ಜೆರೋಮ್, ಫ್ರೀಡ್‍ಮನ್ (1930--) ೧೯೯೦
ಅಸಂಸಂ-ಭೌತಶಾಸ್ತ್ರ-ಮ್ಯೂಯಾನ್ ಶೈಥಿಲ್ಯದಲ್ಲಿನ (DECAY) ಸಾಮ್ಯತೆ (PARITY) ಭಂಗವನ್ನು ಪತ್ತೆ ಹಚ್ಚಿದಾತ.
ಜೆರೋಮ್‍ನ ತಂದೆ, ಲಿಲಿಯನ್ ಫ್ರೀಡ್’’ಮನ್ 1913ರಲ್ಲಿ ರಷ್ಯಾದಿಂದ ಅಸಂಸಂಗಳಿಗೆ ವಲಸೆ ಬಂದು, ನೆಲೆಸಿದ್ದನು. ಮೊದಲನೆ ಜಾಗತಿಕ ಯುದ್ದದಲ್ಲಿ ಅಮೆರಿಕಾದ ಫಿರಂಗಿ ದಳದಲ್ಲಿ ಸೇವೆ ಸಲ್ಲಿಸಿದ್ದನು. 28 ಮಾರ್ಚ್ 1930 ರಂದು ಚಿಕಾಗೋದಲ್ಲಿ ಜೆರೋಮ್‍ನ ಜನನವಾಯಿತು. ಜೆರೋಮ್ ತಂದೆ, ತಾಯಿಗಳಿಗೆ ಹೆಚ್ಚಿನ ಔಪಚಾರಿಕ ಶಿಕ್ಷಣವಿರಲಿಲ್ಲವಾದರೂ ಸ್ವಯಂ ಸಾಮಥ್ರ್ಯದಿಂದ, ರಾಜಕೀಯ , ವಿಜ್ಞಾನಗಳಲ್ಲಿ ಆಸಕ್ತಿ ಗಳಿಸಿದ್ದರಲ್ಲದೆ, ಅತ್ಯುತ್ತಮ ಗ್ರಂಥ ಭಂಡಾರವನ್ನು ಸಹ ಹೊಂದಿದ್ದರು. ತಮ್ಮ ಮಕ್ಕಳು ಉತ್ತಮ ವಿದ್ಯೆ ಪಡೆಯಬೇಕೆಂದು ಹಂಬಲಿಸಿ ಅದಕ್ಕಾಗಿ ಅಪಾರ ಪರಿಶ್ರಮ ಪಟ್ಟರು. ಜೆರೋಮ್ ಪ್ರೌಢಶಾಲೆಯಲ್ಲಿರುವಾಗ ಐನ್‍ಸ್ಟೀನ್‍ರ ಸಾಪೇಕ್ಷ ಸಿದ್ಧಾಂತ ಕುರಿತಾದ ಸಣ್ಣದಾದ ಪುಸ್ತಕವನ್ನು ಓದಿ, ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದನು. ಭೌತಶಾಸ್ತ್ರದ ಪದವಿಗಾಗಿ ಜೆರೋಮ್ ಚಿಕಾಗೋ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಎರ್ನಿಕೊಫರ್ಮಿ ಬೋಧಕನಾಗಿದ್ದನು. 1950ರಲ್ಲಿ ಭೌತಶಾಸ್ತ್ರದ ಪದವಿ 1953ರಲ್ಲಿ ಸ್ನಾತಕೋತ್ತರ ಪದವಿ ಹಾಗೂ 1956ರಲ್ಲಿ ಡಾಕ್ಟರೇಟ್ ಗಳಿಸಿದ ಜೆರೋಮ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎರ್ನಿಕೊ ಫರ್ಮಿಯ ನೇತೃತ್ವದಲ್ಲಿ ಜರುಗುತ್ತಿದ್ದ ಭೌತಶಾಸ್ತ್ರದ ಚಟುವಟಿಕೆಗಳನ್ನು ಕಂಡು ಪುಳಕಿತನಾದನು. ಜೆರೋಮ್ ಎರ್ನಿಕೋಫರ್ಮಿಯ ಮಾರ್ಗದರ್ಶನದಲ್ಲಿ ಪ್ರೋಟಾನ್ ಧೃವೀಕರಣ ಅಧ್ಯಯನ ಪ್ರರಂಭಿಸಿದನು. ಆದರೆ 1954ರಲ್ಲಿ ಫರ್ಮಿ ಮೃತನಾದ ನಂತರ ಜಾನ್ ಮಾರ್ಷಲ್‍ನ ಕೈ ಕೆಳಗೆ ಸೇರಿದನು. ಡಾಕ್ಟರೇಟ್ ಗಳಿಸಿದ ನಂತರ ಜೆರೋಮ್ ಚಿಕಾಗೋ “ವಿಶ್ವವಿದ್ಯಾಲಯದ ಬೈಜಿಕ ಉತ್ಸರ್ಜನೆ (NUCLEAR EMMISSION) ಪ್ರಯೋಗಾಲಯದಲ್ಲಿ ವ್ಯಾಲ್ ಟೆಲೆಗ್ಡ್‍ಯೊಂದಿಗೆ ಮ್ಯೂಯಾನ್ ಶೈಥಿಲ್ಯದಲ್ಲಿನ ಸಾಮ್ಯತೆ ಭಂಗವನ್ನು ಪತ್ತೆ ಹಚ್ಚಿದನು. ಇದನ್ನು ಈ ಮೊದಲೇ ಟಿ.ಡಿ. ಲೀ ಹಾಗೂ ಸಿ.ಎನ್ ಯಾಂಗ್ ಸೂಚಿಸಿದ್ದನಾದರೂ, ಪ್ರಯೋಗಗಳಿಂದ ಇದನ್ನು ವೀಕ್ಷಿಸಿದ ಮೊದಲಿಗರೆಂಬ ಕೀರ್ತಿ ಜೆರೋಮ್ ಹಾಗೂ ವ್ಯಾಟ್ ಟೆಲೆಗ್ಡ್‍ಗೆ ದಕ್ಕಿತು. 1957ರಲ್ಲಿ ಜೆರೋಮ್ ಸ್ಟ್ಯಾನ್’ಫೋರ್ಡ್’, ವಿಶ್ವವಿದ್ಯಾಲಯದ ಹೈ ಎನರ್ಜಿ ಫಿಸಿಕ್ಸ್ ಲ್ಯಾಬ್‍ನಲ್ಲಿ ಸಂಶೋಧನೆ ನಡೆಸುತ್ತಿದ್ದ ಹಾಫ್ಸ್ಟ್ಯಾಡರ್ ತಂಡದ ಸಂಶೋಧಕ ಸಹಾಯಕನಾದನು. ಎಲೆಕ್ಟ್ರಾನ್, ಡ್ಯುಟೆರಾನ್‍ಗಳ ಚದುರಿಕೆಯಲ್ಲಿನ ರೋಹಿತದ ವಿಕಿರಣಶೀಲ ವ್ಯಾಪ್ತಿಗೆ ಬೇಕಾದ ತಿದ್ದುಪಡಿಯ ವಿಧಾನವನ್ನು ಜೆರೋಮ್ ಸೂಚಿಸಿದನು. ಹೆನ್ರಿ ಕೆಂಡಾಲ್ ಸ್ವತಂತ್ರವಾಗಿ ಇಂತಹುದೆ ಪ್ರಯತ್ನದಲ್ಲಿ, ಇದೇ ಕಾಲದಲ್ಲಿ ಯಶಸ್ವಿಯಾಗಿದ್ದನು. 1960ರಲ್ಲಿ ಎಂ.ಐ.ಟಿಗೆ ಸೇರಿದ ಜೆರೋಮ್, ಡೇವಿಡ್ ರಿಟ್‍ಸನ್‍ನ ಸಂಶೋಧನಾ ತಂಡದ ಸದಸ್ಯನಾದನು. 1980ರಲ್ಲಿ ಎಂಐಟಿಯ ಬೈಜಿಕ ವಿಜ್ಞಾನ ವಿಭಾಗದ ನಿರ್ದೇಶಕನಾದ ಜೆರೋಮ್ ಎಲೆಕ್ಟ್ರಾನ್ ನಿರ್ಮೂಲಕಗಳ ನಿರ್ಮಾಣದಲ್ಲಿ ಭಾಗವಹಿಸಿದನು. 1990ರಲ್ಲಿ ಜೆರೋಮ್ ಹೆನ್ರಿ ಕೆಂಡಾಲ್ ಹಾಗೂ ರಿಚರ್ಡ್ ಟೇಲರ್‍ರೊಂದಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019