ಧಕಗಳ ಸಂಶೋಧನೆಯೂ ಇದರಲ್ಲಿ ಸೇರಿತು. 1941ರ ಡಿಸೆಂಬರ್‍ನಲ್ಲಿ ಅಸಂಸಂ ಎರಡನೇ ಜಾಗತಿಕ ಯುದ್ದವನ್ನು ಪ್ರವೇಶಿಸಿತು. ಪರಮಾಣು ಅಸ್ತ್ರ ತಯಾರಿಕೆಗಾಗಿ ಮ್ಯಾನ್‍ಹಟ್ಟನ್ ಯೋಜನೆಯನ್ನು ಅಸಂಸಂಗಳ ಸರ್ಕಾರ ಕೈಗೆತ್ತಿಕೊಂಡಿತು. ಇದಕ್ಕಾಗಿ ಅಸಂಸಂಗಳಲ್ಲಿದ್ದ ಸಹಸ್ರಾರು ವಿಜ್ಞಾನಿಗಳಿಗೆ ಆಹ್ವಾನ ನೀಡಲÁಯಿತು. ಕ್ಲಿಫರ್ಡ್ ಸಹ ಇದರಲ್ಲಿ ಪಾಲ್ಗೊಳ್ಳಲು ಯತ್ನಿಸಿದನು. ಆದರೆ ಟೆಕ್ಸಾಸ್ ಕಂಪನಿ, ನ್ಯಾಯಾಲಯದ ಮೆಟ್ಟಲೇರಿ ಕ್ಲಿಫರ್ಡ್‍ನನ್ನು ತನ್ನಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಟೆಕ್ಸಾಸ್ ಕಂಪನಿಯ ಪ್ರಯೋಗಾಲಯದಲ್ಲಿ ಘನಸ್ಥಿತಿ ಭೌತಶಾಸ್ತ್ರ, ಕ್ಷ ಕಿರಣ ವಿವರ್ತನ (Diffraction) ಸ್ಪಟಿಕ ಶಾಸ್ತ್ರದಲ್ಲಿ ಕ್ಲಿಫರ್ಡ್ ಅಪಾರ ಜ್ಞಾನ ಗಳಿಸಿದನು. 1946ರಲ್ಲಿ ಈಗ ಓಕ್‍ಲ್ಯಾಂಡ್ ರಿಜ್ ನ್ಯಾಷನಲ್ ಲ್ಯಾಬೋರೇಟರಿ ಎಂದು ಹೆಸರಿಸಲಾಗಿರುವ ಆಗಿನ, ಟೆನಸ್ಸಿ ಕ್ಲಿಂಟನ್, ಪ್ರಯೋಗಾಲಯ ಸೇರಿದನು. ಇಲ್ಲಿ ಅರ್ನೆಸ್ಟ್ ವುಲನ್ ಜೊತೆಗೆ ನೂಟ್ರಾನ್ ರೂಪಕ್ರಮಗಳನ್ನು (Pattern) ಕ್ಷ-ಕಿರಣಗಳ ಫಲಿತಾಂಶಗಳೊಂದಿಗೆ ತಾಳೆ ನೋಡುವ ಸಾಧ್ಯತೆಯತ್ತ ಗಮನ ಹರಿಸಿದನು. ಸುಮಾರು ಒಂಬತ್ತು ವರ್ಷಗಳ ಕಾಲ ಇವರಿಬ್ಬರ ಸಂಶೋಧನಾ ಸಾಂಗತ್ಯ ಮುಂದುವರೆಯಿತು. ಬೆರ್‍ಟ್ರ್ಯಾಮ್ ಬಾರ್ಕ್‍ಹೌಸ್‍ನೊಂದಿಗೆ ಕ್ಲಿಫರ್ಡ್ 1994ರ ನೊಬೆಲ್ ಪ್ರಶಸ್ತಿ, ಸ್ವೀಕರಿಸುವಾಗ, ಅರ್ನೆಸ್ಟ್ ವುಲನ್‍ಗೂ ಸಹ ಈ ಗೌರವ ದಕ್ಕ ಬೇಕಾಗಿದ್ದಿತೆಂದು ಭಾವಿಸಿದ್ದನು. ಅದರೆ ಅರ್ನೆಸ್ಟ್ ವುಲನ್ 1984ರಲ್ಲಿಯೇ ಮೃತನಾಗಿದ್ದನು. 1956ರಲ್ಲಿ ಎಂ ಐಟಿ ಸೇರಿ ಪ್ರಾಧ್ಯಾಪಕನಾದ ಕ್ಲಿಫರ್ಡ್ ಇಲ್ಲಿ ತನ್ನ ಸಂಶೋಧಕ ವಿದ್ಯಾರ್ಥಿಗಳೊಂದಿಗೆ ಸ್ಪಟಿಕಗಳ ಆಂತರಿಕ ಕಾಂತೀಕರಣ, ಧೃವೀಕೃತ ದೂಲ ತಂತ್ರಜ್ಞಾನ ಅಭಿವೃದ್ಧಿ ಪರಿಶುದ್ದ ಸ್ಪಟಿಕಗಳಲ್ಲಿ ಗತಿಶೀಲ ಚದುರಿಕೆ, ನ್ಯೂಟ್ರಾನ್‍ಗಳ ಮೂಲ ಗುಣಗಳನ್ನು ಕುರಿತಾಗಿ ಸಂಶೋಧನೆ ನಡೆಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/25/2020