ರೋಹ್‍ರೆರ್, ಹೀನ್‍ರಿಖ್ (1933--) ೧೯೮೬
ಸ್ವಿಟ್ಸಲ್ಯಾಂಡ್-ಭೌತಶಾಸ್ತ್ರ –ಕ್ರಮಕ್ಷೇಪನ ಸುರಂಗ (SCANNING TUNNEL) ಸೂಕ್ಷ್ಮ ದರ್ಶಕದ ಉಪಜ್ಞೆಕಾರ.
ರೋಹ್‍ರೆರ್ 1963ರಲ್ಲಿ ಜೂರಿಕ್‍ನಲ್ಲಿನ ಐಬಿಎಂ ಶಾಖೆಯಲ್ಲಿ ವೃತ್ತಿಗೆ ಸೇರಿದನು. 1978ರಲ್ಲಿ ಗೆರ್ಡ್ ಬಿನ್ನಿಂಗ್ ಸಹ ಇಲ್ಲಿಗೆ ಸೇರ್ಪಡೆಗೊಂಡನು. ವಾಷಿಂಗ್ಟನ್‍ನ ನ್ಯಾಷನಲ್ ಬ್ಯುರೋ ಆಫ್ ಸ್ಟ್ಯಾಂಡರ್ಡ್‍ನಲ್ಲಿ, ರಸೆಲ್ ಯಂಗ್ ವಿಶಿಷ್ಟ ಬಗೆಯ ಸೂಕ್ಷ್ಮ ದರ್ಶಕದ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದನು. ಇದನ್ನು ರೋಹ್‍ರೆರ್ ಹಾಗೂ ಬಿನ್ನಿಂಗ್ ಮುಂದುವರೆಸಿದರು. 1981ರ ವೇಳೆಗೆ ಇವರು ನಿರ್ಮಿಸಿದ ಹೊಸ ಬಗೆಯ ಸೂಕ್ಷ್ಮದರ್ಶಕ ಒಂಟಿ ಪರಮಾಣುವಿನ ಮೂವತ್ತನೇ ಒಂದು ಭಾಗವನ್ನು ಗುರುತಿಸುವಷ್ಟು ಪ್ರಬಲವಾಗಿದ್ದಿತು. ಈ ಹೊಸ ಸೂಕ್ಷ್ಮ ದರ್ಶಕದಿಂದ ಅರೆ ವಾಹಕಗಳ ಮೇಲ್ಮೈ ಸ್ಥಿತಿ , ರಾಸಾಯನಿಕ ಕ್ರಿಯೆಗಳ ಅಧ್ಯಯನ ಜೀವ ರಾಸಾಯನಿಕ ಶಾಸ್ತ್ರದಲ್ಲಿ ಅಣುಗಳ ಸಂರಚನೆ ತಿಳಿಯಲು ಸಾಧ್ಯ. ಹೊಸದಾಗಿ ಹೊರ ಹೊಮ್ಮುತ್ತಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ರಂಗಗಳಲ್ಲಿ ಈ ಸೂಕ್ಷ್ಮ ದರ್ಶಕ ವ್ಯಾಪಕವಾಗಿ ಬಳಕೆಯ ಸ್ಥಾನ ಗಿಟ್ಟಿಸುತ್ತಿದೆ. ರೋಹರ್, ಬಿನ್ನಿಂಗ್ ಹಾಗೂ ರಸ್ಕ್ 1986ರ ನೊಬೆಲ್ ಪ್ರಶಸ್ತಿ ಪುರಸ್ಕೃತರಾದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019