ವಿಲ್ಸನ್, ಕೆನ್ನೆತ್ ಗೆಡ್ಡೆಸ್ (1936--) ೧೯೮೨ ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಪ್ರಾವಸ್ಥೆಗಳ ಸ್ಥಿತ್ಯಂತರ (PHASE TRANSITION) ತಿಳಿಸಿದಾತ.
ಭೌತ ವ್ಯವಸ್ಥೆಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಸಾಗುವುದನ್ನು ಸೈದ್ಧಾಂತಿಕವಾಗಿ ಸಾಕಷ್ಟು ಸರಳವಾಗಿ ವಿಶ್ಲೇಷಿಸಬಹುದು. ಆದರೆ ಎರಡು ಅವಸ್ಥೆಗಳ ಮಧ್ಯದ ಸ್ಥಿತ್ಯಂತರದ ವಿಶ್ಲೇಷಣೆ ಅಸಾಧ್ಯ ಎನ್ನುವಷ್ಟು ಜಟಿಲವಾದುದು. ಭೌತಿಕ ಕ್ರಿಯೆಗಳು ಜರುಗುವ ಅವಧಿಗಳು ಶೀಘ್ರವಾಗಿ ಬದಲಾಗುವುದೇ ಈ ಕ್ಲಿಷ್ಟತೆಗೆ ಮೂಲ ಕಾರಣ . 1974ರಲ್ಲಿ ವಿಲ್ಸನ್ ಇವುಗಳನ್ನು ವಿಶ್ಲೇಷಿಸುವ, ವಿವರಿಸುವ ತಂತ್ರ ನೀಡಿದನು. ಉದಾಹರಣೆಗೆ ಅನುಕಾಂತೀಯ (PARAMAGNETISM) ವಸ್ತುವೊಂದನ್ನು ಕಾಂತಗೊಳಿಸುವಾಗ, ಪರಮಾಣುಗಳು ಪಂಜ್ತೀಕರಣಗೊಳ್ಳುತ್ತವೆ (ALIGN).ಆಗ ಈ ಪ್ರಭಾವ ಒಂದು ಪರಮಾಣುವಿನಿಂದ ಪರಮಾಣುವಿಗೆ ಒಂದು ಅಣುವಿನಿಂದ ಇನ್ನೊಂದು ಅಣುವಿಗೆ ಅತ್ಯಲ್ಪ ಕಾಲಾವಧಿಯಲ್ಲಿ ವರ್ಗಾಂತರವಾಗುತ್ತದೆ. ಎಲ್. ಕಡನಾಫ್ಇಂತಹ ಪರಮಾಣುಗಳ ಗಿರಕಿಯನ್ನು ವರ್ಧಿಸಿ ಸ್ಥಿತ್ಯಂತರವನ್ನು ಅಳೆಯಬಹುದೆಂದು ಹೇಳಿದ್ದನು. ವಿಲ್ಸನ್ ಈ ತತ್ವದ ಹಿನ್ನೆಲೆಯಲ್ಲಿ ಕಾಂತ ವಸ್ತುಗಳು, ಮಿಶ್ರಲೋಹದ ಬದಲಾವಣೆ, ದ್ರವದಿಂದ ಅನಿಲ ರೂಪಾಂತರಿಕೆಯ ಸ್ಥಿತ್ಯಂತರಗಳನ್ನು ಅಳೆದನು. ಇದಕ್ಕಾಗಿ ವಿಲ್ಸನ್ 1982ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019