ಸ್ಟೀನ್’ಬರ್ಜರ್, ಜಾಕ್ (1921--) ೧೯೮೮
ಅಸಂಸಂ-ಬೈಜಿಕ ಭೌತಶಾಸ್ತ್ರ-ಕಣ ಭೌತಶಾಸ್ತ್ರದಲ್ಲಿ ಶಿಷ್ಟ ಮಾದರಿ ಸಿದ್ಧಾಂತ ಸೃಜಿಸಿದಾತ.
ಸ್ಟೀನ್’ಬರ್ಜರ್, 1934ರಲ್ಲಿ ಅಸಂಸಂಗಳಿಗೆ ವಲಸೆ ಹೋದನು. ಚಿಕಾಗೋದಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಕಿರಣ ಅಧ್ಯಯನ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ನಂತರ ವಿಶ್ವ ಕಿರಣಗಳಲ್ಲಿನ ಮ್ಯುಯಾನ್ ಕಣಗಳ ಬಗೆಗೆ ಸಂಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. ಮ್ಯುಯಾನ್ ಶೈಥಿಲ್ಯ (DECAY) ಹೊಂದಿ, ಒಂದು ಎಲೆಕ್ಟ್ರಾನ್ ಹಾಗೂ ಎರಡು ನ್ಯೂಟ್ರಾನ್‍ಗಳಿಗೆ ಕಾರಣವಾಗುವುದೆಂದು ತೋರಿಸಿದನು. ಮೆಲ್ವಿನ್ ಷ್ಟಾಟ್ರ್ಸ್, ಎಲ್.ಲೆಡೆರ್‍ಮನ್ ಜೊತೆಗೆ ಈ ದಿಶೆಯಲ್ಲಿ ಸಂಶೋಧನೆ ಮುಂದುವರೆಸಿದ ಸ್ಟೀಯ್ನ್‍ಬರ್ಜರ್ ನ್ಯೂಟ್ರಿನೋಗಳಲ್ಲಿ ಎಲೆಕ್ಟ್ರಾನ್ ನ್ಯೂಟ್ರಿನೋ ಹಾಗೂ ಮ್ಯುಯಾನ್ ನ್ಯೂಟ್ರಿನೋಗಳೆಂದು ಎರಡು ಬಗೆಯಲ್ಲಿ ಇರಬೇಕೆಂದು ವಾದ ಮಂಡಿಸಿದನು. 1960ರಲ್ಲಿ ಬ್ರೂಕ್‍ಹೇವನ್ ನ್ಯಾಷನಲ್ ಲ್ಯಾಬೋರೇಟರಿಯ ಪ್ರಯೋಗಗಳಲ್ಲಿ ಈ ನ್ಯೂಟ್ರಿನೋಗಳು ಪತ್ತೆಯಾದವು. 1968 ರಿಂದ ಜಿನೀವಾದಲ್ಲಿರುವ ಯು.ಎನ್.ಎ. ಪ್ರಯೋಗಾಲಯದಲ್ಲಿ ಸ್ಟೀಯ್ನ್‍ಬರ್ಜರ್, ನ್ಯೂಟ್ರಿನೋ, ಬೈಜಿಕ ಬಲಗಳ ಅಧ್ಯಯನ ಮುಂದುವರೆಸಿದನು. ಇಲ್ಲಿಯೇ ದ್ರವ್ಯಗಳ ನಿರ್ಮಾಣಕ್ಕೆ ಕಾರಣವಾದ ಶಿಷ್ಟ ಮಾದರಿಯನ್ನು ಮಂಡಿಸಿದನು. ಈ ಮಾದರಿಯಲ್ಲಿ ಕ್ವಾರ್ಕ್ ಹಾಗೂ ಲೆಪ್ಟಾನ್ ದ್ರವ್ಯದ ಮೂಲ ಕಣಗಳು. ಆರು ಬಗೆಯ ಕ್ವಾರ್ಕಗಳಿದ್ದು ಇವುಗಳಲ್ಲಿ ಮೂರಕ್ಕೆ, 2/3 ,1/3 ವಿದ್ಯುದಾವಿಷ್ಟವಿದ್ದರೆ, ಇನ್ನುಳಿದ ಮೂರಕ್ಕೆ –1/3 ಪ್ರೋಟಾನ್ ಆವಿಷ್ಟವಿರುತ್ತದೆ, ಇವುಗಳು ವಿಶಿಷ್ಟ ರಂಜನೆ (CHARM) ಹಾಗೂ ಗಿರಕಿಯನ್ನು ಹೊಂದಿರುತ್ತವೆ. ಇವು ಯಾವುವು ಎಲ್ಲೂ ಮುಕ್ತವಾಗಿರದೆ, ಬೀಜದಲ್ಲಿ ಬಂಧಿಸಲ್ಪಟ್ಟಿರುತ್ತವೆ. ಲೆಪ್ಟಾನ್‍ಗಳು, ಹಗುರುವಾಗಿರುವ ಕಣಗಳಾಗಿದ್ದು ಇವು ಸಹ ಆರು ಬಗೆಯಲ್ಲಿರುತ್ತವೆ. ನ್ಯೂಟ್ರಿನೋಗಳು ದುರ್ಬಲ ಬೈಜಿಕ ಬಲಗಳ ಮೂಲಕ ಅಂತರ್‍ಕ್ರಿಯೆ ಹೊಂದಿವೆ. ಮ್ಯೂಯಾನ್ ಹಾಗೂ ಟೌ ಕಣಗಳ ಆಯುಷ್ಯ ಅಲ್ಪಾವಾದುದು. ಸ್ಟೀನ್’ಬರ್ಜರ್’ನ ಈ ಮಾದರಿ ಈಗ ಚಾಲ್ತಿಯಲ್ಲಿದೆಯಾದರೂ, ಮುಂದೆ ಇದು ಬದಲಾಗುವುದೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಸ್ಟೀಯ್ನ್‍ಬರ್ಜರ್ 1988ರಲ್ಲಿ ಲಿಯಾನ್ ಲೆಡರ್‍ಮನ್ ಹಾಗೂ ಮೆಲ್ವಿನ್ ಷ್ಟಾಟ್ಸ್’ರೊಂದಿಗೆ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020