ರಿಚರ್ಡ್, ಟೇಲರ್ (1929--) ೧೯೯೦
ಕೆನಡಾ-ಭೌತಶಾಸ್ತ್ರ- ಕ್ಷೀಣ ಬೈಜಿಕ ಅಂತಕ್ರಿಯೆಗಳಲ್ಲಿ ಸಾಮ್ಯತೆ ಭಂಗ ಗಮನಿಸಿದಾತ.
ರಿಚರ್ಡ್ 2 ನವೆಂಬರ್ 1929ರಂದು, ಕೆನಡಾದ ಸಾಸ್ಕಾಷೆಲೆನ್ ನದಿ ತೀರದ ಸೌತ್ ವೆಸ್ಟರ್ನ್ ಆಲ್ಬರ್ಟಾ ಎಂಬ ಪುಟ್ಟ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಐರ್ಲೆಂಡ್ ಮೂಲದವರಾಗಿದ್ದರೆ, ತಾಯಿಯ ಪೂರ್ವಜರು ನಾರ್ವೆಯಿಂದ ಅಸಂಸಂಗಳಲ್ಲಿದ್ದು ಅಲ್ಲಿಂದ ಕೆನಡಾಕ್ಕೆ ವಲಸೆ ಬಂದಿದ್ದರು, ರಿಚರ್ಡ್ ವಿದ್ಯಾರ್ಥಿ ಜೀವನದಲ್ಲಿ ಸಾಧಾರಣ ಬುದ್ಧಿವಂತನಾಗಿದ್ದು ಪ್ರೌಢಶಾಲೆಗೆ ಬರುವ ವೇಳೆಗೆ, ಗಣಿತ ಹಾಗೂ ವಿಜ್ಞಾನದಲ್ಲಿ ಸುಧಾರಿಸಿದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ ರಿಚರ್ಡ್ ನೆಲೆಸಿದ್ದ ಪಟ್ಟಣ ತೀವ್ರ ಸೇನಾ ಚಟುವಟಿಕೆಗಳ ಕೇಂದ್ರವಾಗಿದ್ದಿತು. ಇದರಿಂದ ಸಿಡಿಮದ್ದು, ಅಸ್ತ್ರಗಳ ಬಗೆಗೆ ಬಾಲಕನಾಗಿದ್ದ ರಿಚರ್ಡ್‍ಗೆ ಅತ್ಯಾಸಕ್ತಿ ಮೂಡಿತು. ಜಾಗತಿಕ ಯುದ್ದದ ಅಂತ್ಯದಲ್ಲಿ ಹಿರೋಷಿಮಾ ನಾಗಸಾಕಿಗಳ ಮೇಲೆ ಹಾಕಿದ ಬೈಜಿಕಾಸ್ತ್ರ ಅದರಿಂದಾದ ಪರಿಣಾಮಗಳಿಂದ ರಿಚಡ್ರ್ಸ್‍ಗೆ ಭೌತಶಾಸ್ತ್ರದ ದಿಗಂತಗಳು ಗೋಚರಿಸತೊಡಗಿದವು. ಪ್ರೌಢಶಾಲೆಯಲ್ಲಿ ಕೆಲವು ವಿಷಯಗಳಲ್ಲಿ ಬಹು ಸಾಧಾರಣ ಅಂಕಗಳನ್ನು ಗಳಿಸಿದ್ದರಿಂದ ರಿಚರ್ಡ್ ಬಹು ಪ್ರಯಾಸದಿಂದ ಎಡ್ಮಂಟನ್‍ನಲ್ಲಿರುವ ಆಲ್ಬರ್ಟಾ ವಿಶ್ವವಿದ್ಯಾಲಯ ಸೇರಿದನು. ಪದವಿ ವ್ಯಾಸಂಗದಲ್ಲಿರುವಾಗ ಪ್ರಯೋಗ ಭೌತಶಾಸ್ತ್ರದಲ್ಲಿ ಪರಿಣಿತಿ ಗಳಿಸಿ ನಂತರ ಸ್ನಾತಕೋತ್ತರ ಪದವಿಯನ್ನು ಪೂರೈಸಿದನು. ಪದವಿಯ ಕಾಲದಲ್ಲಿ ದಕ್ಕಿದ ರಜಾ ದಿನಗಳನ್ನು ರಕ್ಷಣಾ ಇಲಾಖೆಯ ಪ್ರಯೋಗಾಲಯದಲ್ಲಿ ಕಳೆದನು. ಇಲ್ಲಿ ಮಾರ್ಗದರ್ಶಕನಾಗಿದ್ದ ಇ.ಜೆ.ಹಿಗ್ಗಿನ್ಸ್ ವಿದ್ಯಾಭ್ಯಾಸವನ್ನು ಇನ್ನು ಮುಂದುವರೆಸುವಂತೆ ರಿಚಡ್ರ್ಸ್‍ನನ್ನು ಪ್ರೋತ್ಸಾಹಿಸಿದನು. ಅಸಂಸಂಗಳಿಗೆ ಹೋಗಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯ ಸೇರಿದಾಗ, ಅಲ್ಲಿ ಫೆಲಿಕ್ಸ್ ಬ್ಲಾಖ್, ಲಿಯೋನಾರ್ಡ್ ಷಿಫ್, ವಿಲ್ಲೀಸ್ ಲ್ಯಾಂಬ್‍ರವರಿಂದ ಕ್ರಿಯಾಶೀಲವಾಗಿದ್ದಿತು. ಇಲ್ಲಿ ರಾಬರ್ಟ್ ಎಫ್ಮೋಝ್ಲೆಯ ಮಾರ್ಗದರ್ಶನದಲ್ಲಿ ಪೈ-ಮೆಸಾನ್‍ಗಳ ಉತ್ಪಾದನೆಯನ್ನು ಕುರಿತಾಗಿ ರಿಚರ್ಡ್ ಸಂಶೋಧನೆ ಕೈಗೊಂಡನು. 