ವಿಲಿಯಂ, ಆಲ್ಫ್ರೆಡ್ ಫೌಲರ್-(1911--) ೧೯೮೩ ಅಸಂಸಂ-ಭೌತಶಾಸ್ತ್ರಜ್ಞ-ತಾರೆಗಳಲ್ಲಿನ ಬೈಜಿಕ ಸಂಶ್ಲೇಷಣಾ ಸಿದ್ದಾಂತ ನೀಡಿದಾತ.
ವಿಲಿಯ್‍ಂನ ತಾತ ಸ್ಕಾಟ್‍ಲ್ಯಾಂಡ್‍ನವನಾಗಿದ್ದು ಕಲ್ಲಿದ್ದಲಿನ ಗಣಿಯಲ್ಲಿ ಕೆಲಸ ಮಾಡಿ, 1880ರ ಸುಮಾರಿಗೆ ಅಸಂಸಂಗಳಿಗೆ ಬಂದು ನೆಲೆಸಿದ್ದನು. ಪೆನ್‍ಸಿಲ್ವೇನಿಯಾದ ಪಿಟ್ಸ್‍ಬರ್ಗ್‍ನಲ್ಲಿ ವಿಲಿಯಂನ ಜನನವಾಯಿತು. ವಿಲಿಯಂ, ಎರಡು ವರ್ಷದವನಿದ್ದಾಗ ಲೆಕ್ಕಿಗನಾಗಿದ್ದ ಆತನ ತಂದೆ, ಓಹಿಯೋ ರಾಜ್ಯದ ಲಿಮಾ ಪಟ್ಟಣಕ್ಕೆ ವರ್ಗಾವಣೆಗೊಂಡನು. ಲಿಮಾ ಪಟ್ಟಣ ರೈಲ್ವೇ ಕೇಂದ್ರವಾಗಿದ್ದರಿಂದ, ಬಾಲ್ಯದಿಂದಲೇ ವಿಲಿಯಂ ರೈಲುಗಳತ್ತ ಆಕರ್ಷಿತನಾದನು. ಉಗಿ ಇಂಜಿನ್, ರೈಲುಗಾಡಿಗಳು ವಿಲಿಯಂನಲ್ಲಿ ಆಪ್ತತೆ ಹಾಗೂ ಅನನ್ಯತೆಯನ್ನು ಪ್ರೇರೇಪಿಸುತ್ತಿದ್ದವು. ಆದುದರಿಂದ ಖ್ಯಾತ ವಿಜ್ಞಾನಿಯಾದ ನಂತರವೂ ವಿಲಿಯಂ 1973ರಲ್ಲಿ ರಷ್ಯಾದಲ್ಲಿದ್ದ ಉಗಿ ಇಂಜಿನ್ ಚಾಲಿತ ಇಂಜಿನ್‍ನಲ್ಲಿ ಖರೋವ್ಸ್ ಹಾಗೂ ಚೈಲಾ ಮಧ್ಯೆ ಸುಮಾರು 500 ಕಿ,ಮೀ. ಪ್ರಯಾಣ ಕೈಗೊಂಡನು. ವಿಲಿಯಂನ ಅರವತ್ತನೇ ವಾರ್ಷಿಕೋತ್ಸವಕ್ಕೆ ಆತನ ಶಿಷ್ಯರೂ ಹಾಗೂ ಹಿತೈಷಿಗಳು ರೈಲ್ವೇ ಇಂಜಿನ್ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಹೋರೆಸ್‍ಮನ್ ಶಾಲೆ, ಹಾಗೂ ಲಿಮಾದ ಸೆಂಟ್ರಲ್ ಹೈ ಸ್ಕೂಲ್‍ನಲ್ಲಿ ವಿಲಿಯಂನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಜರುಗಿತು. ಇಲ್ಲಿಯ ಅಧ್ಯಾಪಕರು ವಿಲಿಯಂಗೆ ಇಂಜಿನಿಯರಿಂಗ್‍ನಲ್ಲಿದ್ದ ಆಸಕ್ತಿಗೆ ನೀರೆರೆದು