ಲಿಯೋನ್, ಎಂ.ಲೆಡರ್’ಮನ್ (1922--) ೧೯೮೮
ಅಸಂಸಂ-ಭೌತಶಾಸ್ತ್ರ- ಅತಿವಾಹಕ ಸಿಂಕ್ರೋಟ್ರಾನ್ ನಿರ್ಮಾಣದಲ್ಲಿ ಶ್ರಮಿಸಿದಾತ.
ನ್ಯೂಯಾರ್ಕ್‍ನಲ್ಲಿದ್ದ ಅಗಸನ ಎರಡನೇ ಮಗನಾಗಿ ಲೆಡರ್‍ಮನ್ 15 ಜುಲೈ 1922ರಲ್ಲಿ ನ್ಯೂಯಾರ್ಕ್‍ನಲ್ಲಿ ಜನಿಸಿದನು. ನ್ಯೂಯಾರ್ಕ್‍ನ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಣ ಪಡೆದನು. ಲೆಡರ್‍ಮನ್, ಪದವಿಯಲ್ಲಿ ರಸಾಯನಶಾಸ್ತ್ರವನ್ನು ಪ್ರಮುಖ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದನಾದರೂ, ಸ್ನೇಹಿತರಾದ ಐಸಾಕ್ ಹಾಲ್ಪರ್ನ್ ಮತ್ತು ಮಾರ್ಟಿನ್ ಜೆ.ಕ್ಲೀನ್‍ರ ಸಹವಾಸದಿಂದ ಭೌತಶಾಸ್ತ್ರದಲ್ಲಿ ಅಸಕ್ತಿ ತಳೆದನು. 1943ರಲ್ಲಿ ಪದವಿ ಮುಗಿಸಿ ಮುಂದೆ ಮೂರು ವರ್ಷಗಳ ಕಾಲ ಅಮೆರಿಕೆಯ ಸೇನೆಗೆ ಸೇರಿ, 2ನೇ ಲೆಪ್ಟಿನೆಂಟ್ ಹುದ್ದೆಗೇರಿದನು. 1946ರಲ್ಲಿ, ಕೊಲಂಬಿಯಾದ ಭೌತಶಾಸ್ತ್ರ ಪದವಿ ಶಾಲೆ ಸೇರಿದನು. ಇಲ್ಲಿ ಖ್ಯಾತ ಭೌತಶಾಸ್ತ್ರಜ್ಞ ರಬಿ ಕಾರ್ಯದರ್ಶಿಯಾಗಿದ್ದನು.ಈ ಶಾಲೆ, ಇರ್ವಿಂಗ್‍ಟನ್ ಅನ್ ದಿ ಹಡ್ಸನ್‍ನಲ್ಲಿ ನೌಕಾದಳ ಸಂಶೋಧನಾಲಯದ (ಎನ್‍ಇವಿಐಎಸ್) ನೆರವಿನೊಂದಿಗೆ ಸಿಂಕ್ರೋಸೈಕ್ಲೋಟ್ರಾನ್ ಪ್ರಯೋಗಾಲಯದ ನಿರ್ಮಾಣವನ್ನು ಪ್ರಾರಂಭಿಸಿದ್ದಿತು. 1948ರಲ್ಲಿ ಲೆಡರ್‍ಮನ್ ಈ ಯೋಜನೆಯಲ್ಲಿ ಸೇರಿದನು. ಇಲ್ಲಿ ಸೈಕ್ಲೋಟ್ರಾನ್ ಯೋಜನೆಯ ನಿರ್ದೇಶಕನಾಗಿದ್ದ ಯುಜಿನ್ ಟಿ. ಬೂತ್‍ನ ಕೈಕೆಳಗೆ ದುಡಿಯುವ ಅವಕಾಶ ದಕ್ಕಿತು. ಇಲ್ಲಿ ವಿಲ್ಸನ್ ಮೇಘ ಕೋಠಿಯನ್ನು (CLOUD CHAMBER) ಕುರಿತಾಗಿ ಸಂಪ್ರಂಬಂಧ ಮಂಡಿಸುವಂತೆ ಲೆಡರ್‍ಮನ್‍ಗೆ ಹೇಳಲಾಯಿತು. ರಬಿ, ಜಗದ್ವಿಖ್ಯಾತರಾಗಿದ್ದ ಹಲವಾರು ಜನ ಭೌತವಿಜ್ಞಾನಿಗಳನ್ನು ಸಿಂಕ್ರೋ ಸೈಕ್ಲೋಟ್ರಾನ್ ಯೋಜನೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದನು ರೋಮ್‍ನಲ್ಲಿದ್ದ ಪ್ರಾಧ್ಯಾಪಕ ಗಿಲ್ಬರ್ಟೋ ಬರ್ನಾರ್ಡಿನಿ, ಎಂಐಟಿಯ ಜಾನ್ ಟಿನ್‍ಲೊಟ್ ಬಕ್ರ್ಲೆಯ ಜಾಕ್ ಸ್ವೀನ್‍ಬರ್ಜರ್ ಇವರಲ್ಲಿ ಪ್ರಮುಖರು. 1951ರಲ್ಲಿ ಲೆಡೆರ್‍ಮ್‍ನ್ ಡಾಕ್ಟರೇಟ್ ಗಳಿಸಿದ ಮೇಲೆ, ಇವರಿಗೆ ಸಹಾಯಕನಾಗಿ ಮುಂದುವರೆಯುವ ಅಹ್ವಾನ ಬಂದಿತು. 1958ರಲ್ಲಿ ಪ್ರ್ರಾಧ್ಯಾಪಕನಾಗಿ ಬಡ್ತಿ ಹೊಂದಿದ ಲೆಡರ್‍ಮನ್ ಎಲ್‍ಇಅರ್‍ಎನ ಪಡೆಗೆ ಸೇರಿಕೊಂಡನು 1961 ರಿಂದ 1978ರವರೆಗೆ ನೆವೀಸ್ ಪ್ರಯೋಗಾಲಯದ ನಿರ್ದೇಶಕನಾಗಿದ್ದನು. ಬ್ರೂಕ್ ಹ್ಯಾವೆನ್, ಸಿಇಆರ್‍ಎನ್ ಹಾಗೂಫರ್ಮಿ ಪ್ರಯೋಗಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕನಾಗಿದ್ದನು. 1979ರಲ್ಲಿಫರ್ಮಿ ನ್ಯಾಷನಲ್ ಆ್ಯಕ್ಸಲೇಟರ್ ಲ್ಯಾಬೋರೇಟರಿಯ ನಿರ್ದೇಶಕನಾಗಿ, ಜಗತ್ತಿನ ಮೊಟ್ಟ ಮೊದಲ ಅತಿವಾಹಕ ಸಿಂಕ್ರೋಟ್ರಾನ್ ನಿರ್ಮಾಣಗೊಳಿಸಿದನು. ಕಣ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ಲೆಡರ್‍ಮನ್ ಮೆಲ್ವಿನ್ ಷಾಷತ್ ಹಾಗೂ ಜಾಕ್ ಸ್ಟೀನ್‍ಬರ್ಜರ್ ರೊಂದಿಗೆ ಲೆಡೆರ್‍ಮನ್ 1988ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/18/2020