ಕ್ಲಾಯುಡೆ, ಕೊಹೆನ್ ತನ್ನಡ್‍ಜಿ –(1933--) ೧೯೯೭
ಫ್ರಾನ್ಸ್–ಅಲ್ಜಿರಿಯಾ -ಭೌತಶಾಸ್ತ್ರ-ನಿಮ್ನ ತಾಪಮಾನ ಶಾಸ್ತ್ರ-ನ್ಯಾನೋ ಕೆಲ್ವಿನ್ ತಾಪಮಾನ ಸಾಧಿಸಿದಾತ.
ಕ್ಲಾಯುಡೆ 1 ಏಪ್ರಿಲ್ 1933 ರಂದು ಆಗಫ್ರಾನ್ಸ್’ನಲ್ಲಿದ್ದ ಈಗಿನ ಆಲ್ಜಿರಿಯಾದ ಕಾನ್‍ಸ್ಟ್ಯಾಟಿನ್‍ನಲ್ಲಿ ಜನಿಸಿದನು. ಕ್ಲಾಯುಡೆಯದು ಕೆಳ ಮಧ್ಯಮ ವರ್ಗದ ಕುಟುಂಬವಾಗಿದ್ದರೂ ಆತನ ತಂದೆ ತಾಯಿಗಳು ವಿದ್ಯಾಭ್ಯಾಸಕ್ಕಾಗಿ ಬಹು ಪ್ರಾಮುಖ್ಯತೆ ನೀಡಿದ್ದರು. 1942ರಲ್ಲಿ ಆಲ್ಜೀರಿಯಾ ನಾಝಿಗಳ ವಶವಾಗಿ, ಯಹೂದಿಗಳು ಅಪಾಯದಲ್ಲಿ ಸಿಲುಕಿದರು. ಆದರೆ ಸಕಾಲಕ್ಕೆ ಆಗಮಿಸಿದ ಅಸಂಸಂಗಳ ಸೇನೆಯಿಂದ ಕ್ಲಾಯುಡೆ ಕುಟುಂಬ ನಿರ್ನಾಮವಾಗದೆ ಉಳಿಯಿತು. ಈ ಕಾಲದಲ್ಲಿ ಕ್ಲಾಯುಡೆ ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದನು. ಎರಡನೇ ಜಾಗತಿಕ ಯುದ್ದ ಮುಗಿಯಿತಾದರೂ ಫ್ರಾನ್ಸ್’ನಿಂದ ಆಲ್ಜಿರಿಯಾದ ಬಿಡುಗಡೆಗಾಗಿ ಹೋರಾಟಗಳು ಮುಂದುವರೆದಿದ್ದವು. ಇದಎಂದಾಗಿ 1953ರಲ್ಲಿ ಕ್ಲಾಯುಡೆ ಕುಟುಂಬ ಸುರಕ್ಷಿತ ತಾಣವೆಂದು ಪ್ಯಾರಿಸ್‍ಗೆ ಹೋಗಿ ನೆಲೆಸಿತು. ಸುಮಾರು ಇನ್ನೂರು ವರ್ಷಗಳ ಹಿಂದೆ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಸ್ಥಾಪನೆಗೊಂಡಿದ್ದ ಪ್ಯಾರಿಸ್‍ನ ಎಕೊಲೆ ನಾರ್ಮಲೆಗೆ ಸೇರಲು ಕ್ಲಾಯುಡೆ ಯತ್ನಿಸಿದನು. ಅತ್ಯುತ್ತಮರಾದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಪ್ರವೇಶ ದೊರೆಯುತ್ತಿತ್ತು. 1953ರಿಂದ 1957ರವರೆಗೆ ಇಲ್ಲಿ ವ್ಯಾಸಂಗ ಮಾಡಿದ ಕ್ಲಾಯುಡೆ ಹೆನ್ರಿ ಕಾರ್ಟನ್, ಲೌರೆಂಟ್ ಷ್ಯಾಟ್ರ್ಸ್, ಆಲ್ಫ್ರೆಡ್ ಕ್ಯಾಸ್ಟ್‍ಲರ್‍ನಂತಹ ಖ್ಯಾತ ವಿಜ್ಞಾನಿಗಳಿಂದ ಭೌತಶಾಸ್ತ್ರ, ಗಣಿತದ ಪಾಠಗಳನ್ನು ಕಲಿತನು. 1955ರಲ್ಲಿ ಕ್ಯಾಸ್ಟ್‍ಲರ್ ಕೆಳಗೆ ಡಿಪ್ಲೊಮಾ ಪಡೆಯಲು ಕ್ಲಾಯುಡೆ ನೋಂದಾಯಿಸಿಕೊಂಡನು. ವಾರಾಂತ್ಯದಲ್ಲಿ ಸಕ್ಲೆಯಲ್ಲಿ ಅಲ್ಬರ್ಟ್ ಮೆಸಾಯ್ ಕ್ವಾಂಟಂ ಭೌತಶಾಸ್ತ್ರ, ಆಂಟೋಲೆ ಅಬ್ರಹಂ ಬೈಜಿಕ ಪ್ರಯೋಗ ವಿಧಾನ, ಕ್ಲಾಡೆ ಬ್ಲಾಖ್ ಬೈಜಿಕ ಭೌತಶಾಸ್ತ್ರದಲ್ಲಿ ನೀಡುತ್ತಿದ್ದ ಉಪನ್ಯಾಸಗಳಿಂದ ಕ್ಲಾಯುಡೆ ಪ್ರಭಾವಿತನಾದನು. ಫ್ರಾನ್ಸ್’ನಲ್ಲಿ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಅಡಿಗಲ್ಲು