ಪೋಷಿಸಿದರು. ಪಿಂಗಾಣಿ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಲು ಕೊಲಂಬಸ್‍ನಲ್ಲಿರುವ ಓಹಿಯೋ ರಾಜ್ಯದ ವಿಶ್ವವಿದ್ಯಾಲಯ ಸೇರಿದನು. ಪದವಿ ವಿದ್ಯಾರ್ಥಿಯಾಗಿರುವಾಗಲೇ ಪೋರ್ಟ್‍ಲ್ಯಾಂಡ್ ಸಿಮೆಂಟ್ ತಯಾರಿಕೆಯ ಬಗೆಗೆ ಲೇಖನ ಬರೆದು ಪ್ರಶಸ್ತಿ ಗಳಿಸಿದನು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಗಳಿಸುವ ಅವಕಾಶಗಳಿದ್ದವು. ಇದನ್ನು ಬಳಸಿಕೊಂಡು ವಿಲಿಯಂ ಹಾಗೂ ಮುಂದೆ ಜಗತ್ಪ್ರಸಿದ್ದ ಸೈದ್ಧಾಂತಿಕ ಭೌತಶಾಸ್ತ್ರಜ್ಞನಾದ ಲಿಯೊನಾರ್ಡ್ ಐ ಷೀಫ್ನ ಭೌತಶಾಸ್ತ್ರದ ವಿಭಾಗ ಸೇರಿದರು. ಮುಂದೆ ಇವರಿಬ್ಬರೂ ಜೀವನವಿಡೀ ಆತ್ಮೀಯ ಗೆಳೆಯರಾಗಿದ್ದರು. ಪದವಿಯಲ್ಲಿರುವಾಗ ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟ ವಿಲಿಯಂ, ಅದರ ಪರಿಹಾರಕ್ಕಾಗಿ ಹೋಟೆಲ್‍ಗಳಲ್ಲಿ, ಮಾರುಕಟ್ಟೆಗಳಲ್ಲಿ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿದನು. ಸಾಯಂಕಾಲ ಹಾಗೂ ರಾತ್ರಿ ವೇಳೆ, ದೈಹಿಕ ಪರಿಶ್ರಮದ ಕೂಲಿ ಕೆಲಸ ಸಹ ಮಾಡಿದನು. ವಿಲಿಯಂಗೆ ಅಧ್ಯಯನದಲ್ಲಿದ್ದ ಆಸಕ್ತಿಯನ್ನು ಗಮನಿಸಿ ಆತನ ಪ್ರಾಧ್ಯಾಪಕ ವಿಲ್ಲಾರ್ಡ್ ಬೆನ್ನಟ್, ಪದವಿಯಲ್ಲಿರುವಾಗಲೇ ಎಲೆಕ್ಟ್ರಾನ್ ದೂಲಗಳ ನಾಭೀಕರಣ (ELECTRON BEAM FOCUSING)ಕುರಿತಾಗಿ ಪ್ರಯೋಗ ನಡೆಸಲು ಲೇಖನ ಪ್ರಕಟಿಸಲು ಅನುಮತಿ ನೀಡಿದನು. ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥನಾಗಿದ್ದ ಜಾನ್‍ಬೈರ್, ಶಾಲೆಯ ಅವಧಿಯ ನಂತರ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ವಿಲಿಯಂಗೆ ಅನುಮತಿ ನೀಡಿದನು. ಇದರಿಂದ ಇಂಜಿನಿಯರಿಂಗ್‍ನ ಅನ್ವಯಿಕತೆ, ವಿಜ್ಞಾನದ ಸೈದ್ಧಾಂತಿಕತೆ, ಪ್ರಯೋಗಶೀಲತೆಗಳು ವಿಲಿಯಂನಲ್ಲಿ ಮುಪ್ಪುರಿಗೊಂಡವು. ಪದವಿ ಮುಗಿಸಿದ ನಂತರ ಡಬ್ಲ್ಯು.ಕೆ.ಕೆಲ್ಲಾಗ್ ರೇಡಿಯೇಷನ್ ಲ್ಯಾಬೋರೇಟರಿ ಸೇರಿದ ವಿಲಿಯಂಗೆ ಚಾಲ್ರ್ಸ್ ಕ್ರಿಶ್ಚಿಯನ್ ಲೌರಿಟ್‍ಸೆನ್‍ನ ಮಾರ್ಗದರ್ಶನ ದಕ್ಕಿತು. ಈತ ಇಂಜಿನಿಯರ್, ಭೌತಶಾಸ್ತ್ರಜ್ಞ, ವಾಸ್ತುಶಿಲ್ಪಿ ಹಾಗೂ ಉತ್ತಮ ಸಂಗೀತಗಾರನಿಗೆ ಹೆಸರು ವಾಸಿಯಾಗಿದ್ದನು. ಅಸಂಸಂ ಮೆಕ್ಕೆಜೋಳದ ಕಾರ್ನ್ ಫೆ್ಲೀಕ್‍ನ ಉದ್ಯಮಿ ಆ್ಯಂಡ್ಯ್ರೂ ಮಿಲಿಕನ್ ಈ ಪ್ರಯೋಗಾಲಯ ಸ್ಥಾಪಿಸಿದ್ದನು. ಚಾಲ್ರ್ಸ್ ಕ್ರಿಶ್ಚಿಯನ್ ಲೌರಿಟ್‍ಸೆನ್ ಮಾರ್ಗದರ್ಶನದಲ್ಲಿ ವಿಲಿಯಂ ಅಲ್ಪ ಅಣು ಸಂಖ್ಯೆಯ ಧಾತುಗಳ ವಿಕಿರಣಶೀಲತೆಯನ್ನು ಕುರಿತಾಗಿ ಸಂಪ್ರಂಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. ಈ ಸಂಪ್ರಂಬಂಧದಲ್ಲಿ ಆವಿಷ್ಟಿತ ಕಣಗಳ ಕೂಲಂಬ್ ಬಲಗಳನ್ನು ಬಹಿಷ್ಕರಣಗೊಳಿಸಿದಾಗ, ಬೈಜಿಕ ಬಲಗಳು, ಎರಡು ಪ್ರೋಟಾನ್ ಅಥವಾ ಎರಡು ನ್ಯೂಟ್ರಾನ್‍ಗಳ ಮಧ್ಯೆ ಒಂದೇ ರೀತಿಯಾಗಿದ್ದು, ಆವಿಷ್ಟ ಸಮಾಂಗೀಯವಾಗಿರುವುವೆಂದು ಹೇಳಿದನು. ಇಲ್ಲಿರುವಾಗಲೇ ಓಪೆನ್ ಹೀಮರ್‍ನಿಂದ ಪ್ರಯೋಗದ ಫಲಿತಾಂಶಗಳು ಸೈದ್ಧಾಂತಿಕವಾಗಿ ಹೇಗೆ ವಿವೇಚಿಸಲ್ಪಡುತ್ತವೆಯೆಂದು ನಿರ್ಧರಿಸುವ ಮಾರ್ಗವನ್ನು ವಿಲಿಯಂ ಕಲಿತನು. ವಿಲಿಯಂ ಹಾಗೂ ಸಂಗಡಿಗರು ಕೆಲ್ಲಾಗ್ಸ್ ಪ್ರಯೋಗಾಲಯದಲ್ಲಿ ಪೆÇ್ರೀಟಾನ್‍ಗಳು, ಇಂಗಾಲ ಹಾಗೂ ಸಾರಜನಕ ಅಯಾನ್‍ಗಳೊಂದಿಗೆ ಹೇಗೆ ಬೈಜಿಕವಾಗಿ ಪ್ರತಿಕ್ರಿಯೆಗೊಳಗಾಗುತ್ತವೆಯೆಂದು ಅಧ್ಯಯನ ನಡೆಸುತ್ತಿದ್ದರು. ಇದೇ ವೇಳೆಗೆ 1939ರಲ್ಲಿ ಹ್ಯಾನ್ಸ್ ಬೆಥೆ ಇಂಗಾಲ ಸಾರಜನಕ ಚಕ್ರವನ್ನು ವಿವರಿಸಿದನು. ಇದು ಇವರ ಪ್ರಯೋಗಗಳ ಮೇಲೆ ಭಾರಿ ಪರಿಣಾಮ ಬೀರಿತು. ಈ ವೇಳೆಗೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಕೆಲ್ಲಾಗ್ಸ್ ಪ್ರಯೋಗಾಲಯದಲ್ಲಿ ಯುದ್ದ ಸಂಬಂಧಿ ಸಂಶೋಧನೆಗಳು ಪ್ರಾಧಾನ್ಯತೆ ಗಳಿಸಿದವು. 1944ರಲ್ಲಿ ವಿಲಿಯಂ ಮಿಲಿಟರಿಗೆ ನೆರವು ನೀಡುವ ಕಾರ್ಯಕ್ಕೆ ನಿಯೋಜಿಸಲ್ಪಟ್ಟನು. ಯುದ್ದದ ನಂತರ ಚಾಲ್ರ್ಸ್ ಲೌರಿಟ್‍ಸೆನ್ ಆತನ ಮಗ ಟಾಮಿ ಲೌರಿಟ್‍ಸನ್ ಹಾಗೂ ವಿಲಿಯಂ ಕೆಲ್ಲಾಗ್ ಸಂಶೋಧಾನಾಲಯವನ್ನು ಪುನರುಜ್ಜೀವನಗೊಳಿಸಿ, ತಾರೆಗಳ ಗರ್ಭದಲ್ಲಿ ಜರುಗುವ ಬೈಜಿಕ ಕ್ರಿಯೆಗಳ ಅಧ್ಯಯನ ಕೇಂದ್ರವಾಗಿಸಿದರು. ಎರಡನೇ ಜಾಗತಿಕ ಯುದ್ದಕ್ಕಿಂತ ಸ್ವಲ್ಪ ಮೊದಲು ಹ್ಯಾನ್ಸ್ ಸ್ಕಾಬ್ ಹಾಗೂ ವಿಲಿಯಂ ಸ್ಟೀಫೆನ್ಸ್, 5ರ ದ್ರವ್ಯರಾಶಿಯ ನಂತರ ಪರಮಾಣುವಿನ ಬೀಜ ಸ್ಥಿರವಾಗಿರುವುದಿಲ್ಲವೆಂದು ಹೇಳಿದ್ದರು. ಇದರ ಅಧ್ಯಯನ ಮುಂದುವರೆಸಿದ ವಿಲಿಯಂ , ಟಾಮಿ ಲೌರಿಟ್‍ಸನ್ ಹಾಗೂ ಆಲ್ಬಿನ್ ಟೂಲೆಸ್ಪ್ರಟ್ ದ್ರವ್ಯ 8ರಲ್ಲೂ ಸ್ಥಿರ ಬೀಜವಿರಲಾರದೆಂದು ತೋರಿಸಿದರು. ಈ ಮೊದಲು ಜಾರ್ಜ್ ಗ್ಯಾಮೋವ್ ದ್ರವ್ಯ 4 ಹೊಂದಿರುವ ಹೀಲಿಯಂಗೆ ನ್ಯೂಟ್ರಾನ್‍ಗಳನ್ನು ಸೇರಿಸುತ್ತಾ ಹೋಗಿ ಉಳಿದೆಲ್ಲಾ ಧಾತುಗಳನ್ನು ಪಡೆಯಬಹುದೆಂದು ಮಹಾ ಬಾಜಣೆಯಾದಾಗ ಹಾಗಾಗಿರುವುದೆಂದು ಸಾರಿದ್ದನು. ಹ್ಯಾನ್ ಸ್ಟಾಬ್, ಹಾಗೂ ವಿಲಿಯಂ ಸಂಗಡಿಗರ ಈ ಹೊಸ ತೀರ್ಮಾನ ಗ್ಯಾವೋವ್‍ನ ಸಿದ್ಧಾಂತಕ್ಕೆ ತೆರೆಯೆಳೆಯಿತು. 