ಸೈಮನ್, ವ್ಯಾಂಡರ್ ಮೀರ್ 1984
ಸೈಮನ್, ವ್ಯಾಂಡರ್ ಮೀರ್ ೧೯೮೪ ಸೈಮನ್ ನೆದರ್’ಲ್ಯಾಂಡ್’ನ ಹೇಗ್‍ನಲ್ಲಿ ಜನಿಸಿದನು. ಶಿಕ್ಷಕರಾಗಿದ್ದ ತಂದೆ ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರ ಮನ್ನಣೆಯಿತ್ತಿದ್ದರು. 1943 ರಲ್ಲಿ ಪ್ರೌಢಶಿಕ್ಷಣವನ್ನು ಸೈಮನ್ ಮುಗಿಸಿದನಾದರೂ , ಹಾಲೆಂಡ್ ಜರ್ಮನ್ ವಶದಲ್ಲಿದ್ದುದರಿಂದ ಕಾಲೇಜುಗಳು ಮುಚ್ಚಿದ್ದವು. ಆದ್ದರಿಂದ ಎರಡು ವರ್ಷಗಳ ಕಾಲ ಸೈಮನ್ ಕಲಾವಿದ್ಯಾರ್ಥಿಯಾಗಿದ್ದನು. 1945ರಲ್ಲಿ ಕಾಲೇಜುಗಳು ಪುನರಾರಂಭವಾದಾಗ ಡೆಲ್ಫ್ಟ್‍ನಲ್ಲಿನ್ ಟೆಕ್ನಿಕಲ್ ವಿಶ್ವವಿದ್ಯಾಲಯವನ್ನು ಸೈಮನ್ ಸೇರಿದನು. 1952ರಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿ ಫಿಲೆಪ್ಸ್ ಸಂಶೋಧನಾ ಸಂಸ್ಥೆ ಸೇರಿ ಅಧಿಕ ವಿಭವದ ವೈದ್ಯುತ್ ವಲಯದ ಬಗೆಗೆ ಸಂಶೋಧನೆ ನಡೆಸಿದನು. 1956ರಲ್ಲಿ ಜಿನಿವಾದಲ್ಲಿನ ಅಇಖಓ ಸಂಸ್ಥೆ ಸೇರಿದನು. ಇಲ್ಲಿ ಬೈಜಿಕ ಸಂಶೋಧನೆಗಳಿಗೆ ಬೇಕಾದ ಸಲಕರಣೆಗಳನ್ನು ನಿರ್ಮಿಸುವಲ್ಲಿ ಪರಿಶ್ರಮಿಸಿದನು. ಈ ನಿಟ್ಟಿನಲ್ಲಿ ಪರಿಚಯಿಸಿದ ಹೊಸ ತಂತ್ರಗಳಿಗಾಗಿ ಸೈಮನ್ 1984ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/2/2019