ವೂಲ್ಫ್’ಗ್ಯಾಂಗ್ , ಪೌಲಿ ೧೯೮೯
ಪೌಲ್ 10 ಆಗಸ್ಟ್ 1913ರಂದು ಲೊರೆಂಜ್‍ಕಿರ್ಕ್ ಎಂಬ ಸಣ್ಣ ಹಳ್ಳೀಯಲ್ಲಿ ಜನಿಸಿದನು. ಈತನ ತಂದೆ ಮುಂಖೇನ್‍ನಲ್ಲಿ ಔಷಧಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದನು. ಈತ ನೊಬ್ಲೆ ಪ್ರಶಸ್ತಿ ವಿಜೇತ ವಿಲ್‍ಹೆಲ್ಮ್ ಓಸ್ಟ್‍ವಾಲ್ಡ್‍ನ ಶಿಷ್ಯನಾಗಿದ್ದನು. ಇದರಿಂದ ತಂದೆಯ ಮೂಲಕ ಪೌಲ್‍ಗೆ ವಿಜ್ಞಾನಿಗಳೆಂದರೆ ಗೌರವ ಅಭಿಮಾನಗಳು ತುಂಬಿದ್ದವು. ಪೌಲ್‍ನ ತಂದೆಯ ಸಹಪಾಠಿಯಾಗಿದ್ದ ಅರ್ನಾಲ್ಡ್ ಝೊಮರ್ಫೆಲ್ಟ್ ನಿಖರ ಅಳತೆಯ ತಂತ್ರಗಳತ್ತ ಗಮನ ಹರಿಸಬೇಕೆಂದು ಸೂಚಿಸಿದನು. ಪೌಲ್ ವಿದ್ಯಾರ್ಥಿ ಜೀವನದುದ್ದಕ್ಕೂ ಮಹಾನ್ ವಿಜ್ಞಾನಿಗಳ, ಚಿಂತಕರ ಪ್ರಭಾವಕ್ಕೊಳಗಾದನು. ಪದವಿ ಗಳಿ¸ದ ನಂತರ ಪೌಲ್ ಕೀಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ಬೆರಿಲಿಯಂನ ಬೈಜಿಕ ಭ್ರಾಮ್ಯತೆಯನ್ನು ನಿಖರವಾಗಿ ಅಳೆದು ಪೌಲ್ ಡಾಕ್ಟರೇಟ್ ಗಳಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿನ ನಿರ್ಬಂಧಗಳಿಂದಾಗಿ ಕೆಲ ಕಾಲ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಕಿರಣಗಲ ಪಾತ್ರದ ಅಧ್ಯಯನ ನದೆಸಿದನು. ಪೌಲ್ ಡ್ಯುಟೆರಾನ್‍ನ ವೈದ್ಯುತ್ ಶ್ಶೆಥಿಲ್ಯ ಹಾಗೂ ಲ್ಯಾಂಬ್ ಪಲ್ಲಟವನ್ನು ಅಳೆದನು. 1952ರಲ್ಲಿ ಬಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕನಾಗಿ ಪೌಲ್ ನೇಮಕಗೊಂಡನು. ದ್ರವ್ಯರೋಹಿತಮಾಪಕ ನಿರ್ಮಾಣದಲ್ಲಿ ಪೌಲ್ ವಹಿಸಿದ ಪಾತ್ರ ಗಮನಾರ್ಹವಾದುದು. ಇದಕ್ಕಾಗಿ ಪೌಲ್ 1989ರಲ್ಲಿನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಈಗ ಪೌಲ್ ನ್ಯೂಟ್ರಾನ್ ಭೌತಶಾಸ್ತ್ರದಲ್ಲಿ ಅದರಲ್ಲೂ ವಿಶೇಷವಾಗಿ ನ್ಯೂಟ್ರಾನ್‍ಗಳ ಸಂಗ್ರಹಣೆಗಾಗಿ ಕಾಂತತ್ವ ಉಂಗುರ ವಿಧಾನಗಳನ್ನು ಸುಧಾರಿಸುವತ್ತ ಗಮನ ಹರಿಸಿದ್ದನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019