1958ರಲ್ಲಿ ಪ್ಯಾರಿಸ್‍ನ ಎಕೊಲೆ ನಾರ್ಮಲೆಯಲ್ಲಿ ಸ್ಥಾಪಿಸಿದ್ದ ಸರೇಖೀಯ ವೇಗೋತ್ಕರ್ಷಗಳಲ್ಲಿ ಪ್ರಯೋಗಗಳನ್ನು ನಡೆಸಲು ಬಂದ ಆಹ್ವಾನವನ್ನು ರಿಚಡ್ರ್ಸ್ ಒಪ್ಪಿಕೊಂಡನು. ಇಲ್ಲಿ ಮೂರು ವರ್ಷಗಳ ಕಾಲವಿದ್ದ ರಿಚರ್ಡ್ 1961ರಲ್ಲಿ ಅಸಂಸಂಗಳಿಗೆ ಮರಳಿ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ಲಾರೆನ್ಸ್ ಬಕ್ರ್ಲೆ ಪ್ರಯೋಗಾಲಯ ಸೇರಿದನು. ಮುಂದಿನ ಒಂದು ದಶಕದ ಕಾಲ ರಿಚಡ್ರ್ಸ್ ಹಲವಾರು ಬಗೆಯ ಎಲೆಕ್ಟ್ರಾನ್ ಚದುರಿಕೆಯ ಸಾಧನಗಳ ನಿರ್ಮಾಣದಲ್ಲಿ ಭಾಗಿಯಾದನು. 1971ರಲ್ಲಿ ಗುಗೆನ್‍ಹೀಮ್ ಫೆಲೋಷಿಫ್ಪಡೆದು ಸಿ.ಇ.ಆರ್.ಎನ್‍ನಲ್ಲಿ ಕೆಲಸಮಾಡಿದನು. ಇದಕ್ಕೂ ಮೊದಲು ಕೆಲಕಾಲ ವೈದ್ಯುತ್ ಕಾಂತೀಯ ಅಂತ:ಕ್ರಿಯೆಗಳ ಅವ್ಯತ್ಯಸ್ತ ಗುಣ ಲಕ್ಷಣಗಳ (INVARIANT CHARACTERISTICS) ಅಧ್ಯಯನ ನಿರತನಾಗಿದ್ದನು. 1981ರಲ್ಲಿ ಅಲೆಕ್ಸಾಂಡರ್ ವಾನ್‍ಹಮ್ ಬೋಲ್ಡ್‍ಟ್ ಪ್ರಶಸ್ತಿ ಪಡೆದು ಎರಡು ವರ್ಷ ಹ್ಯಾಂಬರ್ಗ್‍ನಲ್ಲಿ ಸಂಶೋಧನೆ ಮುಂದುವರೆಸಿದನು. 1975ರಲ್ಲಿ ಧೃವೀಕೃತ ಎಲೆಕ್ಟ್ರಾನ್ ಪಡೆಯುವ ಹೊಸ ವಿಧಾನವನ್ನು ಕೊಲಂಬೋದಲ್ಲಿದ್ದ ಇ.ಎಲ್.ಗಾರ್ವಿನ್ ತಂಡ ರೂಪಿಸಿತು. ಇದನ್ನು ಅನುಸರಿಸಿ, ರಿಚಡ್ರ್ಸ್ ಹಾಗೂ ಸಂಗಡಿಗರು 1978ರಲ್ಲಿ ಕ್ಷೀಣ ಬೈಜಿಕ ಅಂತಕ್ರಿಯೆಗಳ ಸಿದ್ಧಾಂತಗಳು ಮುನ್ಸೂಚನೆ ನೀಡಿದಂತಹ ಸಾಮ್ಯತೆ (PARITY) ಭಂಗ ಗಮನಿಸಿದರು. ಪ್ರೋಟಾನ್ ಹಾಗೂ ಬದ್ಧ ನ್ಯೂಟ್ರಾನ್‍ಗಳ ಮೇಲೆ, ಎಲೆಕ್ಟ್ರಾನ್‍ಗಳ ಸ್ಥಿತಿಸ್ಥಾಪನಾರಹಿತ ಚದುರಿಕೆ ಕುರಿತಾದಂತೆ ರಿಚರ್ಡ್ ನಡೆಸಿದ ಸಂಶೋಧನೆಗಳಿಗಾಗಿ 1990ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಇದು ಕಣ ಭೌತಶಾಸ್ತ್ರದಲ್ಲಿ ಕ್ವಾರ್ಕ್ ಮಾದರಿ ಅಭಿವೃದ್ದಿಪಡಿಸಲು ನೆರವಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020