ಷೋಲೋ, ಆರ್ಥರ್ (ಲಿಯೋನಾರ್ಡ್)—(1921--) ೧೯೮೧ ಅಸಂಸಂ-ಭೌತಶಾಸ್ತ್ರ-ಲೇಸರ್’ ಸಹ ಉಪಜ್ಞೆಕಾರ.
ಷೋಲೋ ಡಾಕ್ಟರೇಟ್ ಪಡೆದ ನಂತರ ಟೋರೋಂಟೋದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದನು. ನಂತರ ಕೊಲಂಬಿಯಾದಲ್ಲಿ ಟೌನೆಸ್ ಜೊತೆಗೆ ಸಂಶೋಧನೆ ಪ್ರಾರಂಭಿಸಿದನು. ಷೋಲೋ, ಟೌನೆಸನ್ ಸಹೋದರಿಯನ್ನು ವಿವಾಹವಾಗುವುದರೊಂದಿಗೆ ಇವರಿಬ್ಬರ ಸ್ನೇಹ ಸಂಬಂಧಕ್ಕೆ ತಿರುಗಿತು. 10 ವರ್ಷಗಳ ಕಾಲ ಬೆಲ್ ಲ್ಯಾಬೋರೇಟರಿಯಲ್ಲಿದ್ದ ಈತ, 1961ರಲ್ಲಿ ಸ್ಟ್ಯಾನ್’ಫೋರ್ಡ್‍ನಲ್ಲಿ ಪ್ರಾಧ್ಯಾಪಕನಾದನು. ಟೌನೆಸ್ ಹಾಗೂ ಷೋಲೋ ಮೇಸರ್ ತತ್ತ್ವ ಬಳಸಿ ಲೇಸರ್‍ನ್ನು ನಿರ್ಮಿಸಿದರು. 1970ರಿಂದ ಷೋಲೋ, ಪರಮಾಣುರೋಹಿತ, ಭೌತ ಸ್ಥಿರಗಳ ಮೌಲ್ಯ ನಿರ್ಧರಿಸಲು ಲೇಸರ್ ಬಳಸಿದನು. 1981ರಲ್ಲಿ ಷೋಲೋ ಲೇಸರ್ ರೋಹಿತ ದರ್ಶಕಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/30/2019