1951ರಲ್ಲಿ ವಿಲಿಯಂ ಹಾಗೂ ಸಂಗಡಿಗರೊಂದಿಗೆ ಕೆಲಸ ಮಾಡಲು ಕೆಲ್ಲಾಗ್ ಪ್ರಯೋಗಾಲಯಕ್ಕೆ ಬಂದ ಎಡ್ವಿನ್ ಸಾಲ್ ಪೀಟರ್, ಕೆಂಪು ದ್ರವ್ಯ ಸ್ಥಿತಿಯಲ್ಲಿರುವ ತಾರೆಗಳಲ್ಲಿ ಹೀಲಿಯಂ ಸೇರಿ ಇಂಗಾಲವಾಗುವ ಸಾಧ್ಯತೆಗಳಿರುವುದೇ ಹೊರತು, ಮಹಾ ಬಾಜಣೆಯಲ್ಲಿ ಅಲ್ಲವೆಂದು ತೋರಿಸಿದರು. 1953ರಲ್ಲಿ ಕೆಲ್ಲಾಗ್ ಪ್ರಯೋಗಾಲಯದಿಂದ ಹೊಯ್ಲ್, ಷ್ವಾಷ್ವ್ರ್ಸ್‍ಷಿಲ್ಟ್ ಹಾಗೂ ಅ್ಯಲನ್ ಸ್ಯಾಂಡೇಜ್ ನಡೆಸಿದ ಸಂಶೋಧನೆಗಳು ಇದು ಸರಿಯೆಂದು ತೋರಿಸಿದವು. 1954 ರಲ್ಲಿ ಕೇಂಬ್ರಿಜ್‍ಗೆ ಹೋದ ವಿಲಿಯಂ ಫುಲ್‍ಬ್ರೈಟ್ ಸ್ಕಾಲರ್‍ಷಿಫ್ನಲ್ಲಿ ಕೇಂಬ್ರಿಜ್‍ಗೆ ಹೋಗಿ ಹೊಯ್ಲ್‍ನೊಂದಿಗೆ ಕೆಲಸ ಮಾಡಿದನು. ಈತನೊಂದಿಗೆ ಜೆಫ್ರಿ ಹಾಗೂ ಮಾರ್ಗರೆಟ್ ಬುರ್‍ಬಿಜ್ ಸಹ ಸೇರಿದರು. ಇವರೆಲ್ಲರ ಸಂಘಟಿತ ಅಧ್ಯಯನದ ಫಲವಾಗಿ 1956ರಲ್ಲಿ ತಾರೆಗಳಲ್ಲಿರುವ ಧಾತು ಸಂಶ್ಲೇಷಣೆಯ (ELEMENT SYNTHESIS)ಸಿದ್ಧಾಂತ ಹೊರ ಬಂದಿತು. ಈ ಸಿದ್ಧಾಂತನ್ವಯ ಮಹಾ ಬಾಜಣೆಯಿಂದಾಗಿ ವಿಶ್ವ ಉಗಮಗೊಂಡಾಗ ಸೃಜಿತವಾದ ಹೀಲಿಯಂ ಹಾಗೂ ಜಲಜನಕಗಳು ತಾರೆಗಳಲ್ಲಿ, ಸಂಶ್ಲೇಷಣಿತಗೊಂಡು ಇಂಗಾಲದಿಂದ ಯುರೇನಿಯಂವರೆಗಿನ ಧಾತುಗಳು ಉಗಮಗೊಳ್ಳುತ್ತವೆ. ಇದೇ ಕಾಲಕ್ಕೆ ಏಕಾಂಗಿಯಾಗಿ ಜೆ.ಡಬ್ಲ್ಯೂ ಕ್ಯಾಮೆರಾನ್ ಇಂತಹುದೇ ತೀರ್ಮಾನಗಳಿಗೆ ಬಂದಿದ್ದನು. ತಾರೆಗಳಲ್ಲಿನ ಬೈಜಿಕ ಸಂಶ್ಲೇಷಣಾ ಸಿದ್ಧಾಂತಕ್ಕಾಗಿ ವಿಲಿಯಂ, ಚಂದ್ರಶೇಖರ್ ಸುಬ್ರಹ್ಯಣ್ಯಂ ನೊಂದಿಗೆ 1983ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/12/2019