ರಸ್ಕ್ , ಎರ್ನ್‍ಸ್ಟ್ ,ಆಗಸ್ಟ್ ಫ್ರೆಡೆರಿಕ್
ಜರ್ಮನಿ-ಭೌತಶಾಸ್ತ್ರ- ಪಾರಗಮನ ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ಮುಂಚೂಣಿಗ.
ಸೂಕ್ಷ್ಮದರ್ಶಕ, ದೂರದರ್ಶಕಗಳು ಅಭಿಜಾತ ವಿಜ್ಜಾನಕ್ಕೆ ತಂದಂತಹ ಕ್ರಾಂತಿಕಾರಕ ಬದಲಾವಣೆಗಳನ್ನು ರಸ್ಕ್’ನ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಆಧುನಿಕ ತಂದಿದೆ. ಇದನ್ನು ಮೊದಲಿಗೆ ಉಪಜ್ಞಿಸಿದವರು ಯಾರೆಂಬ ಬಗ್ಗೆ ವಾದ ವಿವಾದಗಳಿವೆಯಾದರೂ, ರಸ್ಕ್ ಇದಕ್ಕಾಗಿ 1986ರನೊಬೆಲ್ ಪ್ರಶಸ್ತಿ ಪಡೆದನು. ರಸ್ಕ್ ಮ್ಯೂನಿಕ್ ಹಾಗೂ ಬರ್ಲಿನ್‍ಗಳಲ್ಲಿ ಅಧಿಕ ವಿಭವದಲ್ಲಿನ ನಿರ್ವಾತದ ಪರಿಣಾಮಗಳನ್ನು ಕುರಿತು ಅಧ್ಯಯನ ಮಾಡಿದನು. 1920ರವೇಳೆಗೆ ಎಲೆಕ್ಟ್ರಾನ್‍ಗಳು ಕಣಗಳಂತೆ ಮಾತ್ರವಲ್ಲದೆ ಅನುಗುಣವಾದ ಸನ್ನಿವೇಶಗಳಲ್ಲಿ ಅಲೆಗಳಂತೆಯೂ ವರ್ತಿಸುವುವೆಂದು ಖಚಿತಗೊಂಡಿದ್ದಿತು. ಎಚ್.ಬುಷ್ ಪೀನಮಸೂರ ಬೆಳಕನ್ನು ಕೇಂದ್ರೀಕರಿಸುವಂತೆ, ಕಾಂತೀಯ ಸುರುಳಿಯಲ್ಲಿ ಎಲೆಕ್ಟ್ರಾನ್‍ಗಳನ್ನು ನಾಭೀಕರಿಸಬಹುದೆಂದು ತೋರಿಸಿದ್ದನು. ಇದರ ಆಧಾರದ ಮೇಲೆ ಆಗ ಬರ್ಲಿನ್‍ನಲ್ಲಿ ವಿದ್ಯಾರ್ಥಿಗಳಾಗಿದ್ದ ರಸ್ಕ್ ಹಾಗೂ ಎಂ. ಕ್ರೂಲ್ 17ಪಟ್ಟು ಸಾಮಥ್ರ್ಯದ ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ನಿರ್ಮಿಸಿದರು. 1933ರಲ್ಲಿ ರಸ್ಕ್ ಇದನ್ನು ಸುಧಾರಿಸಿ, 12000 ಪಟ್ಟು ಹಿಗ್ಗಿಸಿ ತೋರಿಸಬಲ್ಲ ಸಾಮಥ್ರ್ಯದ ಸೂಕ್ಷ್ಮ ದರ್ಶಕ ತಯಾರಿಸಿದನು. ಇದನ್ನು 1938ರಲ್ಲಿ ವಾಣಿಜ್ಯ ಬಳಕೆಗಾಗಿ ಬಿಡುಗಡೆಗೊಳಿಸಿದನು. ಜಿ. ಆರ್ ರುಡೆನ್ ಬರ್ಗ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಏಕಸ್ವಾಮ್ಯ ಪಡೆದಿದ್ದನು. ಹಾಗಾಗಿ ರಸ್ಕ್‍ನ ಉತ್ಪನ್ನಗಳಿಗೆ ವಿರುದ್ಧವಾಗಿ ನ್ಯಾಯಾಲಯದ ತೀರ್ಮಾನಗಳು ಹೊರಬಂದವಾದರೂ, ಜರ್ಮನಿಯಲ್ಲಿ ರಸ್ಕ್‍ನ ಆದ್ಯತೆಗಳಿಗೆ ಧಕ್ಕೆ ಬರಲಿಲ್ಲ. ಫಿÛೀಮನ್ ಹಾಗೂ ಹಲ್ಸ್‍ಕೆ ಕಂಪನಿಗಳು ರಸ್ಕ್‍ಗೆ ಬೆಂಬಲ ನೀಡಿದವು. ಮಾರ್ಪಾಡಾದ ಬೇಕರಿಯೊಂದರಲ್ಲಿ ಹೆಚ್ಚಿನ ಸಂಶೋಧನೆ ಮುಂದುವರೆಸಿದವು. ಎರಡನೇ ಜಾಗತಿಕ ಯುದ್ದದಲ್ಲಿ, ಜರ್ಮನಿ ಸೋಲುಂಡು, ರಷ್ಯಾದ ವಶವಾದಾಗ ರಷ್ಯಾದ ಸೇನೆ ಇದನ್ನು ಕೊಳ್ಳೆ ಹೊಡೆಯಿತು. ಸಾಧಾರಣ ಸೂಕ್ಷ್ಮ ದರ್ಶಕದ ಸಾಮಥ್ರ್ಯ 2000ಪಟ್ಟು ಇದ್ದರೆ, ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ಸಾಮಥ್ರ್ಯ 100000 ಪಟ್ಟಿರುತ್ತದೆ. ರಸ್ಕ್ , ರೋಹ್‍ರರ್, ಜಿ ಬಿನ್ನಿಂಗ್ ಜೊತೆಗೆ 1978ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದ ಅಣುಗಳ ಮಟ್ಟದ ವೀಕ್ಷಣೆ ಸಾಧ್ಯ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/28/2020