ಹಾಕಿದ ಲೆ ಹೌಕೆಸ್ ಸಮ್ಮರ್ ಸ್ಕೂಲ್‍ನಲ್ಲಿ ಎರಡು ತಿಂಗಳಿದ್ದ ಕ್ಲಾಯುಡೆ, ಆಧುನಿಕ ಭೌತಶಾಸ್ತ್ರದ ಸ್ವರೂಪವನ್ನು ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಯಿತು. ಎಕೊಲೆ ನಾರ್ಮಲೆಯಿಂದ ಪದವಿ ಪಡೆದು,ಫ್ರಾನ್ಸ್ಹಾಗೂ ಆಲ್ಜಿರಿಯಾಗಳ ನಡುವೆ ನಡೆದ ಕದನದಲ್ಲಿ ಸುಮಾರು 28 ತಿಂಗಳು ಕಾಲ ಕಳೆದನು. ಇಲ್ಲಿ ಸೂರ್ಯಾಸ್ತದ ವೇಳೆಯಲ್ಲಿ ಬಲೂನ್‍ನಿಂದ ಸೋಡಿಯಂ ಧೂಳನ್ನು ಹಾರಿಸಿ ಅವುಗಳ ಪರಮಾಣುಗಳು ಸೂರ್ಯನಿಂದ ಚದುರಿಸಲ್ಪಟ್ಟು ಪ್ರದೀಪ್ತಗೊಳ್ಳುವುದನ್ನು ಅಳೆದು ಭೂಮಿಯಿಂದ ವಿವಿಧ ಔನ್ಯತ್ಯಗಳಲ್ಲಿರುವ ಹಲವಾರು ಪ್ರಾಚಲಗಳನ್ನು (Parameters) ಅರಿಯುವ ಪ್ರಯೋಗ ನಡೆಸುತ್ತಿದ್ದರು. 1960ರಲ್ಲಿ ಕ್ಯಾಸ್ಟಲರ್‍ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಲು ಫ್ರಾನ್ಸ್’ನ ವೈಜ್ಞಾನಿಕ ಸಂಶೋಧನಾ ಕೇಂದ್ರವನ್ನು ಕ್ಲಾಯುಡೆ ಸೇರಿದನು. ಇಲ್ಲಿ ನಡೆಸಿದ ಕೆಲ ಪ್ರಯೋಗಗಳಲ್ಲಿ ಝೀಮನ್ ಉಪಮಟ್ಟಗಳಲ್ಲಿ ನಿರೀಕ್ಷೆಗೆ ಹೊರತಾದ ದ್ಯುತಿ ಪಲ್ಲಟಗಳು ವೀಕ್ಷಣೆಯಾಗಿದ್ದವು. ಇವುಗಳಿಗೆ ಕಾರಣ ಹುಡುಕಿದ ಕ್ಲಾಯುಡೆ 1962ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಪ್ಯಾರಿಸ್ “ವಿಶ್ವವಿದ್ಯಾಲಯದಲ್ಲಿ ಬೋಧಕನಾದನು. ಇಲ್ಲಿ ಕ್ಲಾಯುಡೆ ತನ್ನ ವಿದ್ಯಾರ್ಥಿಗಳೊಂದಿಗೆ ಪರಮಾಣು ಪೆÇ್ರೀಟಾನ್ ಅಂತಕ್ರಿಯೆಯನ್ನು ವಿವರಿಸಿದನು. 1984ರಲ್ಲಿ ಅಲೇಸ್ ಆ್ಯಸ್‍ಪೆಕ್ಟ್‍ನೊಂದಿಗೆ ಲೇಸರ್ ತಂಪಿಸಿಕೆ ಹಾಗೆ ಸೆರೆ ಹಿಡಿಕೆಯನ್ನು ಕುರಿತಾಗಿ ಸಂಶೋಧನೆ ನಡೆಸತೊಡಗಿದನು. ಇವರು ಕ್ವಾಂಟಂ ವ್ಯತಿಕರಣ(Quantum Interference) ವಿಧಾನ ಬಳಸಿ, ಪರಮಾಣುಗಳನ್ನು ಅವುಗಳ ಎಲ್ಲಾ ಚಲನ ಚೈತನ್ಯ ನಷ್ಟವಾಗುವಂತಹ ಅವುಗಳ ಹಿಂಪುಟಿತ ಸ್ಥಿತಿಗಿಂತಲೂ ಕೆಳಗಿನ ಅತ್ಯಲ್ಪ ತಾಪಮಾನಕ್ಕೆ ಇಳಿಸಿದ ಮೊದಲಿಗರೆನಿಸಿದರು. ಇದು ಪರಮಾಣುಗಳನ್ನು ನ್ಯಾನೋಕೆಲ್ವಿನ್ ತಾಪಮಾನಕ್ಕೆ ಇಳಿಸುವ ಸಾಧ್ಯತೆ, ಭೌತಶಾಸ್ತ್ರದ ಹೊಸ ಚಿಂತನೆಗಳಿಗೆ ಕಾರಣವಾಯಿತು. ಈ ಸಾಧನೆಗಾಗಿ 1997ರಲ್ಲಿ ಕ್ಲಾಯುಡೆ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/23/2020